More

    92 ಡಿಗ್ರಿ ಸೆಲ್ಷಿಯಸ್ ಉಷ್ಣವಷ್ಟೆ ಕರೊನಾವನ್ನು ಕೊಲ್ಲಬಲ್ಲದು: ಭಾರತದ ಸೆಕೆಗಾಲದ ಬೇಗೆಯಿಂದ ಪರಿಣಾಮವಿಲ್ಲ

    ಹೈದರಾಬಾದ್: ಜಗತ್ತಿನಾದ್ಯಂತ ತೀವ್ರವಾಗಿ ಹಬ್ಬುತ್ತಿರುವ ಕರೊನಾ ಸಾಂಕ್ರಾಮಿಕ ರೋಗದ ವೈರಸ್ (ನೊವಲ್ ಕರೊನಾ ವೈರಸ್ ಸಾರ್ಸ್ ಸಿಒವಿ-2) 92 ಡಿಗ್ರಿ ಸೆಲ್ಷಿಯಸ್‌ನಷ್ಟು ತೀವ್ರವಾದ ಉಷ್ಣಾಂಶದಲ್ಲೂ ಉಳಿಯಬಲ್ಲದು ಎಂಬುದು ಇತ್ತೀಚಿನ ಸಂಶೋಧನೆಯಿಂದ ಸಾಬೀತಾಗಿದೆ.

    ನೀರು ಕುದಿಯಲು 100 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಅಗತ್ಯವಾಗಿದ್ದು ಅದಕ್ಕಿಂತ ಕೇವಲ ಎಂಟು ಡಿಗ್ರಿ ಸೆಲ್ಷಿಯಸ್ ಉಷ್ಣದವರೆಗೂ ಈ ಮಾರಕ ವೈರಾಣು ಉಳಿಯಬಲ್ಲದಾಗಿದೆ. ಫ್ರಾನ್ಸ್‌ನ ಏಕ್ಸ್-ಮಾರ್ಸೆಲೆ ವಿಶ್ವವಿದ್ಯಾಲಯ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಶಂಕಿತ ಕರೊನಾ ಪಾಸಿಟಿವ್ ರೋಗಿಗಳನ್ನು ನಿರ್ವಹಿಸುವ ಆರೋಗ್ಯ ಸಿಬ್ಬಂದಿಯ ಸುರಕ್ಷತಾ ಅಂಶಗಳ ಮೇಲೆ ಈ ಅಧ್ಯಯನ ನಡೆಸಿದ ವಿಜ್ಞಾನಿಗಳು ಗಮನ ಕೇಂದ್ರೀಕರಿಸಿದ್ದರು. ಮಾದರಿಗಳ ಮೇಲೆ ನಡೆಸುವ ಪರೀಕ್ಷೆಗಳು ದೃಢಪಡುವ ಮುನ್ನ ವೈರಸ್ ನಿಷ್ಕ್ರಿಯವಾಗುವುದನ್ನು ಖಾತರಿಪಡಿಸಲು ಅಗತ್ಯವಾದ ಕ್ರಮಗಳ ಬಗ್ಗೆಯೂ ವಿಜ್ಞಾನಿಗಳು ಹೆಚ್ಚಿನ ಗಮನ ನೀಡಿದ್ದಾರೆ.

    ಊಹಾಪೋಹಕ್ಕೆ ಬ್ರೇಕ್:
    ಭಾರತದಲ್ಲಿ ಬೇಸಿಗೆಯ ಬಿಸಿ ಕೊವಿಡ್-19 ವೈರಸ್ ಹರಡುವುದನ್ನು ತಡೆಯುತ್ತದೆ ಎಂದು ಸಾಮಾಜಿಕ ಜಾಲತಾಣಗಳು ಹಾಗೂ ಮುಖ್ಯವಾಹಿನಿ ಮಾಧ್ಯಮದಲ್ಲೂ ಆಗಾಗ ಪ್ರಕಟವಾಗುತ್ತಿದ್ದ ಊಹಾಪೋಹಗಳಿಗೆ ಈ ಸಂಶೋಧನೆಯಿಂದ ತಡೆಬಿದ್ದಿದೆ. 60 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಲ್ಲಿ ಒಂದು ಗಂಟೆಕಾಲ ವೈರಸ್‌ಅನ್ನು ಬಿಸಿ ಮಾಡಿದರೂ ಅದರ ಮರುಸೃಷ್ಟಿ (ಪುನರಾವರ್ತನೆ) ಸಾಮರ್ಥ್ಯ ನಾಶವಾಗಿರಲಿಲ್ಲ ಎಂದು ಪ್ರೊಫೆಸರ್ ರೇಮಿ ಚಾರೆಲ್ ಮತ್ತಿತರರು ನಡೆಸಿದ ಸಂಶೋಧನೆ ವೇಳೆ ತಿಳಿದುಬಂದಿದೆ. 92 ಡಿಗ್ರಿ ಸೆಲ್ಷಿಯಸ್‌ನಲ್ಲಿ 15 ನಿಮಿಷ ಕಾಯಿಸಿದಾಗಲಷ್ಟೆ ವೈರಸ್ ನಾಶವಾಗಿತ್ತು.

    ಜೀವಶಾಸ್ತ್ರದ ಪ್ರೀ-ಪ್ರಿಂಟ್ ಸರ್ವರ್ ಆದ ಬಯೊಆರ್‌ಎಕ್ಸ್‌ಐವಿಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ. (ಏಜೆನ್ಸೀಸ್)

    ಕರೊನಾದ ಮೂಲ ಚೀನಾ ಹೌದೋ ಅಲ್ಲವೋ: ಅಮೆರಿಕ ನಡೆಸಲಿದೆ ತನಿಖೆ; ಮುಚ್ಚುಮರೆ ಮಾಡದಿರುವಂತೆ ಟ್ರಂಪ್ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts