More

    ಬೆಂಬಲ ಬೆಲೆ ನಿಧಿಯೇ ಇವರಿಗೆ ಆದಾಯ; ಕೃಷಿ ಮಾರಾಟ ಮಂಡಳಿಯಲ್ಲಿ 50 ಕೋಟಿ ರೂ.ವಂಚನೆ; ಮೂವರ ಸೆರೆ

    ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ ವಂಚನೆ ಪ್ರಕರಣದ ಸೂತ್ರದಾರ ವಿಜಯ್ ಆಕಾಶ್ ಸೇರಿ ಮೂವರು ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
    ಚೆನ್ನೈ ನಿವಾಸಿ ವಿಜಯ ಆಕಾಶ್(57), ಪ್ರೇಮ್​ರಾಜ್(32), ದಿನೇಶ್ ಬಾಬು(30) ಬಂಧಿತರು.

    ಮೂವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಂಚನೆ ಪ್ರಕರಣದ ಇನ್ನಷ್ಟು ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿಜಯ್ ಆಕಾಶ್ ಎಂಬಾತನ ವಿರುದ್ಧ ಹೈದರಾಬಾದ್, ತಿರುಪತಿ, ಕೊಯಮತ್ತೂರಿನಲ್ಲಿ ಪ್ರಕರಣ ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

    ಇದನ್ನೂ ಓದಿ; ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…! 

    ರಾಜ್ಯ ರೈತರಿಗೆ ಮಾರುಕಟ್ಟೆಯಲ್ಲಿ ಕೃಷಿ ಉತ್ಪಾದನೆಗಳ ದರದಲ್ಲಿ ನಷ್ಟವಾದ ಸಂದರ್ಭದಲ್ಲಿ ಸರ್ಕಾರವು ಬೆಂಬಲ ಬೆಲೆ ಒದಗಿಸುವ ನಿಟ್ಟಿನಲ್ಲಿ ಆವರ್ತ ನಿಧಿಯನ್ನು (ರಿವಾಲ್ವಿಂಗ್ ಫಂಡ್) ಇಡಲಾಗಿತ್ತು. 2019ನೇ ಸಾಲಿನ ನವೆಂಬರ್‌ನಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿದ್ದ ಹೆಚ್ಚುವರಿ 100 ಕೋಟಿ ರೂ.ಗಳನ್ನು ಸಿಂಡಿಕೇಟ್ ಬ್ಯಾಂಕ್ ಉತ್ತರಹಳ್ಳಿ ಶಾಖೆಗೆ 1 ವರ್ಷದ ಅವಧಿಗೆ ಶೇ.6ರಂತೆ ನಿಶ್ಚಿತ ಠೇವಣಿಗಾಗಿ ವರ್ಗಾವಣೆ ಮಾಡಲಾಗಿತ್ತು. 50 ಕೋಟಿ ರೂಗಳನ್ನು ನಕಲಿ ಅಧಿಕಾರಿಯ ಹೆಸರಿನಲ್ಲಿ ಠೇವಣಿಯಿಟ್ಟು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಮಂಡಳಿಯ ಡಿಜಿಎಂ ಮತ್ತಿತರರು ಶಾಮೀಲಾಗಿ ತಮಿಳುನಾಡು ಮೂಲದ ಬ್ಯಾಂಕ್‌ವೊಂದರ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು.

    1,400ಪುಟಗಳ ಚಾಜ್೯ಶೀಟ್: ಪ್ರಕರಣಕ್ಕೆ ಸಂಬಂಧಿಸಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಬಿ ಈ ಪ್ರಕರಣದ ತನಿಖೆ ವಹಿಸಿಕೊಂಡು ಒಟ್ಟು 15 ಆರೋಪಿಗಳನ್ನು ಬಂಧಿಸಿ ಕಳೆದ ಏಪ್ರಿಲ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಪ್ರಕರಣದಲ್ಲಿ ಉತ್ತರಹಳ್ಳಿ ಶಾಖೆಯ ಸಹಾಯಕ ವ್ಯವಸ್ಥಾಪಕ, ಖಜಾನೆ ನಿವೃತ್ತ ಅಧಿಕಾರಿ ಲಕ್ಷ್ಮಯ್ಯ ಅವರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಲಾಗಿದ್ದು, 1,400 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

    9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts