More

    ಕರೊನಾ ಸೋಂಕಿಗೆ ಭಾರತದ ಮೊದಲ ವೈದ್ಯ ಬಲಿ: ಕೊಳೆಗೇರಿ ನಿವಾಸಿಗಳ ಸೇವೆ ಸಲ್ಲಿಸುತ್ತಿದ್ದ ಡಾಕ್ಟರ್‌

    ಭೋಪಾಲ್ (ಮಧ್ಯ ಪ್ರದೇಶ): ಕರೊನಾ ಸೋಂಕಿಗೆ ಇಲ್ಲಿಯ 62 ವರ್ಷ ವೈದ್ಯರೊಬ್ಬರು ಮೃತಪಟ್ಟಿ ಸೋಂಕಿಗೆ ಬಲಿಯಾದ ಭಾರತದ ಮೊದಲ ವೈದ್ಯರಾಗಿದ್ದಾರೆ. ಇವರು ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿರಲಿಲ್ಲ. ಆದರೆ ಸದಾ ಕೊಳೆಗೇರಿ ವಾಸಿಗಳ ಸೇವೆಯಲ್ಲಿ ಇವರು ನಿರತರಾಗಿರುತ್ತಿದ್ದರು ಎಂದು ಇತರ ವೈದ್ಯರು ಹೇಳಿದ್ದಾರೆ. ಇವರಿಗೆ ಸೋಂಕು ತಗುಲಿದ್ದು ಹೇಗೆ ಎನ್ನುವ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.

    ಡಾ.ಶತ್ರುಘ್ನ ಪಂಜವಾನಿ ಮೃತಪಟ್ಟವರು. ಇವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ‘ಡಾ. ಶತ್ರುಘ್ನ ಅವರು ಸದಾ ಬಡವರ ಸೇವೆಯಲ್ಲಿ ತೊಡಗಿರುತ್ತಿದ್ದರು. ಹಣ ಇಲ್ಲ ಎಂದು ಬಂದ ರೋಗಿಗಳಿಂದ ಎಂದಿಗೂ ಹಣ ಪಡೆಯುತ್ತಿರಲಿಲ್ಲ. ಬಡವರ ಸೇವೆಯಲ್ಲಿಯೇ ತೃಪ್ತಿ ಕಾಣುತ್ತಿದ್ದ ಅವರು, ಇದಕ್ಕಾಗಿಯೇ ಕೊಳೆಗೇರಿ ವಾಸಿಗಳಿಗೆ ಚಿಕಿತ್ಸೆ ನೀಡುವುದು ಹೆಚ್ಚಾಗಿತ್ತು. ಎಲ್ಲಾ ಕೊಳೆಗೇರಿಗಳಿಗೆ ಹೋಗಿ ಆರೋಗ್ಯ ತಪಾಸಣೆ ನಡೆಸುತ್ತಿದ್ದರು. ಇದುವರೆಗೆ ಕರೊನಾ ಸೋಂಕಿತರನ್ನು ಪರೀಕ್ಷೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ಅವರಿಗೆ ಸೋಂಕು ತಗುಲಿರುವುದು ಅಚ್ಚರಿ ತಂದಿದೆ’ ಎನ್ನುತ್ತಾರೆ ಆಸ್ಪತ್ರೆಯ ಇತರ ವೈದ್ಯರು.

    ಇವರ ಸಾವಿನೊಂದಿಗೆ ಇಂದೋರ್‌ನಲ್ಲಿ ಕರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದ್ದು, ಮಧ್ಯ ಪ್ರದೇಶದಲ್ಲಿ ಇದುವರೆಗೆ ಒಟ್ಟು 28 ಮಂದಿ ಕೊವಿಡ್-19ಗೆ ಬಲಿಯಾಗಿದ್ದಾರೆ. (ಏಜನ್ಸೀಸ್‌)

    ನಿಲ್ಲಿಸಲು ಯತ್ನಿಸಿದ ಪೊಲೀಸ್​ ಸಿಬ್ಬಂದಿಯನ್ನೇ ದರದರ ಎಳೆದೊಯ್ಡ ದ್ವಿಚಕ್ರವಾಹನ ಸವಾರ, ಪೇದೆಗೆ ಗಂಭೀರ ಗಾಯ

    ‘ಭಿಲ್ವಾರಾ ಮಾದರಿ’ಯ ಹಿಂದಿರುವ ಶಕ್ತಿ ಯಾವುದು?: ಸೋಂಕು ಪ್ರಕರಣ ತಗ್ಗಿಸಿ ವಿಶ್ವದ ಗಮನ ಸೆಳೆದ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts