More

    ದೇಶದಲ್ಲಿ ಕೊನೆಗೂ ತಗ್ಗಿತು ಕರೊನಾ ವೈರಸ್‌ನ ವೇಗ…

    ನವದೆಹಲಿ: ಕರೊನಾ ಸೋಂಕು ತನ್ನ ಪಸರಿಸುವಿಕೆಯ ವೇಗವನ್ನು ತಗ್ಗಿಸಿರುವುದು ಇದೀಗ ಗಮನಕ್ಕೆ ಬಂದಿದೆ. ಸೋಮವಾರ 70 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ ಒಂದು ತಿಂಗಳಲ್ಲಿ ಏಕದಿನ ಕನಿಷ್ಠ ದಾಖಲೆಯಾಗಿದೆ. ಆಗಸ್ಟ್ 31ರಂದು 68 ಸಾವಿರ ಜನರಿಗೆ ಸೋಂಕು ದೃಢವಾಗಿತ್ತು. ಅದರ ನಂತರ ಸೋಂಕು ಶರವೇಗದಲ್ಲಿ ಪಸರಿಸಿತ್ತು.

    ಆಗಸ್ಟ್ ಮೊದಲ ವಾರದಲ್ಲಿ 700-750 ಸೋಂಕಿತರು ದಿನವೊಂದರಲ್ಲಿ ಮೃತರಾಗುತ್ತಿದ್ದರು. ನಂತರ ಪ್ರತಿ ದಿನ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ. 24 ಗಂಟೆಗಳಲ್ಲಿ 85 ಸಾವಿರ ಜನರು ಗುಣಮುಖರಾಗಿದ್ದು, ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 51 ಲಕ್ಷಕ್ಕೆ ಏರಿದೆ. 9.50 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಒಟ್ಟಾರೆ ಮೃತರ ಸಂಖ್ಯೆ 96 ಸಾವಿರಕ್ಕೂ ಅಧಿಕವಾಗಿದೆ.

    ಇದನ್ನೂ ಓದಿ: ಶರ್ಮಾ ಐಪಿಎಸ್ ನಮ್ ಮನೆಗೆ ಕಾಫಿ ಕುಡಿಯೋಕೆ ಬಂದ್ರೆ ಈ ಅವಾಂತರ ನಿರೀಕ್ಷಿಸಿರಲಿಲ್ಲ : ಟಿವಿ ನಿರೂಪಕಿ

    ದೇಶದಲ್ಲಿ ಆಗಸ್ಟ್ ತಿಂಗಳ ವೇಳೆಗೆ 10 ವರ್ಷ ಮೇಲ್ಪಟ್ಟವರಲ್ಲಿ 15 ಜನರಿಗೆ ಒಬ್ಬರು ಕರೊನಾ ಸೋಂಕಿಗೆ ತುತ್ತಾಗಿದ್ದರು ಎಂದು ಭಾತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್ ) ತಿಳಿಸಿದೆ. ರಾಷ್ಟ್ರೀಯ ಎರಡನೇ ಸಿರೋ ಸಮೀಕ್ಷೆಯಿಂದಾಗಿ ಈ ವಿಚಾರ ಬೆಳಕಿಗೆ ಬಂದಿದೆ. ಆಗಸ್ಟ್ 17ರಿಂದ ಸೆಪ್ಟೆಂಬರ್ 22ರವರೆಗೆ 29 ಸಾವಿರಕ್ಕೂ ಅಧಿಕ ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಶೇ. 6.6. ಜನರಲ್ಲಿ ಕರೊನಾ ಪ್ರತಿಕಾಯಗಳು ಕಾಣಿಸಿಕೊಂಡಿವೆ. ಹಳ್ಳಿಗಳಲ್ಲಿ ಕರೊನಾ ಪ್ರಮಾಣದ ದುಪ್ಪಟ್ಟು ಪ್ರಮಾಣ ನಗರದಲ್ಲಿ ವರದಿಯಾಗಿದೆ. ನಗರದ ಬೇರೆ ಭಾಗಗಳಲ್ಲಿ ವರದಿಯಾದ ಪ್ರಮಣದ ದುಪ್ಪಟ್ಟು ಪ್ರಮಾಣ ಕೊಳಗೇರಿಗಳಲ್ಲಿ ವರದಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಜಾಮೀನಿಗೆ ಅರ್ಜಿ ಹಾಕುವುದಿಲ್ಲ, ನನ್ನನ್ನು ಗಲ್ಲಿಗೇರಿಸಿದರೂ ಸರಿ: ಉಮಾಭಾರತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts