More

    ಯೋಜನೆ ಜಾರಿಗೊಳಿಸಲು ಸರ್ಕಾರಗಳಿಗೆ ಆದೇಶಿಸಲಾಗದು: ಸುಪ್ರೀಂಕೋರ್ಟ್​

    ನವದೆಹಲಿ: ಸರ್ಕಾರದ ನೀತಿ – ನಿಯಮಗಳನ್ನು ಪರಿಶೀಲಿಸಲು ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿ ಸೀಮಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

    ಇದನ್ನೂ ಓದಿ: ಅರ್ಧರಾತ್ರಿಯಲ್ಲಿ ಸಂಪೂರ್ಣ ಕಾಶಿ ಸುತ್ತಿದ ಪ್ರಧಾನಿ.. ನಿಶಾಚರಿಯಂತೆ ಮೋದಿ ಸಂಚರಿಸಿದ್ದಕ್ಕೆ ಹೀಗಿದೆ ಕಾರಣ..!

    ಹಸಿವಿಂದ ಬಳಲುತ್ತಿರುವ ಚಿಕ್ಕ ಮಕ್ಕಳು ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. ಅಂತವರಿಗಾಗಿ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸುವ ಯೋಜನೆ ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.

    ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ನ್ಯಾಯಾಲಯಗಳು ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ಯೋಜನೆಗಳನ್ನು ರೂಪಿಸುವ ಹಕ್ಕು ಸರ್ಕಾರಗಳಿಗೆ ಇದೆ. ಕಲ್ಯಾಣ ಯೋಜನೆಗಳ ವಿಷಯದಲ್ಲಿ ನ್ಯಾಯಾಲಯಗಳು ಆಡಳಿತಕ್ಕೆ ಸಲಹೆಗಾರರಲ್ಲ. “ಉತ್ತಮ ಅಥವಾ ಪರ್ಯಾಯ ಯೋಜನೆಗಳು ಅಸ್ತಿತ್ವದಲ್ಲಿವೆ ಎಂಬ ಆಧಾರದ ಮೇಲೆ ಯಾವುದೇ ನೀತಿ ಅಥವಾ ಯೋಜನೆಯನ್ನು ಅನುಷ್ಠಾನಗೊಳಿಸದಂತೆ ನ್ಯಾಯಾಲಯಗಳು ರಾಜ್ಯಗಳಿಗೆ ಆದೇಶಿಸುವಂತಿಲ್ಲ.” ಎಂದು ಪೀಠ ಹೇಳಿದೆ.

    ಯೋಜನೆಗಳ ಅನುಷ್ಠಾನದ ಬಗ್ಗೆ ನಿರ್ಧರಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ಸಾಮಾಜಿಕ ಕಾರ್ಯಕರ್ತರಾದ ಅನುನ್ ಧವನ್, ಇಶಾನ್ ಸಿಂಗ್ ಮತ್ತು ಕುನಾಜನ್ ಸಿಂಗ್ ಅವರು ಹಸಿವು ಮತ್ತು ಅಪೌಷ್ಟಿಕತೆಯನ್ನು ಎದುರಿಸಲು ಸಮುದಾಯ ಅಡುಗೆ ಮನೆಗಳ ಯೋಜನೆಯನ್ನು ರಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಪಿಐಎಲ್​ ಅನ್ನು ಸಲ್ಲಿಸಿದ್ದರು.

    ಐದು ವರ್ಷದೊಳಗಿನ ನೂರಾರು ಮಕ್ಕಳು ಹಸಿವು ಮತ್ತು ಅಪೌಷ್ಟಿಕತೆಯಿಂದ ಪ್ರತಿದಿನ ಸಾಯುತ್ತಿದ್ದಾರೆ ಮತ್ತು ಈ ಪರಿಸ್ಥಿತಿಯು ನಾಗರಿಕರ ಬದುಕುವ ಹಕ್ಕು ಸೇರಿದಂತೆ ವಿವಿಧ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

    ಮಾಡೆಲ್‌ ತಾನಿಯಾ ಸಿಂಗ್‌ ಕೊನೆಯ ಕರೆ ಹೋಗಿದ್ದು ಸ್ಟಾರ್‌ ಕ್ರಿಕೆಟಿಗನಿಗೆ.. ಆ ಐಪಿಎಲ್‌ ಆಟಗಾರನಿಗೆ ಜಾರಿಯಾಯ್ತು ಸಮನ್ಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts