More

    ದುಪ್ಪಟ್ಟು ಟಿಕೆಟ್​ ದರಕ್ಕೆ ಬ್ರೇಕ್​ ಹಾಕಿದ ಸರ್ಕಾರ: ನಿಗದಿತ ದರದಲ್ಲೇ ಕಾರ್ಮಿಕರನ್ನು ಕರೆದೊಯ್ಯಲು ತೀರ್ಮಾನ

    ಬೆಂಗಳೂರು: ತೀವ್ರ ಟೀಕೆಯ ಬಳಿಕ ದುಪ್ಪಟ್ಟು ಟಿಕೆಟ್​ ದರಕ್ಕೆ ಬ್ರೇಕ್​ ಹಾಕಿರುವ ರಾಜ್ಯ ಸರ್ಕಾರ ನಿಗದಿತ ದರದಲ್ಲೇ ವಲಸೆ ಕಾರ್ಮಿಕರನ್ನು ಕರೆದೊಯ್ಯಲು ನಿರ್ಧರಿಸಿದೆ.

    ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ದುಡಿಮೆಯೇ ಇಲ್ಲದೇ ಜನರು ಕಂಗಾಲಾಗಿರುವ ನಡುವೆಯೇ ರಾಜ್ಯ ಸರ್ಕಾರ ಬೇರೆ ಜಿಲ್ಲೆಯ ಕಾರ್ಮಿಕರನ್ನು ಅವರವರ ಪ್ರದೇಶಗಳಿಗೆ ಕರೆದೊಯ್ಯಲು ಕೆಎಸ್​ಆರ್​ಟಿಸಿ ಟಿಕೆಟ್​ ದರವನ್ನು ದುಪ್ಪಟ್ಟು ಮಾಡಿ ಗಾಯದ ಮೇಲೆ ಬರೆ ಎಳೆದಿತ್ತು.

    ಬೆಂಗಳೂರಿನಿಂದ ಬಾಗಲಕೋಟೆಗೆ 1311 ರೂ., ಬಳ್ಳಾರಿ 884 ರೂ., ಬೆಳಗಾವಿ 1478 ರೂ., ಬೀದರ್​ 1984 ರೂ., ಚಾಮರಾಜನಗರ 468 ರೂ., ಉಡುಪಿ 1110 ರೂ, ಧಾರವಾಡ 1239 ರೂ., ಮೈಸೂರು 390 ರೂ. ಹೀಗೆ ಆಯಾ ಜಿಲ್ಲೆಗೆ ಬಸ್​ ಟಿಕೆಟ್​ ದರಗಳನ್ನು ದುಪ್ಪಟ್ಟು ನಿಗದಿ ಮಾಡಿತ್ತು. ಸಾರ್ವಜನಿಕ ವಲಯದಿಂದ ತೀವ್ರ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ದುಪ್ಪಟ್ಟು ದರ ಹಿಂಪಡೆದುಕೊಂಡು ನಿಗದಿತ ದರದಲ್ಲಿ ಕಾರ್ಮಿಕರನ್ನು ಕರೆದೊಯ್ಯಲು ತೀರ್ಮಾನಿಸಿದೆ.

    ಇದನ್ನೂ ಓದಿ: ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು

    ಈ ಬಗ್ಗೆ ಟ್ವೀಟ್​ ಮಾಡಿರುವ ಸಚಿವ ಸುರೇಶ್​ ಕುಮಾರ್​ ಅವರು ಕೆಎಸ್​ಆರ್​ಟಿಸಿ ಬಸ್​ಗಳ‌ ಮೂಲಕ ತಮ್ಮ ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ‌ ಕಾದಿರುವ ಕಾರ್ಮಿಕರಿಗೆ ನಿಗದಿತ ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮಾನ್ಯ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ ಎಂದಿದ್ದಾರೆ.

    ದುಪ್ಪಟ್ಟು ದರದಿಂದ ಕಂಗಾಲಾಗಿದ್ದ ಕಾರ್ಮಿಕರಿಗೆ ಸರ್ಕಾರದ ನಿರ್ಧಾರದಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ.

    ಇದನ್ನೂ ಓದಿ: ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಕಂಗಾಲಾಗಿರೋ ಕಾರ್ಮಿಕರ ಬಳಿ ಸರ್ಕಾರದಿಂದ ದುಪ್ಪಟ್ಟು ಬಸ್ ದರ ವಸೂಲಿ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts