More

    ವಿಶೇಷ ವಿಮಾನಗಳ ಮೂಲಕ ಸಿಂಗಾಪುರದ 699 ಪ್ರಜೆಗಳನ್ನು ಸ್ಥಳಾಂತರ ಮಾಡಿದ ಭಾರತ; ಕೃತಜ್ಞತೆ ಸಲ್ಲಿಸಿದ ಅಲ್ಲಿನ ಸರ್ಕಾರ

    ನವದೆಹಲಿ: ಕರೊನಾ ಲಾಕ್​ಡೌನ್​ ಮಧ್ಯೆ ಭಾರತದಲ್ಲಿ ಸಿಲುಕಿರುವ ವಿವಿಧ ದೇಶಗಳ ಪ್ರಜೆಗಳನ್ನು ಅವರ ದೇಶಗಳಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ.

    ಇದಕ್ಕೆಂದೇ ವಿಶೇಷ ವಿಮಾನಗಳು ಸಂಚರಿಸುತ್ತಿವೆ. ಮಾ.24ಕ್ಕೂ ಮೊದಲು ಭಾರತಕ್ಕೆ ಬಂದಿದ್ದ ಹಲವು ದೇಶಗಳ ಜನರು ಇಲ್ಲಿಯೇ ಸಿಲುಕಿಕೊಂಡಿದ್ದರು. ಭಾರತದ ವಿಶೇಷ ಫ್ಲೈಟ್​ಗಳು ಮೂಲಕ ಅವರನ್ನು ಆಯಾ ದೇಶಗಳಿಗೆ ಕರೆದುಕೊಂಡು ಹೋಗಿ ಬಿಡಲಾಗುತ್ತಿದೆ. ಭಾರತದ ಈ ಕೆಲಸಕ್ಕೆ ಜರ್ಮನಿ, ಟರ್ಕಿ, ಇರಾನ್​, ಪಾಕಿಸ್ತಾನ ಸೇರಿ ಅನೇಕ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

    ಹಾಗೇ ಸಿಂಗಾಪುರ ಕೂಡ ಭಾರತಕ್ಕೆ ಧನ್ಯವಾದ ಹೇಳಿದೆ. ಶುಕ್ರವಾರ ಮತ್ತು ಇಂದು ಸಿಂಗಾಪುರದ ಒಟ್ಟು 699 ನಾಗರಿಕರನ್ನು ಭಾರತದಿಂದ ವಿಶೇಷ ವಿಮಾನಗಳ ಮೂಲಕ ಸ್ಥಳಾಂತರ ಮಾಡಲಾಗಿದೆ.

    ನವದೆಹಲಿಯಲ್ಲಿರುವ ಸಿಂಗಾಪುರ ಹೈ ಕಮೀಷನ್​, ಮುಂಬೈನಲ್ಲಿರುವ ಸಿಂಗಾಪುರದ ರಾಯಭಾರಿ ಕಚೇರಿ ಮತ್ತು ಚೆನ್ನೈನಲ್ಲಿನ ದೂತಾವಾಸ ಕಚೇರಿಗಳು ಜಂಟಿ ಸಹಕಾರದೊಂದಿಗೆ ಈ ಸ್ಥಳಾಂತರ ಕಾರ್ಯ ನಡೆದಿದೆ. ದೆಹಲಿ, ಚೆನ್ನೈ, ಮುಂಬೈ ಏರ್​ಪೋರ್ಟ್​ಗಳಿಂದ ವಿಮಾನ ವ್ಯವಸ್ಥೆ ಮಾಡಲಾಗಿತ್ತು.

    ಸಿಂಗಾಪುರದ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಕಳಿಸಿಕೊಟ್ಟ ಭಾರತಕ್ಕೆ ಧನ್ಯವಾದಗಳು ಎಂದು ಸಿಂಗಾಪುರ ಸರ್ಕಾರ ಹೇಳಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts