More

    ಕಿಲ್ಲರ್​ ಕರೊನಾ ವಿರುದ್ಧದ ಹೋರಾಟಕ್ಕೆ ಉದ್ಯಮಿ ರತನ್​ ಟಾಟಾರಿಂದ 500 ಕೋಟಿ ರೂ. ನೆರವು ಘೋಷಣೆ

    ನವದೆಹಲಿ: ರಾಷ್ಟ್ರದ ಪ್ರಖ್ಯಾತ ಉದ್ಯಮಿ ಮತ್ತು ಟಾಟಾ ಗ್ರೂಪ್​ ಚೇರ್ಮನ್​ ರತನ್​ ಟಾಟಾ ಅವರು ಮಹಾಮಾರಿ ಕರೊನಾ ವಿರುದ್ಧ ಹೋರಾಡಲು 500 ಕೋಟಿ ರೂ. ನೆರವು ನೀಡುವುದಾಗಿ ಶನಿವಾರ ಘೋಷಣೆ ಮಾಡಿದ್ದಾರೆ.

    ರಾಷ್ಟ್ರವನ್ನು ದಿನದಿಂದ ದಿನಕ್ಕೆ ಅಪಾಯಾದೆಡೆಗೆ ನೂಕುತ್ತಿರುವ ಕರೊನಾ ಸೋಂಕನ್ನು ಮಟ್ಟಹಾಕಲು ತುರ್ತು ಸಂಪನ್ಮೂಲಗಳ ಅವಶ್ಯಕತೆಯಿದ್ದು, ಅದಕ್ಕಾಗಿ ಟಾಟಾ ಗ್ರೂಪ್​ 500 ಕೋಟಿ ರೂ. ನೆರವು ನೀಡಲಿದೆ ಎಂದು ಟ್ವಿಟರ್​ ಮೂಲಕ ರತನ್​ ಟಾಟಾ ಅವರು ತಿಳಿಸಿದ್ದಾರೆ.

    ಮಾನವ ಜನಾಂಗ ಎದುರಿಸುತ್ತಿರುವುದರಲ್ಲಿ ಕೋವಿಡ್​-19 ಬಿಕ್ಕಟ್ಟು ಅತಿದೊಡ್ಡ ಸವಾಲಾಗಿದೆ. ಹೀಗಾಗಿ ಟಾಟಾ ಟ್ರಸ್ಟ್​ ಮತ್ತು ಟಾಟಾ ಗ್ರೂಪ್​ ಕಂಪನಿಗಳು ರಾಷ್ಟ್ರದ ಜತೆಗೆ ನಿಲ್ಲಲಿದೆ ಎಂದು 500 ಕೋಟಿ ರೂ. ನೆರವು ಘೋಷಿಸಿರುವ ಪತ್ರವೊಂದನ್ನು ಪೋಸ್ಟ್​ ಮಾಡಿ ರತನ್​ ಟಾಟಾ ಅವರು ಟ್ವೀಟ್​ ಮಾಡಿದ್ದಾರೆ.

    ಸೋಂಕಿಗೆ ಗುರಿಯಾದ ಸಮುದಾಯವನ್ನು ರಕ್ಷಿಸಲು ಹಾಗೂ ಸಶಕ್ತಗೊಳಿಸಲು ಪ್ರಮುಖ 5 ಅಂಶಗಳ ಮೇಲೆ 500 ಕೋಟಿ ರೂ. ನೀಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

    1. ಕರೊನಾ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ) ಒದಗಿಸುವುದು.
    2. ಏರಿಕೆಯಾಗುತ್ತಿರುವ ಕರೊನಾ ಪ್ರಕರಣಗಳ ಚಿಕಿತ್ಸೆಗಾಗಿ ಉಸಿರಾಟ ವ್ಯವಸ್ಥೆಗಳನ್ನು ಪೂರೈಸುವುದು.
    3. ತಲಾ ಪರೀಕ್ಷೆಯನ್ನು ಹೆಚ್ಚಿಸಲು ಟೆಸ್ಟಿಂಗ್​ ಕಿಟ್ಸ್​ಗಳನ್ನು ವಿತರಿಸುವುದು.
    4. ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ಮಾಡ್ಯುಲರ್​ ಟ್ರೀಟ್​ಮೆಂಟ್​ ಸೌಲಭ್ಯಗಳ ಅಳವಡಿಕೆ.
    5. ಬೌದ್ಧಿಕ ನಿರ್ವಹಣೆ ಮತ್ತು ಆರೋಗ್ಯ ಸಿಬ್ಬಂದಿಯ ತರಬೇತಿ ಮತ್ತು ಸಾಮಾನ್ಯ ಜನರ ಸೇವೆ.

    ಈ ಮೇಲಿನ ಐದು ಏರಿಯಾಗಳಿಗೆ ಹಣಕಾಸಿನ ನೆರವನ್ನು ರತನ್​ ಟಾಟಾ ಅವರು ನೀಡಲಿದ್ದಾರೆ. ಕರೊನಾ ಸೋಂಕು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರತೆ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಭಾರತದಲ್ಲಿನ ಆರೋಗ್ಯ ಸಂಪನ್ಮೂಲಗಳಿಗೆ ಉತ್ತೇಜನ ನೀಡುವ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ರತನ್​ ಟಾಟಾ ಅವರು ಒಳ್ಳೆಯ ಹೆಜ್ಜೆಯನ್ನಿಟ್ಟಿದ್ದಾರೆ.

    ಸದ್ಯದ ಮಾಹಿತಿ ಪ್ರಕಾರ ಸೋಂಕಿತರ ಸಂಖ್ಯೆ 900ರ ಸಮೀಪಕ್ಕೆ ಬಂದಿದ್ದು, ಒಟ್ಟು 21 ಮಂದಿ ಬಲಿಯಾಗಿದ್ದಾರೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 6 ಲಕ್ಷ ಸಮೀಪಕ್ಕೆ ಬಂದಿದೆ. 27 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್​)

    ಕಾರ್ಮಿಕರಿಗೆ 37 ಲಕ್ಷ ಕೊಟ್ಟ ನಿಖಿಲ್ … ಸಮಸ್ಯೆಗೆ ಸ್ಪಂದಿಸಿದ ಸ್ಯಾಂಡಲ್‌ವುಡ್‌ನ ಮೊದಲ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts