More

    ಆಸ್ಪತ್ರೆಯ ಟಾಯ್ಲೆಟ್​ನಲ್ಲಿ ಆಕ್ಸಿಜನ್​ ಪೈಪ್​ನಿಂದ ನೇಣು ಬಿಗಿದುಕೊಂಡು ಸತ್ತ ಕರೊನಾ ರೋಗಿ!

    ಮುಂಬೈ: ಕರೊನಾ ರೋಗಿಯೊಬ್ಬ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಆಸ್ಪತ್ರೆಯ ಟಾಯ್ಲೆಟ್​ನಲ್ಲೇ ರೋಗಿ ಆಕ್ಸಿಜನ್​ ಪೈಪ್​ ಬಳಸಿ ನೇಣು ಬಿಗಿದುಕೊಂಡಿರುವುದು ವರದಿಯಾಗಿದೆ.

    ನಾಗ್ಪುರದ ಸರ್ಕಾರಿ ಆಸ್ಪತ್ರೆಗೆ ಕೆಲ ದಿನಗಳ ಹಿಂದೆ 81 ವರ್ಷದ ವೃದ್ಧರೊಬ್ಬರು ದಾಖಲಾಗಿದ್ದರು. ಅವರಲ್ಲಿ ಕರೊನಾ ದೃಢವಾದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರದಂದು ಆಸ್ಪತ್ರೆಯ ಟಾಯ್ಲೆಟ್​ಗೆ ಹೋದ ಅವರು ಅಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

    ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಹೆಚ್ಚುತ್ತಿದೆ. ನಾಗ್ಪುರದಲ್ಲಿ ಸೋಂಕು ವಿಪರೀತವಾಗಿ ಹೆಚ್ಚಿದೆ. ಸರ್ಕಾರ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಒಂದೇ ಬೆಡ್​ನಲ್ಲಿ ಇಬ್ಬಿಬ್ಬರು ರೋಗಿಗಳನ್ನು ಮಲಗಿಸಿರುವ ಫೋಟೋಗಳು ವೈರಲ್​ ಆಗಿವೆ. (ಏಜೆನ್ಸೀಸ್​)

    ಜೋಳ ಬೇಯಿಸಲು ಹೋಗಿ ಸುಟ್ಟು ಕರಕಲಾದ ಪುಟಾಣಿಗಳು!

    ಸ್ನಾನ ಮಾಡಿ ಸಂತಾನಾಭಿವೃದ್ಧಿಗೆ ಕೂರುತ್ತವೆ ಏಡಿಗಳು! ಅಚ್ಚರಿ ತರಿಸುವ ವಿಚಾರಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts