More

    ಸೋಂಕಿದ್ದರೂ ಶಿಶುವಿಗೆ ಹಾಲುಣಿಸಲು ಅವಕಾಶ

    ಬೆಂಗಳೂರು: ಕರೊನಾ ಸೋಂಕಿತ ಮಹಿಳೆ ಸುರಕ್ಷಿತ ನಿಯಮಗಳನ್ನು ಪಾಲಿಸುವ ಮೂಲಕ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡಿಸುವ ಅವಕಾಶವಿದೆ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

    ಸೋಂಕಿಗೆ ಒಳಗಾದ ಮಹಿಳೆ ಮಗುವಿನ ಸಂಪರ್ಕಕ್ಕೆ ಬರುವ ಮೊದಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತಾನಿರುವ ಕೊಠಡಿಯನ್ನು ಸೋಂಕು ನಿವಾರಕ ಬಳಸಿ ಸ್ವಚ್ಛಗೊಳಿಸಬೇಕು. ಬಟ್ಟೆ ಸೇರಿ ಬಳಸುವ ವಸ್ತುವಿನ ಬಗ್ಗೆಯೂ ಎಚ್ಚರವಹಿಸಬೇಕು. ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಈ ಎಲ್ಲ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದ ನಂತರ ತಾಯಿ ಮಗುವಿಗೆ ಎದೆಹಾಲು ನೀಡಬಹುದಾಗಿದೆ ಎಂದು ತಿಳಿಸಿದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ವೈರಾಣು ಹರಡುತ್ತದೆ. ಇದರಿಂದ ಗರ್ಭದಲ್ಲಿರುವ ಮಗುವಿಗೆ ಸೋಂಕು ತಗುಲಿರುವ ಪ್ರಕರಣಗಳು ಈವರೆಗೂ ಕಂಡು ಬಂದಿಲ್ಲ. ಸೋಂಕಿತ ಮಹಿಳೆ ಸ್ತನಪಾನ ಮಾಡಿಸುವುದರಿಂದ ಮಗುವಿಗೆ ಸೋಂಕು ತಗುಲಿರುವುದು ಸಹ ವರದಿಯಾಗಿಲ್ಲ. ಹೀಗಾಗಿ ಸೋಂಕಿತ ಮಹಿಳೆ ತನ್ನ ಶಿಶುವಿಗೆ ಸುರಕ್ಷಿತವಾಗಿ ಸ್ತನಪಾನ ಮಾಡಿಸಲು ಅವಕಾಶ ಮಾಡಿಕೊಡು ಬೇಕೆಂದು ಸೂಚಿಸಲಾಗಿದೆ. ಒಂದೊಮ್ಮೆ, ಸೋಂಕಿತ ತಾಯಿ ತೀವ್ರ ಅನಾರೋಗ್ಯ ಸಮಸ್ಯೆ ಹೊಂದಿದ್ದರೆ ಅಕೆಯಿಂದ ಹಾಲು ಪಡೆದು ನೀಡುವುದು ಇಲ್ಲವೆ ದಾನಿಯ ಹಾಲು ಪಡೆದು ನೀಡುವ ಪರ್ಯಾಯ ವ್ಯವಸ್ಥೆ ಮಾಡಬಹುದು ಎಂದು ಸಲಹೆ ನೀಡಿದೆ.

    ಇದನ್ನೂ ಓದಿ: ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ

    ಗರ್ಭಿಣಿಯರಿಗೆ ಎಚ್ಚರಿಕೆ ಕ್ರಮಗಳು: ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಗರ್ಭಿಣಿಯರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬಾರದು, ತಪ್ಪದೆ ಮಾಸ್ಕ್ ಧರಿಸಬೇಕು. ಆಗಾಗ ಕೈಗಳನ್ನು ಸಾಬೂನಿಂದ ತೊಳೆದುಕೊಳ್ಳಬೇಕು. ಕೆಮ್ಮುವಾಗ ಹಾಗೂ ಸೀನುವಾಗ ಕರವಸ್ತ್ರ ಬಳಸಬೇಕು. ಪದೇಪದೆ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳಬಾರದು. ವೈದ್ಯರ ಸಲಹೆ ಪಡೆಯದೆ ಯಾವುದೇ ಔಷಧ ಸೇವಿಸಬಾರದು. ಸಾಮಾನ್ಯ ಉಸಿರಾಟದ ಸಮಸ್ಯೆ, ಶೀತ, ಮೂಗು ಸೋರುವಿಕೆ, ಗಂಟಲು ನೋವು, ಕೆಮ್ಮು, ತಲೆನೋವು, ಜ್ವರ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಬೇಕು ಎಂದು ಇಲಾಖೆ ತಿಳಿಸಿದೆ.

    ಚೀನಾ-ಭಾರತ ಸಂಘರ್ಷ: ಭಾರತದ 20 ಯೋಧರು ಹುತಾತ್ಮ, 40ಕ್ಕೂ ಹೆಚ್ಚು ಚೀನಾ ಯೋಧರೂ ಹತರಾಗಿರುವ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts