More

    ದೇಶಕ್ಕೆ ಸರ್ವಕಾಲಕ್ಕೂ ಸಲ್ಲುವ ಸಂವಿಧಾನ

    ದೇವದುರ್ಗ: ದೇಶದ ಭದ್ರತೆ, ಏಕತೆ ಹಾಗೂ ಪ್ರಜಾಪ್ರಭುತ್ವಕ್ಕೆ ಆಧಾರವಾಗಿರುವ ಸಂವಿಧಾನವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ನಿವೃತ್ತ ಶಿಕ್ಷಣಾಧಿಕಾರಿ ಹನುಮಂತಪ್ಪ ಗವಾಯಿ ಹೇಳಿದರು.

    ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸಭಾಂಗಣದಲ್ಲಿ ಸಮತಾ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳ ನಡೆ, ಸಂವಿಧಾನ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಸರ್ವ ಕಾಲಕ್ಕೂ ದೇಶಕ್ಕೆ ಪ್ರಸ್ತುತ ಎನಿಸುವ ಸಂವಿಧಾನ ನೀಡಿದ್ದಾರೆ ಎಂದರು.

    ಯೋಚನೆ, ಯೋಜನೆಗಳ ಅರ್ಥ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ತಿಳಿಯಬೇಕಿದೆ. ಜಗತ್ತಿನಲ್ಲಿ ಕೆಲವರು ಪರೋಪಕಾರಿಯಾಗಿ ಜನಹಿತಕ್ಕಾಗಿ ಜೀವ ಸವಿಸಿ ಮಹಾತ್ಮರು ಎನಿಸಿಕೊಂಡಿದ್ದಾರೆ. ಸಹಭಾಗಿತ್ವದ ಜೀವನ, ವೈಚಾರಿಕ ವಿಚಾರ, ಸಂದೇಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾಗಿದೆ.
    ಸಂವಿಧಾನದ ಒಳ ವಿಚಾರಗಳು, ಆಡಳಿತ ವ್ಯವಸ್ಥೆ, ಸಮಬಾಳು, ಸಮಪಾಲು, ಸಮಾನತೆ ಸೇರಿ ಅನೇಕ ಸದ್ವಿಚಾರಗಳು ಬಹುತೇಕರಿಗೆ ತಿಳಿದಿಲ್ಲ ಎಂದು ಹನುಮಂತಪ್ಪ ಗವಾಯಿ ತಿಳಿಸಿದರು. ಪ್ರಾಚಾರ್ಯ ರಂಗಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿ, ವಕೀಲ ಮರಿಲಿಂಗಪ್ಪ ಕೋಳೂರು, ಕಾರ್ಯಕ್ರಮದ ಸಂಚಾಲಕ ಬಸವರಾಜ ಬ್ಯಾಗವಾಟ, ಶ್ರೀದೇವಿ, ಎಂ.ಆರ್.ಭೇರಿ, ಜೆ.ಶರಣಪ್ಪ ಬಲ್ಲಟಗಿ, ನರಸಿಂಗರಾವ್ ಸರ್ಕಿಲ್, ಸಣ್ಣಪ್ಯಾಟೆಪ್ಪ ಮಸರಕಲ್, ಬಸವರಾಜ ನಾಗರಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts