More

    ಕರೊನಾ ಲಾಕ್​ಡೌನ್​ನಿಂದ ಆಂಧ್ರದಲ್ಲೇ ಸಿಲುಕಿಕೊಂಡಿದ್ದ ಹುಡುಗಿಯರಿಬ್ಬರ ಸಾವು

    ರಾಯಚೂರು: ಆಂಧ್ರ ಪ್ರದೇಶಕ್ಕೆ ವಲಸೆ ಹೋಗಿದ್ದ ಕರ್ನಾಟಕ ಮೂಲದ ಕಾರ್ಮಿಕ ಹುಡುಗಿಯರಿಬ್ಬರು ಸಾವಿಗೀಡಾಗಿರುವ ದುರಂತ ಘಟನೆ ಆಂಧ್ರದ ಪ್ರಕಾಶಂ ಜಿಲ್ಲೆಯ ದುದ್ದಕೂರು ಮಂಡಲದ ಇಂಕೊಳ್ಳು ಗ್ರಾಮದಲ್ಲಿ ನಡೆದಿದೆ.

    ಉಷಾ (14) ಹಾಗೂ ಮುನ್ನಿ (21) ಮೃತರು. ರಾಯಚೂರು ತಾಲೂಕಿನ ಜುಲಮಗೇರಾ ಗ್ರಾಮದಿಂದ ಕುಟುಂಬದೊಂದಿಗೆ ಕೂಲಿಗಾಗಿ ಹುಡುಗಿಯರು ಸಹ ವಲಸೆ ಹೋಗಿದ್ದರು. ಬಟ್ಟೆ ತೊಳೆಯಲು ಹೋಗಿದ್ದಾಗ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಈ 2 ಶ್ರೀಮಂತ ರಾಷ್ಟ್ರಗಳಲ್ಲಿ ಕರೊನಾ ಕೇಸ್​ ಹೆಚ್ಚಿದ್ರೂ ಮರಣ ಪ್ರಮಾಣ ಮಾತ್ರ ತುಂಬಾ ಕಡಿಮೆ ಏಕೆ?

    ಲಾಕ್​ಡೌನ್​ ಹಿನ್ನೆಲೆ ಊರಿಗೆ ವಾಪಸ್ಸಾಗಲು ಸಾಧ್ಯವಾಗದೇ ಅಲ್ಲಿಯೇ ಉಳಿದ್ದರು. ಇದರ ನಡುವೆಯೇ ದುರಂತ ಸಂಭವಿಸಿದ್ದು, ಮೃತ ಹುಡುಗಿಯರ ಶವಗಳನ್ನು ಜುಮಲಗೇರಾಕ್ಕೆ ತರಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು, ಪ್ರಕಾಶಂ ಹಾಗೂ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಪರವಾನಿಗೆ ಪಡೆಯಲು ಯತ್ನಿಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಮದ್ಯಪ್ರಿಯರಿಗೆ ಶಾಕಿಂಗ್​ ನ್ಯೂಸ್​: ಕುಡುಕರ ಆಸೆ ಈಡೇರಿಸಿ ಜೇಬಿಗೆ ಕತ್ತರಿ ಹಾಕಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts