More

    ನಮ್ಮನ್ನು ನೋಡಿ ಕರೊನಾ ಹೆದರುವಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಓಡಾಡೋಣ: ಫೋನ್​ಇನ್​ನಲ್ಲಿ ಶಾಸಕ ನಾಗೇಂದ್ರ ಸಲಹೆ

    ಬಳ್ಳಾರಿ: ಮಹಾಮಾರಿ ಕರೊನಾ ವೈರಸ್​ನಿಂದಾಗಿ ರಾಜ್ಯದ ಜನರು ಭಯಭೀತಗೊಂಡಿದ್ದು, ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಅನೇಕ ಗೊಂದಲದಲ್ಲಿ ಸಿಲುಕಿರುವ ರಾಜ್ಯದ ಜನತೆಗೆ ನಂ.1 ದಿನಪತ್ರಿಕೆ ವಿಜಯವಾಣಿ ಫೋನ್​ಇನ್​ ಕಾರ್ಯಕ್ರಮ ನಡೆಸುತ್ತಿದ್ದು, ಇಂದು(ಭಾನುವಾರ) ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಭಾಗವಹಿಸಿ ಜನರ ಗೊಂದಲಗಳನ್ನು ಪರಿಹರಿಸಿದರು.

    ಬಳ್ಳಾರಿಯ ವಿಜಯವಾಣಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ನಾಗರಿಕರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಲಾಕ್​ಡೌನ್​ನಿಂದ ಉಂಟಾಗಿರುವ ಆಹಾರ, ಔಷಧಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಶಾಸಕರಿಗೆ ಮನವರಿಕೆ ಮಾಡಿದರು. ಸಮರ್ಪಕ ನೀರಿನ ಪೂರೈಕೆಗಾಗಿ ಮನವಿ ಮಾಡಿದರು.

    ಜನರ ಅಹವಾಲು ಕೇಳಿದ ಶಾಸಕ ನಾಗೇಂದ್ರ ಅವರು ಕರೊನಾ ಸಂಕಷ್ಟದಲ್ಲಿ ಎಲ್ಲರಿಗೂ ಧೈರ್ಯ ತುಂಬಿದರು. ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಮಾಸ್ಕ್​ ಧರಿಸಲು ಸಲಹೆ ನೀಡಿದರು. ಸಾಕಷ್ಟು ಸಮಸ್ಯೆಗಳಿಗೆ ಶಾಸಕರು ಪರಿಹಾರ ಮಾರ್ಗ ತಿಳಿಸಿದ್ದು, ಸಮಗ್ರ ಮಾಹಿತಿ ನಾಳಿನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಲಿದೆ.

    ನಮ್ಮನ್ನು ನೋಡಿ ಕರೊನಾ ಹೆದರುವಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಓಡಾಡೋಣ: ಶಾಸಕ ನಾಗೇಂದ್ರ ಸಲಹೆ

    ಬಳ್ಳಾರಿ: ಮಹಾಮಾರಿ ಕರೊನಾ ವೈರಸ್​ನಿಂದಾಗಿ ರಾಜ್ಯದ ಜನರು ಭಯಭೀತಗೊಂಡಿದ್ದು, ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಅನೇಕ ಗೊಂದಲದಲ್ಲಿ ಸಿಲುಕಿರುವ ರಾಜ್ಯದ ಜನತೆಗೆ ನಂ.1 ದಿನಪತ್ರಿಕೆ ವಿಜಯವಾಣಿ ಫೋನ್​ಇನ್​ ಕಾರ್ಯಕ್ರಮ ನಡೆಸುತ್ತಿದ್ದು, ಇಂದು(ಭಾನುವಾರ) ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಭಾಗವಹಿಸಿ ಜನರ ಗೊಂದಲಗಳನ್ನು ಪರಿಹರಿಸಿದರು. #Coronavirus #Covid19 #MLABNagendra #PhoneInPragram #Vijayavani #Bellary

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಏಪ್ರಿಲ್ 26, 2020

    ಈ ಮಹಿಳೆ ಕರೊನಾ ರೋಗಿಗಳನ್ನು ಕಾಪಾಡಲು ಹೋಗಿ ಸಾವಿಗೀಡಾದ್ರಾ?: ಸುದ್ದಿಯ ಅಸಲಿಯತ್ತು ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts