More

    ಮಹಾಮಾರಿ ಕರೊನಾ ಭೀತಿ ನಡುವೆಯೇ ಕಿಡಿಗೇಡಿಗಳ ಕೃತ್ಯಕ್ಕೆ ಹೆದರಿದ ಜನತೆ

    ಬೆಂಗಳೂರು: ಅನಾಮಿಕ ವ್ಯಕ್ತಿಯೊಬ್ಬ ದೊಡ್ಡಬಿದರಕಲ್ಲು ಪ್ರದೇಶದಲ್ಲಿ ಮನೆ ಮುಂಭಾಗ ಎಂಜಲು ಉಗಿದು ಹೋಗಿದ್ದಾನೆ ಎಂಬ ವದಂತಿ ಶುಕ್ರವಾರ ಕೆಲಕಾಲ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ಗಾಬರಿಗೊಂಡಿದ್ದರು. ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕಿಡಿಗೇಡಿಗಳ ಕೃತ್ಯ ಎಂಬುದು ಗೊತ್ತಾಗಿದೆ.

    ಶುಕ್ರವಾರ (ಏ.3) ಬೆಳಗ್ಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯೊಬ್ಬ ದೊಡ್ಡಬಿದರಕಲ್ಲು ಪ್ರದೇಶದ ಮನೆ ಬಳಿ ಹೋಗಿದ್ದ. ಮನೆ ಗೇಟ್ ಹಾಕಿದ್ದ ಕಾರಣ ತಮಟೆ ಬಡಿಯುತ್ತಾ ವಾಪಸ್ ಆಗುತ್ತಾನೆ. ಆದರೆ, ಆತ ಎಂಜಲು ಉಗುಳುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಆತ ಭಿಕ್ಷುಕ ಎಂಬುದು ಗೊತ್ತಾಗಿದೆ.

    ಕಿಡಿಗೇಡಿಗಳು ವದಂತಿ ಹಬ್ಬಿಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಬಿದರಕಲ್ಲು ಬಳಿಯ ಘಟನೆ ಕುರಿತು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ಮಫ್ತಿಯಲ್ಲಿಯೂ ರಾತ್ರಿ ವೇಳೆ ಪೊಲೀಸರಿಗೆ ಗಸ್ತು ತಿರುಗುವಂತೆ ಹೇಳಲಾಗಿದೆ. ವದಂತಿ ಹಬ್ಬಿಸುವರ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

    ಲಾಕ್​ಡೌನ್​ ತೆರವು ಬಳಿಕ ಎಲ್ಲೆಡೆ ಏಕಕಾಲಕ್ಕೆ ಸಿಗದು ರೈಲು ಸೇವೆ: ಹಂತಹಂತವಾಗಿ ಆರಂಭಿಸಲು ಸಿದ್ಧತೆ

    ದೆಹಲಿಯ ಮಸೀದಿಗಳಲ್ಲಿ ಅಡಗಿದ್ದಾರೆ 800ಕ್ಕೂ ಹೆಚ್ಚು ಜಮಾತ್​ನ ವಿದೇಶಿ ಕೆಲಸಗಾರರು!: ಮೊಳಗಿದೆ ಮತ್ತೊಂದು COVID19 ಅಲರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts