More

    ಹಸೆಮಣೆ ಏರಲು ಸಜ್ಜಾಗಿದ್ದವರಿಗೆ ನಿರಾಶೆ ಮೂಡಿಸಿದ ಸರ್ಕಾರ; ಸದ್ಯಕ್ಕಿಲ್ಲ ‘ಸಪ್ತಪದಿ’

    ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷೆಯ ಸಾಮೂಹಿಕ ವಿವಾಹ ಯೋಜನೆ ‘ಸಪ್ತಪದಿ’ಯನ್ನು ಕರೊನಾತಂಕದ ಹಿನ್ನಲೆಯಲ್ಲಿ ಮುಂದೂಡಲಾಗಿದೆ.

    ಏಪ್ರಿಲ್​ 26ರಂದು ಮೊದಲ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಅದರಂತೆ ನೂರಕ್ಕೂ ಅಧಿಕ ದೇವಾಲಯಗಳಲ್ಲಿ ಸಿದ್ಧತೆ ನಡೆಸಲಾಗಿತ್ತು. ಆದರೆ, ಏಪ್ರಿಲ್​ 14ರವರೆಗೆ ಲಾಕ್​ಡೌನ್​ ಜಾರಿಯಲ್ಲಿದೆ. ನಂತರವೂ ಮುಗಿಯುತ್ತೋ ಇಲ್ಲವೋ ಗೊತ್ತಿಲ್ಲ. ಈ ಅನಿಶ್ಚಿತತೆಯ ಕಾರಣದಿಂದಾಗಿ ಮೊದಲ ಹಂತದ ವಿವಾಹ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    1,500 ಅರ್ಜಿಗಳು:
    ಸಪ್ತಪದಿ ಯೋಜನೆಯಲ್ಲಿ ವಿವಾಹವಾಗಲು ಈವರೆಗೆ ದಾಖಲೆ ಸಮೇತ 1,500 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಮೊದಲ ಹಂತ ಮುಂದೂಡಲಾಗಿದ್ದರೂ ಎರಡನೇ ಹಂತದ ವಿವಾಹ ಕಾರ್ಯಕ್ರಮಕ್ಕೆ ಮೇ 24ರ ದಿನವನ್ನು ನಿಗದಿ ಪಡಿಸಲಾಗಿದೆ. ಅಲ್ಲಿಯವರೆಗೆ ಪರಿಸ್ಥಿತಿ ಹತೋಟಿಗೆ ಬಂದರೆ, ಎರಡೂ ದಿನಾಂಕಗಳಂದು ನಿಗದಿಯಾಗಿದ್ದ ವಿವಾಹಗಳನ್ನು ಒಟ್ಟಿಗೆ ನೆರವೇರಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ಏನಿದು ಸಪ್ತಪದಿ ಯೋಜನೆ?
    ಆಡಂಬರದ ಅದ್ದೂರಿ ಮದುವೆಗಳಿಗೆ ಬದಲಾಗಿ ಸರಳ ಹಾಗೂ ಸಾಮೂಹಿಕ ವಿವಾಹಗಳನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶ. ಅದರಲ್ಲೂ ಮಕ್ಕಳ ಮದುವೆಗೆಂದು ಲಕ್ಷಾಂತರ ರೂ. ಸಾಲ ಮಾಡಿ ಪಾಲಕರು ಸಂಕಷ್ಟಕ್ಕೆ ಸಿಲುಕುವುದನ್ನು ತಡೆಯಲು ಸರ್ಕಾರದ ವತಿಯಿಂದಲೇ ಸಾಮೂಹಿಕ ವಿವಾಹಗಳನ್ನು ಧಾರ್ಮಿಕ ದತ್ತಿ ಇಲಾಖೆ ಮೂಲಕ ಸಪ್ತಪದಿ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ. ಇದರಲ್ಲಿ ವಧು-ವರರಿಗೆ ಚಿನ್ನದ ತಾಳಿ, ಸೀರೆ, ಬಟ್ಟೆ ಸೇರಿ 55,000 ರೂ. ಮೌಲ್ಯದ ವಸ್ತುಗಳನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಆಯಾ ದೇವಾಲಯಗಳಿಂದ ಭರಿಸಲಾಗುತ್ತದೆ.

    ಎ ದರ್ಜೆ ದೇವಾಲಯಗಳಲ್ಲಿ ಊಟದ ವ್ಯವಸ್ಥೆ:
    ಕರೊನಾ ಸಂಕಷ್ಟದಿಂದ ತೊಂದರೆಗೀಡಾದವರಿಗೆ ಹಾಗೂ ನಿರಾಶ್ರಿತ ವಲಸೆ ಕಾರ್ಮಿಕರಿಗೆ ಮುಜರಾಯಿ ಇಲಾಕೆಯ ಎ ದರ್ಜೆ ದೇವಾಲಯಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ಲಾಕ್‌ಡೌನ್‌ ನಡುವೆ ನಡೆಯಿತು ವಿವಾಹ: ನವ ದಂಪತಿಗೆ ಕಾದಿತ್ತು ಶಾಕ್‌, ಈಗ ಠಾಣೆಯಲ್ಲಿ ಲಾಕ್‌!

    ಕರೊನಾ ವೈರಸ್​ ವಿರುದ್ಧ ಹೋರಾಟಕ್ಕೆ ಸಹಕಾರ: ಭಾರತಕ್ಕೆ 1,70,000 ಪಿಪಿಇ ಕಿಟ್​ಗಳನ್ನು ದಾನವಾಗಿ ನೀಡಿದ ಚೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts