More

    ಭಾರತದಲ್ಲಿ ಶುರುವಾಯ್ತಾ ಕರೊನಾ ಎರಡನೇ ಅಲೆ? ನಾಲ್ಕು ದಿನಗಳಲ್ಲೇ ಸೋಂಕಿತರ ಸಂಖ್ಯೆ 10 ಸಾವಿರ ಹೆಚ್ಚಳ

    ನವದೆಹಲಿ: ಲಾಕ್​ಡೌನ್​ ನಿರ್ಬಂಧಗಳನ್ನು ಸಡಿಲಿಸುತ್ತಿದ್ದಂತೆ ಭಾರತದಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ಆರಂಭವಾಗಿದೆಯೇ ಎಂಬ ಭೀತಿ ಎದುರಾಗಿದೆ. ಏಕೆಂದರೆ, ಕೇವಲ ನಾಲ್ಕು ದಿನಗಳಲ್ಲಿ ಸೋಂಕಿತರ ಸಂಖ್ಯೆ 10 ಸಾವಿರಕ್ಕಿಂತಲೂ ಹೆಚ್ಚಾಗಿದೆ.

    ಅದರಲ್ಲೂ ಏಳು ರಾಜ್ಯಗಳು ಮೂರು ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಕರಣಗಳ ಹೊಂದಿವೆ. ಮಹಾರಾಷ್ಟ್ರ, ಗುಜರಾತ್​, ದೆಹಲಿ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶಗಳಲ್ಲಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಒಟ್ಟಾರೆ 52,800 ಸಾವಿರ ಪ್ರಕರಣಗಳಲ್ಲಿ 43,000 ಸೋಂಕಿತರು ಈ ರಾಜ್ಯಗಳಲ್ಲಿಯೇ ಇದ್ದಾರೆ. ಅಂದರೆ ಶೇ.80 ಕೇಸ್​ಗಳು ಈ ರಾಜ್ಯಗಳಲ್ಲಿವೆ.

    ಇದನ್ನೂ ಓದಿ; ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?

    ಪ್ರಸ್ತುತ ಭಾರತದಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 50 ಸಾವಿರ ದಾಟಿದಂತಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಈ ಸಂಖ್ಯೆ 40 ಸಾವಿರ ಆಗಿತ್ತು. ಆರಂಭದಲ್ಲಿ ಹತ್ತು ಸಾವಿರ ಪ್ರಕರಣಗಳು ವರದಿಯಾಗಲು ಒಂದೂವರೆ ತಿಂಗಳಾಗಿತ್ತು. ಈ ನಾಲ್ಕು ದಿನಗಳಲ್ಲಿಯೇ 10 ಸಾವಿರ ಹೊಸ ಪ್ರಕರಣಗಳು ಕಂಡುಬಂದಿವೆ. ಮುಂಬೈವೊಂದರಲ್ಲೇ ಈಗ 10ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

    ಈಗ ಜಾಗತಿಕವಾಗಿ ಭಾರತಕ್ಕಿಂತಲೂ ಅಧಿಕ ಪ್ರಕರಣಗಳನ್ನು ಹೊಂದಿರುವ ದೇಶಗಳ ಸಂಖ್ಯೆ ಕೇವಲ 12. ಜೂನ್​ನಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಜ್ಞರು ನಿರೀಕ್ಷೆ ಮಾಡಿದ್ದರು. ಆದರೆ, ಮೇ ತಿಂಗಳಲ್ಲಿಯೇ ಇದು ಅಂಕೆ ಮೀರುವ ಲಕ್ಷಣಗಳು ಕಾಣುತ್ತಿವೆ.

    ದ್ವಿಗುಣ ಅವಧಿಯೂ ಇಳಿಕೆ: ಪ್ರಕರಣಗಳು ದ್ವಿಗುಣಗೊಳ್ಳುವ ಅವಧಿಯೂ ಇಳಿಕೆಯಾಗಿರುವುದು ಕೂಡ ಆತಂಕಕಾರಿ ಸಂಗತಿಯಾಗಿದೆ. ಸೋಂಕಿತರ ಪ್ರಮಾಣವು ಶೇ.6.6ರ ಬೆಳವಣಿಗೆ ದರದಲ್ಲಿ 11 ದಿನದಲ್ಲಿಯೇ ಎರಡು ಪಟ್ಟು ಹೆಚ್ಚಾಗುತ್ತಿದೆ. ಈ ಮೊದಲಿನ ಲೆಕ್ಕಾಚಾರದಲ್ಲಿ ಶೇ.4.8ರ ದರದಲ್ಲಿ 15 ದಿನಗಳಿಗೆ ದ್ವಿಗುಣವಾಗಬೇಕಿತ್ತು. ಇದನ್ನು ಗಮನಿಸಿದರೆ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್​, ದೆಹಲಿಯನ್ನು ಗಮನಿಸಿದರೆ ಇಲ್ಲೆಲ್ಲ ಎರಡನೇ ಅಲೆ ಆರಂಭವಾಗಿದೆ ಎಂಬ ಕಳವಳ ವ್ಯಕ್ತವಾಗಿದೆ.

    ಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts