More

    ಹೋಮ್ ಕ್ವಾರಂಟೈನ್ ಏನು?..ಎತ್ತ?

    ವಿಶ್ವವ್ಯಾಪಿಯಾದ ಕರೊನಾ ಸೋಂಕು ಹರಡುವುದನ್ನು ತಡೆಯಲು ಇರುವ ಒಂದು ಮಹತ್ವದ ಕ್ರಮ ಶಂಕಿತರು, ಸೋಂಕಿತರನ್ನು ಮನೆಯಲ್ಲಿ ಇತರರಿಂದ ಪ್ರತ್ಯೇಕಿಸಿ ಇಡುವುದು. ಇದಕ್ಕೆ ಮನೆ ಆರೈಕೆ (ಹೋಮ್ ಕ್ವಾರಂಟೈನ್) ಎನ್ನುತ್ತಾರೆ. ಈ ಹೋಮ್ ಕ್ವಾರಂಟೈನ್ ಹೇಗೆ ಮಾಡಬೇಕು ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡಿದೆ. ನೀವೂ ಈ ನಿಯಮಗಳನ್ನು ಪಾಲಿಸಿ ಕರೊನಾದಿಂದ ದೂರ ಇರಬಹುದು.

    ಅನುಸರಿಸಬೇಕಾದ ಆರೋಗ್ಯ ಕ್ರಮಗಳು

    • ಸಾಬೂನು ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್ ಆಧರಿತ ಸ್ಯಾನಿಟೈಸರ್​ಗಳಿಂದ ಕೈ ತೊಳೆಯಬೇಕು.
    • ಪಾತ್ರೆ, ಕುಡಿಯುವ ಲೋಟ, ಕಪ್, ಊಟದ ತಟ್ಟೆ, ಟವೆಲ್, ಹಾಸಿಗೆ ಮತ್ತಿತರ ಮನೆಯಲ್ಲಿರುವ ವಸ್ತುಗಳನ್ನು ಹಂಚಿಕೊಳ್ಳಬಾರದು.
    • ಸದಾಕಾಲ ವೈದ್ಯಕೀಯ ಮುಖಗವಸು ಧರಿಸಬೇಕು. 6 ರಿಂದ 8 ಗಂಟೆಗೊಮ್ಮೆ ಮುಖಗವಸು ಬದಲಾವಣೆ ಮತ್ತು ವಿಲೇವಾರಿ.
    • ಮನೆ ಆರೈಕೆ ವೇಳೆ ಸೋಂಕು ಪೀಡಿತರು, ಆರೈಕೆಗಾರರು ಅಥವಾ ನಿಕಟ ಸಂಪರ್ಕಗಳು ಬಳಸುವ ಮುಖಗವಸುಗಳನ್ನು ಸಾಮಾನ್ಯ ಬ್ಲೀಚ್ ದ್ರಾವಣ (5%) ಅಥವಾ ಸೋಡಿಯಂ ಹೈಪೊಕ್ಲೋರೈಡ್ ದ್ರಾವಣ (1%) ಬಳಸಿ ಸೋಂಕುರಹಿತಗೊಳಿಸಬೇಕು. ನಂತರ ಅದನ್ನು ಸುಡಬೇಕು ಅಥವಾ ಆಳ ಗುಂಡಿಯಲ್ಲಿ ಹೂತು ವಿಲೇವಾರಿ ಮಾಡಬೇಕು.
    • ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆಯಂಥ ರೋಗ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕು. ಅಥವಾ 011-23978046 ಸಂಖ್ಯೆಗೆ ತಿಳಿಸಬೇಕು.
    • ಪ್ರತ್ಯೇಕಿತರಿಗೆ ರೋಗ ಲಕ್ಷಣ ಕಂಡುಬಂದರೆ ಅವರ ಎಲ್ಲ ನಿಕಟ ಸಂರ್ಪತರು ಕೂಡ ಮನೆಯಲ್ಲಿ 14 ದಿನ ಕಾಲ ನಿರ್ಬಂಧಿತರಾಗುತ್ತಾರೆ. ಹೆಚ್ಚುವರಿಯಾಗಿ 14 ದಿನಗಳವರೆಗೆ ಅಥವಾ ಪ್ರಯೋಗಾಲಯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬರುವವರೆಗೆ ಈ ನಿರ್ಬಂಧ ಅನ್ವಯ.

    ಸಂಪರ್ಕವೆಂದರೇನು?

    1. ಆರೋಗ್ಯವಂತ ವ್ಯಕ್ತಿಯನ್ನೇ ಸಂಪರ್ಕ ಎಂದು ಪರಿಗಣನೆ. ವ್ಯಕ್ತಿಯಿಂದಲೇ ಇದು ಹರಡುತ್ತದೆ.
    2. ಇಂಥವರು ಸೋಂಕಿತರ ಸಂಪರ್ಕ ಅಥವಾ ಕಲುಷಿತ ವಾತಾವರಣದಲ್ಲಿದ್ದರೆ ಸೋಂಕು ಹರಡುವ ಅಪಾಯ ಹೆಚ್ಚು.
    3. ಶಿಫಾರಸು ಮಾಡಲಾದ ವೈಯಕ್ತಿಕ ರಕ್ಷಣಾ ಸಾಧನಗಳಿಲ್ಲದ (ಪಿಪಿಇ) ಅಥವಾ ಪಿಪಿಇ ಉಲ್ಲಂಘನೆಯೊಂದಿಗೆ ಸೋಂಕು ಪ್ರಕರಣದ ವ್ಯಕ್ತಿಯೊಂದಿಗೆ ನೇರ ದೈಹಿಕ ಸಂಪರ್ಕ ಅಥವಾ ಸಾಂಕ್ರಾಮಿಕ ಸ್ರಾವದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿ.
    4. ಸಾಂಕ್ರಾಮಿಕ ರೋಗವು 14 ದಿನಗಳಲ್ಲಿ ಕಾಣಿಸುವ ಸಂಭವವಿರುತ್ತದೆ.

    ಕುಟುಂಬ ಸದಸ್ಯರಿಗೆ ಸೂಚನೆಗಳು

    • ನಿಯೋಜಿತ ಕುಟುಂಬ ಸದಸ್ಯರು ಮಾತ್ರವೇ ಕ್ವಾರಂಟೈನ್​ಗೊಳಗಾದವರನ್ನು ನೋಡಿಕೊಳ್ಳಬೇಕು.
    • ಧೂಳು ಹಿಡಿದ ಹೊದಿಕೆ ಕೊಡವಬಾರದು. ಚರ್ಮದೊಂದಿಗೆ ನೇರ ಸಂಪರ್ಕ ಬರುವುದನ್ನು ತಪ್ಪಿಸಬೇಕು. ಸ್ವಚ್ಛತೆ ವೇಳೆ ಬಿಸಾಡಬಹುದಾದ ಕೈಗವಸು ಬಳಸಬೇಕು. ಕೈಗವಸು ತೆಗೆದ ನಂತರ ಕೈ ತೊಳೆಯಬೇಕು.
    • ಯಾರನ್ನೂ ಭೇಟಿಯಾಗಬಾರದು.

    ನೈರ್ಮಲ್ಯ ಕ್ರಮ

    • ಪ್ರತ್ಯೇಕಿತ ವ್ಯಕ್ತಿಯ ಕೋಣೆಯಲ್ಲಿನ ಮಂಚ, ಮೇಜು ಇತ್ಯಾದಿಗಳ ಮೇಲ್ಮೈಗಳನ್ನು 1% ಹೈಪೊಕ್ಲೋರೈಡ್ ದ್ರಾವಣದೊಂದಿಗೆ ಪ್ರತಿದಿನ ಸ್ವಚ್ಛಗೊಳಿಸಬೇಕು ಮತ್ತು ಸೋಂಕುರಹಿತಗೊಳಿಸಬೇಕು
    • ಸಾಮಾನ್ಯ ಬ್ಲೀಚ್ ದ್ರಾವಣ ಅಥವಾ ಫಿನಾಲಿಕ್ ಸೋಂಕು ನಿವಾರಕಗಳಿಂದ ಪ್ರತಿದಿನ ಶೌಚಾಲಯ ಸ್ವಚ್ಛಗೊಳಿಸಬೇಕು.
    • ಸಾಮಾನ್ಯ ಡಿಟರ್ಜೆಂಟ್​ನಿಂದ ಪ್ರತ್ಯೇಕಿತರ ಬಟ್ಟೆ ಮತ್ತು ಇತರ ಹೊದಿಕೆಗಳನ್ನು ಒಗೆಯಬೇಕು.

    ಪ್ರಕ್ರಿಯೆ ಹೇಗೆ?

    • ಪ್ರಯಾಣಕ್ಕೆ ಸಂಬಂಧಿತ ಅಥವಾ ಸಂಬಂಧವಿಲ್ಲದ ಶಂಕಿತ ಕರೊನಾ ಸೋಂಕಿತರ ಗುರುತಿಸುವಿಕೆ.
    • ನಿಗದಿತ ಆರೋಗ್ಯ ಕೇಂದ್ರಗಳಲ್ಲಿ ಅಂಥವರನ್ನು ಪ್ರತ್ಯೇಕಿಸಲಾಗುವುದು. ಶಂಕಿತ ಸೋಂಕಿತರೊಂದಿಗೆ ಸಂಪರ್ಕವಿರುವ ಎಲ್ಲ ಸಂರ್ಪತರ ಪಟ್ಟಿ ಸಿದ್ಧಪಡಿಸುವಿಕೆ.
    • ಶಂಕಿತರೊಂದಿಗೆ ಸಂಪರ್ಕವಿರುವ ಎಲ್ಲರಿಗೆ ಅಥವಾ ಕೋವಿಡ್-19 ದೃಢಪಟ್ಟ ಎಲ್ಲರಿಗೆ ಹೋಮ್ ಕ್ವಾರಂಟೈನ್ ಅನ್ವಯ.
    • ಹೋಮ್ ಕ್ವಾರಂಟೈನ್ ಅವಧಿಯು ದೃಢಪಡಿಸಿದ ಪ್ರಕರಣದ ಸಂಪರ್ಕದಿಂದ 14 ದಿನಗಳವರೆಗೆ ಅಥವಾ ಅದಕ್ಕಿಂತ ಮುಂಚೆಯೇ ಶಂಕಿತ ಪ್ರಕರಣದ ವ್ಯಕ್ತಿಗೆ ಪ್ರಯೋಗಾಲಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಅಲ್ಲಿಯವರೆಗೆ ಇರುತ್ತದೆ.

    ಪ್ರತ್ಯೇಕಿತ ವ್ಯಕ್ತಿ ಏನು ಮಾಡಬೇಕು?

    • ಉತ್ತಮ ಗಾಳಿ, ಬೆಳಕು, ಪ್ರತ್ಯೇಕ ಶೌಚಾಲಯ ವಿರುವ ಒಂದು ಕೋಣೆಯಲ್ಲಿ ವಾಸ್ತವ್ಯ.
    • ಕುಟುಂಬದ ಬೇರೊಬ್ಬ ಸದಸ್ಯ ಅದೇ ಕೋಣೆಯಲ್ಲಿ ಇರಬೇಕಾದರೆ ಇಬ್ಬರ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಅಗತ್ಯ.
    • ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಮನೆಯೊಳಗಿರುವ ಇತರ ಅಸ್ವಸ್ಥರಿಂದ ದೂರವಿರಬೇಕು.
    • ದಿಗ್ಬಂಧಿತರ ಓಡಾಟ ಮನೆಯೊಳಗೆ ಸೀಮಿತವಾಗಿರಬೇಕು.
    • ಮದುವೆ, ಅಂತ್ಯಕ್ರಿಯೆಯಂಥ ಸಾಮಾಜಿಕ/ಧಾರ್ವಿುಕ ಕಾರ್ಯಗಳಿಗೆ ಯಾವ ಕಾರಣಕ್ಕೂ ಹೋಗುವಂತಿಲ್ಲ.

    ಹೆಚ್ಚು ಉಪ್ಪಿನಾಂಶ ಆಹಾರ ಸೇವಿಸಿದರೆ ಕರೊನಾದಿಂದ ಬಚಾವ್​ ಆಗುವುದು ಕಷ್ಟ: ಸಂಶೋಧನಾ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts