More

    ಅಸುರಕ್ಷಿತ ಮಾಸ್ಕ್​ನಿಂದ ಆರೋಗ್ಯಕ್ಕೆ ಕುತ್ತು ಸಾಧ್ಯತೆ: ಅಶುಚಿಯಿಂದ ಅಲರ್ಜಿ, ಉಸಿರಾಟ ತೊಂದರೆ ನಿಶ್ಚಿತ

    ಬೆಂಗಳೂರು: ಕರೊನಾ ತಡೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆದರೆ, ಕರೊನಾ ಹರಡುವುದನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮಾಸ್ಕ್​ಗಳ (ಮುಖಗವಸು) ಸುರಕ್ಷತೆ ಬಗ್ಗೆಯೇ ಈಗ ಪ್ರಶ್ನೆ ಎದ್ದಿದೆ. ಜನರು ಸಿಕ್ಕಸಿಕ್ಕ ಮಾಸ್ಕ್​ಗಳನ್ನು ಧರಿಸುತ್ತಿರುವುದರಿಂದ ಕರೊನಾ ಜತೆಯಲ್ಲೇ ಸಾಂಕ್ರಾಮಿಕ ರೋಗಗಳು ಕೂಡ ಹರಡುವ ಗಂಭೀರ ಆತಂಕ ಎದುರಾಗಿದೆ.

    ಆತಂಕ ಏಕೆ?: ಮಾಸ್ಕ್ ಕಡ್ಡಾಯ ಬಳಿಕ ಕರ್ನಾಟಕ ಸೇರಿ ದೇಶದೆಲ್ಲೆಡೆ ನಕಲಿ ಮಾಸ್ಕ್​ಗಳ ದಂಧೆ ಶುರುವಾಗಿದೆ. ಒಮ್ಮೆಯೂ ಧರಿಸಲು ಯೋಗ್ಯವಲ್ಲದ ಇಂತಹ ಮಾಸ್ಕ್​ಗಳನ್ನು ಜನತೆ ತಿಂಗಳವರೆಗೆ ಬಳಸುತ್ತಿದ್ದಾರೆ. ಇನ್ನು ಕೆಲವೆಡೆ ಕುಟುಂಬದ ಎಲ್ಲ ಸದಸ್ಯರು ಒಂದೇ ಮಾಸ್ಕ್ ಹಂಚಿಕೊಳ್ಳುತ್ತಿದ್ದಾರೆ. ಮಾಸ್ಕ್​ಗಳ ಮರುಬಳಕೆ ಹೆಚ್ಚಿದಂತೆ ಅದರಲ್ಲಿರುವ ಬ್ಯಾಕ್ಟೀರಿಯಾ ದೇಹ ಸೇರಿ ಅಲರ್ಜಿ, ಅಸ್ತಮಾ, ಉಸಿರಾಟ ತೊಂದರೆ ಉಂಟಾಗಬಹುದು.

    ಇದನ್ನೂ ಓದಿ: ಮೂರು ವಾರಗಳಿಂದ ಕಾಣೆಯಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ದಿಢೀರ್​ ಪ್ರತ್ಯಕ್ಷ: ಏನಾಗಿತ್ತು ಕಿಮ್​ಗೆ?

    ದೀರ್ಘಕಾಲ ಬಳಸುವುದು: ಎನ್-95, ಎನ್ -99, ಎನ್ -100 ಮಾಸ್ಕ್​ಗಳನ್ನು ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಇವು ಕ್ರಮವಾಗಿ, ಶೇ. 80, ಶೇ. 90, ಶೇ.99.5 ಗಾಳಿ ಶೋಧಿಸುವ ಸಾಮರ್ಥ್ಯ ಹೊಂದಿವೆ. ಇವನ್ನು ಹೆಚ್ಚು ಸಮಯ ಬಳಕೆ ಮಾಡಬಹುದಾದರೂ ಫಿಲ್ಟರ್ ಬದಲಿಸಬೇಕು.

    ಸದ್ಯದ ಪರಿಸ್ಥಿತಿಯಲ್ಲಿ ಮನೆಯಿಂದ ಹೊರ ಹೋಗುವವರು, ಶ್ವಾಸಕೋಶ, ಹೃದಯ ಸಂಬಂಧಿ ಸಮಸ್ಯೆ ಇರುವವರು ಮಾಸ್ಕ್ ಬಳಸಬೇಕು. ಬಟ್ಟೆ ಮಾಸ್ಕ್ ಬಳಕೆ ಉತ್ತಮ. ಇದನ್ನು ಕುದಿಯುವ ನೀರಿನಲ್ಲಿ ಅದ್ದಿ ಇಸ್ತ್ರಿ ಮಾಡಿ ಮರುಬಳಸಬಹುದು.

    | ಡಾ. ಸಿ.ಎನ್. ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

    ಬಳಕೆಗೂ ಮುನ್ನ..

    # ಮಾಸ್ಕ್ ಧರಿಸುವುದಕ್ಕೆ ಹಾಗೂ ತೆಗೆಯುವುದಕ್ಕೂ ವಿಧಾನ ಉಂಟು. ಮಾಸ್ಕ್ ಹಾಕಿದ ಮೇಲೆ ಮೂಗು, ಬಾಯಿಗೆ ವೈರಸ್ ಹರಡುವ ಸಾಧ್ಯತೆ ಇದೆಯೇ ಎಂಬುದನ್ನು ಗಮನಿಸಿಕೊಳ್ಳಬೇಕು, ಹಾಗೆಯೇ ತೆಗೆಯುವಾಗ ಮಾಸ್ಕ್ ಮೇಲಿರುವ ಕಣಗಳು ಬಾಯಿ, ಮೂಗಿನೊಳಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

    # ಮರುಬಳಕೆ ಆಗದ ಮಾಸ್ಕ್​ಗಳ ವಿಲೇವಾರಿ ವೈಜ್ಞಾನಿಕವಾಗಿರಬೇಕು. ಮರುಬಳಕೆ ಮಾಸ್ಕ್​ಗಳನ್ನು ಸ್ವಚ್ಛ ಮಾಡುವಾಗಲೂ ಮುಖವನ್ನು ಸುರಕ್ಷಿತವಾಗಿ ಮುಚ್ಚಿಕೊಂಡಿರಬೇಕು.

    # ತೊಳೆದ ಬಳಿಕ ಮಾಸ್ಕ್​ಗಳನ್ನು ಸಾಕಷ್ಟು ಸಮಯ ಬಿಸಿಲಲ್ಲಿ ಒಣಗಿಸಿದರೆ ಉತ್ತಮ.

    ಇದನ್ನೂ ಓದಿ: ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಕಾನೂನು ಪಾಲನೆಗಷ್ಟೇ ಮಾಸ್ಕ್

    ಬಳಕೆ ತರವಲ್ಲ. ಬೇರೆಯವರಿಂದ ನಮಗೆ ಸೋಂಕು ಹರಡದೇ ಇರಲು, ನಮ್ಮಿಂದ ಇತರರಿಗೆ ಸೋಂಕು ತಗುಲದಿ ರಲು ಅತ್ಯಗತ್ಯ. ಎಲ್ಲರೂ ಸರ್ಜಿಕಲ್ ಹಾಗೂ ಎನ್ 95 ಮಾಸ್ಕ್ ಬಳಸುವ ಅನಿವಾರ್ಯತೆ ಇಲ್ಲ. ಬಟ್ಟೆ ಮಾಸ್ಕ್ ಅಥವಾ ಕರವಸ್ತ್ರ ಬಳಸಿದರೂ ಸಾಕು. ಅದನ್ನು ನಿತ್ಯ ಬಿಸಿನೀರಿನಲ್ಲಿ ತೊಳೆದು ಬಳಸಬೇಕು.
    | ಡಾ. ಧನಂಜಯ ಹಿರಿಯ ಆರೋಗ್ಯಾಧಿಕಾರಿ, ನಾಗಮಂಗಲ

    ಯಾವ ಮಾಸ್ಕ್ ಉತ್ತಮ?

    ಸಾಮಾನ್ಯವಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸರ್ಜಿಕಲ್ ಮಾಸ್ಕ್ ಬಳಸುತ್ತಾರೆ. ಗಾಳಿ ಯಿಂದ ಹರಡುವ ವೈರಸ್ ಉಸಿರಾಟದ ಮೂಲಕ ದೇಹ ದೊಳಗೆ ಹೋಗದಂತೆ ತಡೆಯುವ ಈ ಮಾಸ್ಕ್​ಗಳ ಬೆಲೆ ಕೂಡ ಕಡಿಮೆ. ಇದರ ಗಾಳಿ ಶುದ್ಧತೆ ಸಾಮರ್ಥ್ಯ ಶೇ.10-90. 6ರಿಂದ 8 ತಾಸು ಬಳಸಬಹುದಾದ ಈ ಮಾಸ್ಕ್ ಗಳನ್ನು ಅವಧಿ ಮೀರಿದ ಬಳಿಕ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಬೆಲೆ ಕಡಿಮೆ ಎಂದು ಈ ಮಾಸ್ಕ್ ಗಳನ್ನು ಹೆಚ್ಚಾಗಿ ಬಳಸುತ್ತಿರುವ ಜನತೆ ಅದನ್ನೇ ಮರುಬಳಕೆ ಮಾಡುತ್ತಿದ್ದಾರೆ.

    ಎನ್-95 ಮಾಸ್ಕ್ ಬಳಸಲಾಗದವರು ಬಟ್ಟೆ ಮಾಸ್ಕ್ ಅಥವಾ ಶುಭ್ರವಾದ ಕರವಸ್ತ್ರ ಬಳಸಬಹುದು.
    | ಡಾ. ಸಿ. ರಾಮಚಂದ್ರ ನಿರ್ದೇಶಕರು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
    ಆರೋಗ್ಯವಂತರು ಮನೆಯಲ್ಲಿ ಮಾಸ್ಕ್ ಬಳಸಬೇಕಿಲ್ಲ. ಸಾಂಕ್ರಾಮಿಕ ಆರೋಗ್ಯ ಸಮಸ್ಯೆ ಇರುವವರು ಇತರರಿಗೆ ಹರಡದಂತೆ ಮಾಸ್ಕ್ ಧರಿಸಬೇಕು. ಮನೆಯಿಂದ ಹೊರ ಹೋಗುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಉತ್ತಮ.
    | ಡಾ. ಮೋಹನ್ ಕುಮಾರ್ ಕೆ.ಸಿ.ಜನರಲ್ ಆಸ್ಪತ್ರೆ

    | ಪಂಕಜ ಕೆ.ಎಂ.

    ಸರ್ಕಾರದ ಸೌಲಭ್ಯವಂಚಿತ ಶುಶ್ರೂಷಕರು: ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವೇತನ ಮಾತ್ರ ಲಭ್ಯ, ಇತರೆ ಭತ್ಯೆಗಳಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts