More

    ಮಂಗಳೂರು ಮೂಲದ ವೈದ್ಯರಿಂದ ದೇಶದ ಮೊದಲ ಶ್ವಾಸಕೋಶ ಕಸಿ

    ಮಂಗಳೂರು: ಕೋವಿಡ್ ಬಾಧಿಸಿದ್ದಲ್ಲದೆ ಶ್ವಾಸಕೋಶದಲ್ಲಿ ಗಡ್ಡೆಗಳುಂಟಾಗುವ ಅಪರೂಪದ ಸಾರ್ಕೊಡೊಸಿಸ್ ಎನ್ನುವ ಕಾಯಿಲೆಗೆ ಮಂಗಳೂರು ಮೂಲದ ವೈದ್ಯರೊಬ್ಬರು ಯಶಸ್ವಿಯಾಗಿ ದೇಶದಲ್ಲೇ ಮೊದಲ ಎರಡೂ ಶ್ವಾಸಕೋಶಗಳ ಕಸಿ ನಡೆಸಿದ್ದಾರೆ.

    ಚಂಡಿಗಢ ಮೂಲದ ರೋಗಿ ರಿಜ್ವಾನ್ ಎಂಬವರು ಕೋವಿಡ್‌ಗೆ ಒಳಗಾಗಿದ್ದಲ್ಲದೆ ಇದೇ ಕಾರಣಕ್ಕೆ ಅವರ ಎರಡೂ ಶ್ವಾಸಕೋಶಗಳೂ ಫೈಬ್ರೋಸಿಸ್ ಗಡ್ಡೆಯಿಂದ ಬಾಧಿತವಾಗಿದ್ದವು. ಶ್ವಾಸಕೋಶ ಹಾನಿಯಾಗಿದ್ದರಿಂದ ಜೀವನ್ಮರಣ ಹೋರಾಟದಲ್ಲಿದ್ದ ರೋಗಿಯ ಲಂಗ್ಸ್ ಟ್ರಾನ್ಸ್‌ಪ್ಲಾಂಟ್ ಮಾಡುವುದಷ್ಟೇ ಜೀವ ಉಳಿಸುವ ಮಾರ್ಗವಾಗಿತ್ತು. ಪ್ರಸ್ತುತ ದೇಶದ ಮುಂಚೂಣಿಯ ಹೃದಯ-ಶ್ವಾಸಕೋಶ ಶಸ್ತ್ರಕ್ರಿಯಾ ತಜ್ಞರಲ್ಲೊಬ್ಬರಾದ ಡಾ.ಸಂದೀಪ್ ಅತ್ತಾವರ ಅವರು ಈ ಕ್ಲಿಷ್ಟಕರ ಸರ್ಜರಿ ನಡೆಸುವ ಜವಾಬ್ದಾರಿ ಹೊತ್ತುಕೊಂಡರು.

    ಅದೃಷ್ಟವಷಾತ್ ರೋಗಿಗೆ ಅಗತ್ಯವಿದ್ದ ಹಾಗೂ ಸೂಕ್ತ ಹೊಂದಾಣಿಕೆಯಾಗುವ ಶ್ವಾಸಕೋಶ ಕೊಲ್ಕತ್ತಾದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಲಭ್ಯವಾಯಿತು. ಅಲ್ಲಿಂದ ವಿಮಾನ ಮೂಲಕ ಶ್ವಾಸಕೋಶಗಳನ್ನು ಹೈದರಾಬಾದ್‌ನ ಕಿಮ್ಸ್ (ಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಆಸ್ಪತ್ರೆಗೆ ತರಲಾಯಿತು. ಯಾವುದೇ ರೀತಿಯಲ್ಲಿ ತಪ್ಪಾಗದಂತೆ ಯಶಸ್ವಿಯಾಗಿ ಶಸ್ತ್ರಕ್ರಿಯೆ ಕೈಗೊಳ್ಳಲಾಯಿತು.

    ಡಾ.ಸಂದೀಪ್ ಅವರ ಪಾಲಕರು ಮೂಲತಃ ಮಂಗಳೂರಿನವರಾಗಿದ್ದು, ನಗರದ ಅತ್ತಾವರ ನಿವಾಸಿಗಳಾಗಿದ್ದರು. ಕೇರಳದಲ್ಲಿ ವಿದ್ಯಾಭ್ಯಾಸ ಮಾಡಿರುವ ಡಾ.ಸಂದೀಪ್ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲೂ 2000ರಿಂದ 2002ರ ವರೆಗೆ ಚೀಫ್ ಕಾರ್ಡಿಯಾಕ್ ಆಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಮಣಿಪಾಲ ಹಾರ್ಟ್ ಫೌಂಡೇಶನ್, ನಾರಾಯಣ ಹೃದಯಾಲಯಗಳಲ್ಲೂ ಕಾರ್ಯ ನಿರ್ವಹಿಸಿದ್ದರು.

    ಡ್ರಗ್ ಪೆಡ್ಲರ್ ಅನೂಪ್​ಗೆ ಶಾಕ್ ನೀಡಲು ‘ಇಡಿ’ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts