ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಕಂಗಾಲಾಗಿರೋ ಕಾರ್ಮಿಕರ ಬಳಿ ಸರ್ಕಾರದಿಂದ ದುಪ್ಪಟ್ಟು ಬಸ್ ದರ ವಸೂಲಿ​

blank

ಬೆಂಗಳೂರು: ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ದುಡಿಮೆಯೇ ಇಲ್ಲದೇ ಜನರು ಕಂಗಾಲಾಗಿದ್ದರೆ. ಇದರ ನಡುವೆ ರಾಜ್ಯ ಸರ್ಕಾರ ಬೇರೆ ಜಿಲ್ಲೆಯ ಕಾರ್ಮಿಕರನ್ನು ಅವರವರ ಪ್ರದೇಶಗಳಿಗೆ ಕರೆದೊಯ್ಯಲು ಕೆಎಸ್​ಆರ್​ಟಿಸಿ ಟಿಕೆಟ್​ ದರವನ್ನು ದುಪ್ಪಟ್ಟು ಮಾಡಿ ಗಾಯದ ಮೇಲೆ ಬರೆ ಎಳೆದಿದೆ.

blank

ಬೆಂಗಳೂರಿನಿಂದ ಬಾಗಲಕೋಟೆಗೆ 1311 ರೂ., ಬಳ್ಳಾರಿ 884 ರೂ., ಬೆಳಗಾವಿ 1478 ರೂ., ಬೀದರ್​ 1984 ರೂ., ಚಾಮರಾಜನಗರ 468 ರೂ., ಉಡುಪಿ 1110 ರೂ, ಧಾರವಾಡ 1239 ರೂ., ಮೈಸೂರು 390 ರೂ. ಹೀಗೆ ಆಯಾ ಜಿಲ್ಲೆಗೆ ಬಸ್​ ಟಿಕೆಟ್​ ದರಗಳನ್ನು ನಿಗದಿ ಮಾಡಿದೆ. ಆಘಾತಕಾರಿಯೆಂದರೆ ಮೊದಲಿನ ದರಕ್ಕಿಂತ ಜನರಿಂದ ಸರರ್ಕಾರ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ.

ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಕಂಗಾಲಾಗಿರೋ ಕಾರ್ಮಿಕರ ಬಳಿ ಸರ್ಕಾರದಿಂದ ದುಪ್ಪಟ್ಟು ಬಸ್ ದರ ವಸೂಲಿ​

ಲಾಕ್​ಡೌನ್​ ಹೇರಿದಾಗಿನಿಂದ ಇಡೀ ರಾಷ್ಟ್ರವೇ ಸ್ತಬ್ಧವಾಗಿದ್ದು, ಯಾವುದೇ ಆರ್ಥಿಕ ಚಟುವಟಿಕೆಗಳು ಇಲ್ಲದೇ, ಕೆಲಸವಿಲ್ಲದೇ, ಆದಾಯವು ಇಲ್ಲದೇ ಜನರು ಕಂಗಾಲಾಗಿದ್ದಾರೆ. ಇದರ ನಡುವೆ ಸರ್ಕಾರ ಜನರಿಗೆ ಬೆನ್ನಿಗೆ ನಿಲ್ಲಬೇಕಾಗಿದ್ದು ಅದರ ಕರ್ತವ್ಯವಾಗಬೇಕಿತ್ತು. ಆದರೆ, ಜನರಿಂದಲೇ ಹಣ ವಸೂಲಿ ಮಾಡ ಹೊರಟಿರುವುದು ದುರಾದೃಷ್ಟವೇ ಸರಿ.

ಉಚಿತ ಬಸ್ ವ್ಯವಸ್ಥೆಗೆ ಮೊದಲೇ ಆಗ್ರಹಿಸಿದ್ದ ಮಾಜಿ ಸಿಎಂ
ಕಾರ್ಮಿಕರನ್ನು ಕರೆದೊಯ್ಯು ವಿಚಾರವಾಗಿ ನಿನ್ನೆಯಷ್ಟೇ ಟ್ವೀಟ್​ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್‌ಗಳನ್ನು ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಪ್ರಯಾಣ ವೆಚ್ಚವನ್ನು ಸ್ವತಃ ಕಾರ್ಮಿಕರೇ ಭರಿಸಬೇಕೆಂದು ತೀರ್ಮಾನಿಸಿರುವುದು ಸರಿಯಲ್ಲ ಎಂದಿದ್ದರು.

ಕಳೆದ 40 ದಿನಗಳಿಂದ ಕೆಲಸವಿಲ್ಲದೆ ಸಾವಿರಾರು ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ದಿನ ಕಳೆದಿದ್ದಾರೆ. ಬಸ್ ಟಿಕೆಟ್‌ಗೆ ಹಣವೂ ಇಲ್ಲದ ಅವರ‌ ಜ‘ತೆ ಅಮಾನವೀಯವಾಗಿ ವರ್ತಿಸದೆ, ಊರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದರು.

ಅಸುರಕ್ಷಿತ ಮಾಸ್ಕ್​ನಿಂದ ಆರೋಗ್ಯಕ್ಕೆ ಕುತ್ತು ಸಾಧ್ಯತೆ: ಅಶುಚಿಯಿಂದ ಅಲರ್ಜಿ, ಉಸಿರಾಟ ತೊಂದರೆ ನಿಶ್ಚಿತ

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank