More

    ಕೊರೊನಾ ವೈರಸ್​: ಸಾವಿನ ಸಂಖ್ಯೆ 803ಕ್ಕೆ ಏರಿಕೆ, ಸಾರ್ಸ್​ ವೈರಸ್​ ಮೀರಿಸಿದ ಕೊರೊನಾ, ಮತ್ತಷ್ಟು ಸಾವಿನ ಭೀತಿ

    ಬೀಜಿಂಗ್​: ಚೀನಾದಲ್ಲಿ ಮೃತ್ಯುಕೂಪ ಸೃಷ್ಟಿಸಿರುವ ಕೊರೊನಾ ವೈರಸ್​ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ವೈರಸ್​ ಹೆಚ್ಚಾಗಿ ಹರಡಿರುವ ಹುಬೇ ಪ್ರಾಂತ್ಯದಲ್ಲಿ 81 ಹೊಸ ಸಾವಿನ ಪ್ರಕರಣಗಳು ದಾಖಲಾಗುವ ಮೂಲಕ ಭಾನುವಾರದ ಆರಂಭದ ಹೊತ್ತಿಗೆ ಒಟ್ಟು ಮೃತರ ಸಂಖ್ಯೆ 803ಕ್ಕೆ ಏರಿದ್ದು, ಮತ್ತಷ್ಟು ಹೆಚ್ಚಾಗುವ ಸಂಭವವಿದೆ.

    ಈ ಹಿಂದೆ ತೀವ್ರ ಉಸಿರಾಟದ ತೊಂದರೆಯ ಸಾರ್ಸ್​(ಸಿವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಸಿಂಡ್ರೋಮ್) ವೈರಸ್​ ಸೋಂಕಿನಿಂದ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಸಾವಿನ ಸಂಖ್ಯೆಯನ್ನು ಕೊರೊನಾ ವೈರಸ್​ ಮೀರಿಸಿದೆ. 2002-2003ರಲ್ಲಿ ಸಾರ್ಸ್​ನಿಂದ 774 ಮಂದಿ ಸಾವಿಗೀಡಾಗಿದ್ದರು. ಇದೀಗ ಕೊರೊನಾ ದಾಳಿಯಿಂದ 803 ಮಂದಿ ಮೃತರಾಗಿದ್ದು, ಮತ್ತಷ್ಟು ಬಲಿಪಶುಗಳಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಕೇಂದ್ರೀ ಪ್ರಾಂತ್ಯ ಹುಬೇನಲ್ಲಿ 2,147 ಹೊಸ ಕೊರೊನಾ ವೈರಸ್​ ಸೋಂಕು ಪ್ರಕರಣಗಳು ಪತ್ತೆಯಾಗಿರುವುದಾಗಿ ಹುಬೇ ಆರೋಗ್ಯ ಸಚಿವಾಲಯವು ಮಾಹಿತಿ ಖಚಿತಪಡಿಸಿದೆ. ಕಳೆದ ಡಿಸೆಂಬರ್​​ನಲ್ಲಿ ಕೊರೊನಾ ವೈರಸ್​ ಹರಡಲು ಆರಂಭಿಸಿತು. ಸದ್ಯ ಚೀನಾದ್ಯಂತ 36,690ಕ್ಕೂ ಹೆಚ್ಚು ಸೋಂಕು ತಗುಲಿರುವ ಪ್ರಕರಣಗಳು ದಾಖಲಾಗಿದವೆ.

    ಹುಬೇ ರಾಜಧಾನಿ ವುಹಾನ್​ನಲ್ಲಿನ ಜೀವಂತ ಕಾಡು ಪ್ರಾಣಿ ಮಾರಾಟ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್​ ಉದಯಿಸಿತು ಎಂದು ನಂಬಲಾಗಿದೆ. ಇಲ್ಲಿ ಸ್ಫೋಟಗೊಂಡ ವೈರಸ್​ ಇದೀಗ ಚೀನಾದೆಲ್ಲಡೆ ಹರಡಿದ್ದು, ಜಗತ್ತಿನ ಕೆಲ ದೇಶಗಳಿಗೂ ಹಬ್ಬಿದೆ. ಹೀಗಾಗಿ ಕೊರೊನಾ ವೈರಸ್​ ಜಾಗತಿಕ ಮಟ್ಟದಲ್ಲಿ ಭೀತಿ ಸೃಷ್ಟಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts