More

    ಉದ್ರೇಕಕಾರಿ ಫೋಟೋ, ವಿಡಿಯೋ ಮೂಲಕ ಯುವಕರಿಗೆ ಬಲೆ ಬೀಸುತ್ತಿದ್ದ ಕಿಲಾಡಿ ಲೇಡಿಯ ಕರಾಳ ಕತೆಯಿದು!

    ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಅಪ್​ಲೋಡ್​ ಮಾಡುವ​ ಮೂಲಕ ಯುವಕರನ್ನು ಬಲೆಗೆ ಕೆಡವಿ ವಂಚನೆ ಮಾಡುತ್ತಿದ್ದ ಖತರ್ನಾಕ್​ ದಂಪತಿಯನ್ನು ಹೈದರಾಬಾದ್​ನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಪರಾಸ ತನುಶ್ರೀ (23) ಮತ್ತು ಪರರಾಸ ರವಿತೇಜ (32) ಎಂದು ಗುರುತಿಸಲಾಗಿದೆ. ಇವರು ಪ್ರಕಾಶಂ ಜಿಲ್ಲೆಯ ಗಿಡ್ಡಲೂರು ಮೂಲದವರು. ಇಬ್ಬರು ಲಿವಿಂಗ್​ ಟುಗೆದರ್​ನಲ್ಲಿದ್ದಾರೆ. ತನುಶ್ರೀ ಹೆಸರಲ್ಲಿ ಅನೇಕ ಇನ್​ಸ್ಟಾಗ್ರಾಂ ಐಡಿಯನ್ನು ತೆರೆದು, ಮನಸೆಳೆಯುವ ಫೋಟೋ ಮತ್ತು ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿದ್ದರು. ಈ ಮೂಲಕ ಯುವಕರನ್ನೇ ಟಾರ್ಗೆಟ್​ ಮಾಡುತ್ತಿದ್ದರು. ತಮ್ಮನ್ನು ಸಂಪರ್ಕಿಸಿದವರ ಜೊತೆ ಬಣ್ಣದ ಮಾತಗಳನ್ನಾಡುತ್ತಿದ್ದ ತನುಶ್ರೀ, ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಹಣ ಪಡೆಯುತ್ತಿದ್ದಳು. ತನುಶ್ರೀಯ ಸೌಂದರ್ಯಕ್ಕೆ ಮಾರು ಹೋಗಿ ಅನೇಕ ಯುವಕರು ಹಣ ಕಳೆದುಕೊಂಡಿದ್ದಾರೆ.

    ಉದ್ರೇಕಕಾರಿ ಫೋಟೋ, ವಿಡಿಯೋ ಮೂಲಕ ಯುವಕರಿಗೆ ಬಲೆ ಬೀಸುತ್ತಿದ್ದ ಕಿಲಾಡಿ ಲೇಡಿಯ ಕರಾಳ ಕತೆಯಿದು!

    ಹೀಗೆ ತನುಶ್ರೀಯಿಂದ ಮೋಸ ಹೋದ ಯುವಕನೊಬ್ಬ ದೂರು ದಾಖಲಿಸಿದ್ದು, ಎಂಟು ತಿಂಗಳ ಹಿಂದೆ Instagram ನಲ್ಲಿ ತನುಶ್ರೀಯನ್ನು ಭೇಟಿಯಾಗಿದನಂತೆ. ಚಾಟಿಂಗ್​ ಮಾಡುತ್ತಾ ಪರಿಚಯ ಪ್ರೇಮಕ್ಕೆ ತಿರುಗಿದ ಬಳಿಕ ತನುಶ್ರೀ ಮದುವೆಯಾಗುವುದಾಗಿ ನಂಬಿಸಿದಳಂತೆ. ಇಬ್ಬರು ಮದುವೆಗೆ ಒಪ್ಪಿದ ಮೇಲೆ ಹಂತ ಹಂತವಾಗಿ ತಾಯಿಯ ಅನಾರೋಗ್ಯ ಸೇರಿದಂತೆ ಅನೇಕ ಕಾರಣಗಳನ್ನು ನೀಡಿ ದೂರುದಾರನಿಂದ 31 ಲಕ್ಷ ರೂ.ಗಳನ್ನು ತನುಶ್ರೀ, ತನ್ನ ಗಂಡನ ಜೊತೆ ಸೇರಿ ಲೂಟಿ ಮಾಡಿದ್ದಾರೆ.

    ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇಬ್ಬರೂ ಸೇರಿ ಇನ್‌ಸ್ಟಾಗ್ರಾಂ ಪೇಜ್‌ಗಳ ಮೂಲಕ ಅನೇಕರಿಗೆ ಭಾರಿ ಮೊತ್ತದ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

    ಓದಿದ್ದು 8ನೇ ತರಗತಿ ಆದ್ರೆ ವೈದ್ಯೆಯನ್ನೇ ಪಟಾಯಿಸಿದ ಈತನ ಹಿಸ್ಟರಿ ನೋಡಿ ದಂಗಾದ ಪೊಲೀಸರು!

    ಕ್ಯಾಪಿಟಲ್​ ಗಲಭೆ ಪ್ರಕರಣ: ಟ್ರಂಪ್​ ವಿರುದ್ಧ ಕಿಮಿನಲ್​ ಪ್ರಕರಣಕ್ಕೆ ಶಿಫಾರಸು, ಮಾಜಿ ಅಧ್ಯಕ್ಷರ ಅಕ್ರೋಶ

    ಉಪಾಹಾರ ಕೊಟ್ಟಿದ್ದ ದಲಿತರ ಮಕ್ಕಳಿಗೆ ಉಚಿತ ಶಿಕ್ಷಣ: ಗ್ರಾಮವಾಸ್ತವ್ಯದಲ್ಲಿ ಭೇಟಿ ನೀಡಿದ್ದ ಮನೆಯ ವಿದ್ಯಾರ್ಥಿಗಳಿಗೆ ಸೌಲಭ್ಯ; ಸಚಿವ ಅಶೋಕ್ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts