More

    296 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದ ದಂಪತಿ-ಮಗ; ಭೂಕಂಪದ 12 ದಿನಗಳ ಬಳಿಕ ಜೀವಂತ ರಕ್ಷಣೆ

    ಟರ್ಕಿ: ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಸಂಭವಿಸಿ ದಿನಗಟ್ಟಲೆ ಆದ ಬಳಿಕವೂ ಜೀವ ಬಿಗಿಹಿಡಿದುಕೊಂಡು ಬದುಕುಳಿದವರನ್ನು ರಕ್ಷಿಸುವ ಕೆಲಸವಾಗುತ್ತಿದ್ದು, ಇದೀಗ ಅಂಥ ಇನ್ನೊಂದು ಪ್ರಕರಣ ವರದಿಯಾಗಿದೆ. ಭೂಕಂಪವಾದ 12 ದಿನಗಳ ಬಳಿಕ ದಂಪತಿ ಹಾಗೂ ಬಾಲಕನನ್ನು ಜೀವಂತ ರಕ್ಷಣೆ ಮಾಡಲಾಗಿದೆ.

    ಇಲ್ಲಿನ ಕಿರ್ಗಿಸ್ತಾನದಲ್ಲಿ ಸಮೀರ್ ಮುಹಮ್ಮದ್ ಅಖರ್​ (49), ಆತನ ಪತ್ನಿ ರಗಡಾ (40) ಮತ್ತು 12 ವರ್ಷದ ಪುತ್ರನನ್ನು ರಕ್ಷಣಾ ತಂಡದವರು ಜೀವಂತ ರಕ್ಷಣೆ ಮಾಡಿದ್ದಾರೆ. ಅಪಾರ್ಟ್​ಮೆಂಟ್​ವೊಂದರ ಅವಶೇಷಗಳಡಿ ಸಿಲುಕಿಕೊಂಡ ಇವರು 12 ಗಂಟೆಗಳ ಕಾಲ ಜೀವ ಬಿಗಿಹಿಡಿದುಕೊಂಡಿದ್ದರು. ಅಂದರೆ ಭೂಕಂಪವಾಗಿ 296 ಗಂಟೆಗಳ ಬಳಿಕ ಇವರು ರಕ್ಷಿಸಲ್ಪಟ್ಟಿದ್ದಾರೆ.

    ಶನಿವಾರ ಇವರನ್ನು ಇಲ್ಲಿ ರಕ್ಷಿಸಲಾಗಿದೆ ಎಂದು ಟರ್ಕಿಶ್ ಮಾಧ್ಯಮವೊಂದು ವರದಿ ಮಾಡಿದೆ. ರಕ್ಷಣೆ ಮಾಡಿದ ಬೆನ್ನಿಗೇ ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಗ ಅಲ್ಲಿ ಕೊನೆಯುಸಿರೆಳೆದ. ಅಲ್ಲದೆ ಈ ಮೂವರನ್ನು ರಕ್ಷಿಸಲಾದ ಅದೇ ಜಾಗದಲ್ಲಿ ಇನ್ನೆರಡು ಮಕ್ಕಳ ಶವ ಪತ್ತೆಯಾಗಿದ್ದು, ಅವರಿಬ್ಬರೂ ಇದೇ ದಂಪತಿಯ ಮಕ್ಕಳು ಎಂಬುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಕುಡಿಯಲು, ತಿನ್ನಲು ಏನೂ ಇರದೆ ತಮ್ಮದೇ ಮೂತ್ರ ಕುಡಿದು ಬದುಕುಳಿದೆವು ಎಂಬುದಾಗಿ ಮುಹಮ್ಮದ್ ಆಸ್ಪತ್ರೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾನೆ.

    ತಮ್ಮದೇ ಮೂತ್ರ ಕುಡಿದು ಜೀವ ಉಳಿಸಿಕೊಂಡ ಸಹೋದರರು; ಭೂಕಂಪದ ಅವಶೇಷಗಳಡಿ 1 ವಾರ ಜೀವನ್ಮರಣ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts