More

    ಕರೊನಾ ಹಿನ್ನೆಲೆಯಲ್ಲಿ ಪ್ರೀಮಿಯಂ ಪಾವತಿಸಲು ಎಲ್‌ಐಸಿ ಪಾಲಿಸಿದಾರರಿಗೆ ಹೆಚ್ಚುವರಿ ಕಾಲಾವಕಾಶ

    ಮುಂಬಯಿ: ಕರೊನಾ ಹಾವಳಿಯ ಹಿನ್ನೆಲೆಯಲ್ಲಿ ಎಲ್‌ಐಸಿ ಪಾಲಿಸಿದಾರರು ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಪಾವತಿಸಬೇಕಾದ ಪ್ರೀಮಿಯಂ ಕಟ್ಟಲು 30 ದಿನಗಳ ಕಾಲಾವಕಾಶವನ್ನು ಜೀವವಿಮಾ ನಿಗಮ ನೀಡಿದೆ.

    ಮಾರ್ಚ್ 22 ರ ನಂತರ ಗ್ರೇಸ್ ಅವಧಿ ಮುಕ್ತಾಯವಾಗುತ್ತಿರುವ ಫೆಬ್ರವರಿಯ ಪ್ರೀಮಿಯಂಗಳಿಗೆ ಏಪ್ರಿಲ್ 15ರವರೆಗೆ ಕಾಲಾವಕಾಶವಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ಮೂಲಕವೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರೀಮಿಯಂ ಪಾವತಿಸಬಹುದು. ಎಲ್ಐಸಿ ಪೇ ಡೈರೆಕ್ಟೃ್ ಆ್ಯಪ್ ಮೂಲಕವೂ ಪ್ರೀಮಿಯಂ ಪಾವತಿಸಬಹುದು ಎಂದು ಎಲ್‌ಐಸಿ ತಿಳಿಸಿದೆ.

    ಕರೊನಾದಿಂದ ಸಾವು ಉಂಟಾಗಿದ್ದರೆ ಅಂಥ ಪಾಲಿಸಿದಾರರ ಕುಟುಂಬಸ್ಥರ ಕ್ಲೇಮ್‌ಗಳನ್ನು ತುರ್ತು ಆಧಾರದ ಮೇಲೆ ಇತ್ಯರ್ಥ ಮಾಡಲಾಗುತ್ತದೆ. ಕರೊನಾ ಈಗಾಗಲೇ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಅದರಲ್ಲಿ ಎಲ್‌ಐಸಿ ಪಾಲಿಸಿದಾರರಿದ್ದರೆ ಅಂಥವರ ಕುಟುಂಬಗಳನ್ನು ಪತ್ತೆ ಹಚ್ಚಲು ಎಲ್ಐಸಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಒದಗಿಸಿದ ಪಟ್ಟಿಗಳ ಆಧಾರದ ಮೇಲೆ ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲಾಗುವುದು. 16 ವರ್ಷದೊಳಗಿನ ಪಾಲಿಸಿದಾರರು ಕರೊನಾದಿಂದ ಮೃತಪಟ್ಟಿದ್ದಲ್ಲಿ ಅಂಥವರ ಕುಟುಂಬಕ್ಕೆ ತಡಮಾಡದೆ ಕ್ಲೇಮು ಇತ್ಯರ್ಥಗೊಳಿಸಲಾಗುತ್ತಿದೆ ಎಂದು ಹೇಳಿದೆ.

    ಸೂಕ್ತ ವಾಹನ ವ್ಯವಸ್ಥೆಯಿಲ್ಲದೇ ಮಗು ಸಾವು: ಆಂಬುಲೆನ್ಸ್​ ನೀಡಲು ನಿರಾಕರಣೆ, ಕಣ್ಣೀರಿಡುತ್ತಾ ಮೃತದೇಹ ಹೊತ್ತು ನಡೆದ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts