More

    ಕರೊನಾ​: ಹಿಂದಿನ ದಾಖಲೆ ಮೀರಿದ ಭಾರತ- ಶೇ.50 ಚೇತರಿಕೆ

    ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಒಂದೇ ದಿನ 13,586 ಕರೊನಾ ಸೋಂಕು ಪ್ರಕರಣದ ದಾಖಲಾಗಿದೆ. ಇದು ಒಂದೇ ದಿನದಲ್ಲಿ ಭಾರತದಲ್ಲಿ ದಾಖಲಾಗಿರುವ ಇಲ್ಲಿಯವರೆಗೆ ಅತಿ ಹೆಚ್ಚಿನ ಸಂಖ್ಯೆ ಎನ್ನಲಾಗಿದೆ.

    ಈ ಮೂಲಕ ಭಾರತದಲ್ಲಿ 3,80,532 ಸೋಂಕಿತರು ಇಲ್ಲಿಯವರೆಗೆ ಪತ್ತೆಯಾಗಿದ್ದಾರೆ. ಈ ಆಘಾತಕಾರಿ ವಿಷಯದ ನಡುವೆಯೇ ಇನ್ನೊಂದು ಸಂತಸದ ಸುದ್ದಿಯೂ ಇದೆ. ಅದೇನೆಂದರೆ. ಭಾರತದ ಜನಸಂಖ್ಯೆಗೆ ಹೋಲಿಸಿದ್ದರೆ ಸೋಂಕಿತರ ಸಂಖ್ಯೆಯ ಪ್ರಮಾಣ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿದ್ದರೂ, ಇನ್ನೊಂದೆಡೆ, ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಸೋಂಕಿನಿಂದ ಚೇತರಿಕೆ ಆಗುತ್ತಿರುವವರ ಪ್ರಮಾಣವೂ ಅಷ್ಟೇ ವೇಗದಲ್ಲಿ ಹೆಚ್ಚಿದೆ.

    ಇಲ್ಲಿಯವರೆಗೆ ಸೋಂಕಿತರಾಗಿರುವ 3,80,532 ಪೈಕಿ 2,04,711 ಮಂದಿ ಕರೊನಾ ವೈರಸ್​ನಿಂದ ಚೇತರಿಕೆಗೊಂಡಿದ್ದು, 1,63,248 ಕೇಸ್‌ಗಳು ಸಕ್ರಿಯವಾಗಿದೆ.

    ಇದನ್ನೂ ಓದಿ: ಕುಟುಂಬದೊಳಗೆ ಕರೊನಾ ಸುಲಭವಾಗಿ ಹರಡುತ್ತೆ: ಅಧ್ಯಯನ ವರದಿಯಲ್ಲಿದೆ ಸ್ಪೋಟಕ ಮಾಹಿತಿ

    ಇನ್ನು ಕಳೆದ 24 ಗಂಟೆಯಲ್ಲಿ 336 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕರೊನಾ ಸೋಂಕು 12,573 ಮಂದಿಯನ್ನು ಬಲಿ ಪಡೆದಿದೆ.

    ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ನಿನ್ನೆ ಅತಿ ಹೆಚ್ಚು ಸೋಂಕಿನ ಕೇಸ್ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 3752 ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,20,504ಕ್ಕೆ ಏರಿದೆ. ತಮಿಳುನಾಡಿನಲ್ಲಿ 2141 ಮಂದಿಗೆ ಸೋಂಕು ಒಕ್ಕರಿಸಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 52,334ಕ್ಕೆ ಏರಿದೆ. ಈವರೆಗೂ 625 ಜನರು ತಮಿಳುನಾಡಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

    ಕರ್ನಾಟಕದಲ್ಲಿ ನಿನ್ನೆಯವರೆಗೆ 7944 ಸೋಂಕು ಪ್ರಕರಣಗಳು ಪತ್ತೆಯಾಗಿದ್ದರೆ, ನಿನ್ನೆ ಒಂದೇ ದಿನ 210 ಮಂದಿಗೆ ಸೋಂಕು ತಗುಲಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​)

    ಇಬ್ಬರು ಮೇಜರ್​,​ 10 ಯೋಧರ ಬಿಡುಗಡೆ ಮಾಡಿದ ಚೀನಾ?


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts