More

    ವೀಕೆಂಡ್​ ಲಾಕ್​ಡೌನ್​ಗೆ ಉತ್ತಮ ಬೆಂಬಲ: ಅನಗತ್ಯ ಹೊರಬಂದವರಿಗೆ ಲಾಠಿ ರುಚಿ ತೋರಿಸುತ್ತಿರೋ ಖಾಕಿ ಪಡೆ

    ಬೆಂಗಳೂರು: ರಾಜ್ಯಾದ್ಯಂತ ಇಂದು ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದ್ದು, ರಾತ್ರಿ ಕರ್ಪ್ಯೂ ಕೂಡ ಜತೆಗೇ ಮುಂದುವರಿಯಲಿದೆ. ಕರೊನಾ ಹಾಟ್​ಸ್ಪಾಟ್​ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದು, ನಿಯಮ ಉಲ್ಲಂಘಿಸುವವರ ಕಣ್ಗಾವಲಿಗೆ ಪೊಲೀಸ್​ ಸರ್ಪಗಾವಲು ಏರ್ಪಡಿಸಲಾಗಿದೆ.

    ಬೆಂಗಳೂರು ಬಂದ್​
    ರಾಜಧಾನಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಅಗತ್ಯವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಲಾಗಿದೆ. ನಗರದಲ್ಲಿ ದಿನವೊಂದಕ್ಕೆ ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​ಗಳನ್ನು ಎಳೆದು, ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಸದ್ಯ ನಗರದಲ್ಲಿ ಜನರ ಓಡಾಟ ತಗ್ಗಿದೆ.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್: ಈ ಚಿತ್ರದಲ್ಲಿರೋ ಹಲ್ಲಿಯನ್ನು ಗುರುತಿಸಿದ್ರೆ ನಿಮಗೆ ಹ್ಯಾಟ್ಸ್ಆಫ್​!

    ಉಳಿದ ಜಿಲ್ಲೆಗಳಲ್ಲಿ ಕೆಲವೆಡೆ ಲಾಕ್​ಡೌನ್​ಗೆ ಕ್ಯಾರೆ ಎನ್ನದ ಜನ
    ಕರೊನಾ ಕಟ್ಟಿಹಾಕುವ ಅಸ್ತ್ರವಾಗಿ ಲಾಕ್​ಡೌನ್​ ಬಳಕೆಯಾಗುತ್ತಿದ್ದರು. ಕೆಲ ಮಂದಿ ಕರೊನಾ ತೀವ್ರತೆ ಅರಿಯದೇ, ಲಾಕ್​ಡೌನ್​ಗೂ ಕ್ಯಾರೆ ಎನ್ನದೇ ಬೀದಿಗೆ ಇಳಿದಿದ್ದಾರೆ. ವಿಜಯಪುರದಲ್ಲಿ ಅನಗತ್ಯವಾಗಿ ಬೈಕ್​ ಸವಾರಿ ಮಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

    ಸಕ್ಕರೆ ನಾಡು ಮಂಡ್ಯ ಸಹ ಕರೊನಾಗೆ ನಲುಗಿದ್ದರು ಸಹ ಜನ ಮಾತ್ರ ವಾಕಿಂಗ್ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಎಂದಿನಂತೆಯೇ ವಾಕಿಂಗ್​ ಮೂಡ್​ನಲ್ಲಿ ಜನರಿದ್ದಾರೆ. ನಗರದ ಕಾವೇರಿ ವನದ ರಸ್ತೆ, ಸರ್ಕಾರಿ ಮಹಾವಿದ್ಯಾಲಯದ ಗ್ರೌಂಡ್ ಸೇರಿದಂತೆ ಪಾರ್ಕ್​ಗಳಲ್ಲಿ ಜನರ ಓಡಾಟ ಎಂದಿನಂತಿದ್ದು, ಪೊಲೀಸರು ಎಚ್ಚರಿಕೆ ಜತೆಗೆ ಜನರು ಮನೆಗೆ ಕಳುಹಿಸುತ್ತಿದ್ದಾರೆ.

    ತರಕಾರಿ, ಮೀನು, ಮಾಂಸ ಮಾರಾಟಕ್ಕೂ ಬ್ರೇಕ್​
    ಮಂಗಳೂರಿನಲ್ಲಿ ಹಾಲು, ಪೇಪರ್, ಮೆಡಿಕಲ್ ಮತ್ತು ವೈದ್ಯಕೀಯ ಸೇವೆ ಮಾತ್ರ ಲಭ್ಯವಾಗಿದ್ದು, ತರಕಾರಿ, ಮೀನು, ಮಾಂಸ ಮಾರಾಟಕ್ಕೂ ಬ್ರೇಕ್ ಹಾಕಲಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಹಾಲು, ಪೇಪರ್ ದೊರೆಯುತ್ತಿದೆ.

    ಇದನ್ನೂ ಓದಿ: LIVE| ವರ್ಷದ ಕೊನೇ ಚಂದ್ರಗ್ರಹಣ ಕಣ್ತುಂಬಿಕೊಳ್ಳಿ: ಚಂದಿರನ ವಿಸ್ಮಯ ಜತೆಗೆ ಜಗತ್ತಿಗೆ ಕಾದಿದೆಯಾ ಆಪತ್ತು?

    ಇನ್ನುಳಿದ ಚಾಮರಾಜನಗರ, ಮೈಸೂರು, ಹಾಸನ, ಕಲಬುರಗಿ, ಕೊಪ್ಪಳ, ಬೆಳಗಾವಿ, ರಾಮನಗರ, ಹಾವೇರಿ, ರಾಯಚೂರು, ಕೋಲಾರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಲಾಕ್​ಡೌನ್​ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸಂಚಾರ ವಿರಳವಾಗಿದ್ದು, ಸಾರ್ವಜನಿಕರು ಓಡಾಟವು ಸಹ ಸ್ತಬ್ಧವಾಗಿದೆ. ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ನೀಡಲಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದವರ ಪೊಲೀಸರು ನಿಗಾ ಇಟ್ಟಿದ್ದಾರೆ. ಇನ್ನು ಕೆಲವೆಡೆ ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಎಪಿಎಂಸಿ ಮಾರುಕಟ್ಟೆಗಳನ್ನು ತೆರೆದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇನ್ನು ಮುಂದೆ ಪ್ರತಿದಿನವೂ ಹಾಫ್ ಲಾಕ್‌ಡೌನ್ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts