More

    ಯುವಕರಲ್ಲಿದೆ ದೇಶದ ಶಕ್ತಿ

    ಹೊಸಪೇಟೆ: ತತ್ವಜ್ಞಾನಿಗಳಾದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು. ನಗರದ ವಿಜಯನಗರ ಕಾಲೇಜ್‌ನಲ್ಲಿ ಶುಕ್ರವಾರ ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯುಎಸಿ, ಎನ್‌ಸಿಸಿ ರೇಂಜರ್ ಅಂಡ್ ರೋವರ್ಸ್ ಜಂಟಿಯಾಗಿ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಸ್ವಾಮಿ ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಿ

    ದೇಶದ ಶಕ್ತಿ ಯುವ ಶಕ್ತಿಯಲ್ಲಿ ಅಡಗಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಬಹುಮುಖ್ಯವಾಗಿದೆ. ಹಾಗಾಗಿ ಯುವಕರು ಕೌಶಲ ಬೆಳೆಸಿಕೊಂಡು, ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು. ಎಲ್ಲ ರಂಗಗಳಲ್ಲಿ ಯುವಕರಿಗೆ ವಿಫುಲ ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರು ಓದಿನ ಕಡೆಗೆ ಗಮನ ಹರಿಸಬೇಕು. ಖಾಸಗಿ ಹಾಗೂ ಸರ್ಕಾರಿ ಹಾಗೂ ಸ್ವಯಂ ಉದ್ಯೋಗದ ಕಡೆಗೆ ಯುವಕರು ಗಮನಹರಿಸಬೇಕು. ಕೌಶಲ ಇದ್ದರೆ ಉದ್ಯೋಗವೂ ದೊರೆಯಲಿದೆ ಎಂದರು.

    ಇದನ್ನೂ ಓದಿ: ಅಪ್ರಾಪ್ತರು ವಾಹನ ಓಡಿಸಿದ್ರೆ ಪಾಲಕರಿಗೆ ಶಾಸ್ತಿ -ಎಎಸ್ಪಿ ವಿಜಯಕುಮಾರ್ ಎಚ್ಚರಿಕೆ -ಸಂಚಾರ ಅರಿವು ಕಾರ್ಯಕ್ರಮ 

    ಕಾಲೇಜಿನ ಅಧ್ಯಕ್ಷ ಅಸುಂಡಿ ನಾಗರಾಜಗೌಡ ಅಧ್ಯಕತೆ ವಹಿಸಿದ್ದರು. ಶಾರದಾಶ್ರಮದ ಮಾತಾ ಪ್ರಮೋದಾಮಯಿ ಸ್ವಾಮಿ ವಿವೇಕಾನಂದರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭಾರತ ರೆಡ್ ಕ್ರಾಸ್ ಕಾರ್ಯದರ್ಶಿ ಅನ್ನಪೂರ್ಣಮ್ಮ ಪ್ರಾಸ್ತಾವಿಕ ಮಾತನಾಡಿದರು. ಪೊಲೀಸ್ ಪೇದೆ ಶೇಖರ್ ಗೌಡ ಅವರು ಸಂಚಾರಿ ನಿಯಮಗಳ ಕುರಿತು ಉಪನ್ಯಾಸ ನೀಡಿದರು.
    ಕಾಲೇಜಿನ ಪ್ರಾಚಾರ್ಯ ಸುಭಾಷ್ ಟಿ., ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ವೀರೇಶ್.ಟಿ.ಎಂ., ರವಿಕಿರಣ್.ಡಿ, ಭಾರತ್ ರೆಡ್ ಕ್ರಾಸ್ ಅಧಿಕಾರಿಗಳಾದ ರವಿಶಂಕರ್, ಶ್ರೀನಿವಾಸ್, ಎನ್‌ಸಿಸಿ ಅಧಿಕಾರಿಗಳಾದ ಪ್ರಭುಸ್ವಾಮಿ.ಟಿ.ಎಂ, ರೇಂಜರ್ ಅಂಡ್ ರೋವರ್ಸ್ ಅಧಿಕಾರಿ ಶಿವಮಲ್ಲಿಕಾರ್ಜುನ, ಅಭಿನಂದನ್ ಜೋಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts