More

    ವಿದೇಶದಲ್ಲಿ ವ್ಯಾಸಂಗದ ಕನಸಿಗೆ ತಣ್ಣಿರೆರಚಿದ ಕರೊನಾ: ಪರೀಕ್ಷೆ ವಿಳಂಬ, ಪ್ರವೇಶ ಮರೀಚಿಕೆ

    ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ ಎಲ್ಲರಿಗೂ ಸಂಕಷ್ಟವನ್ನು ತಂದಿಟ್ಟಿದೆ. ವಿದ್ಯಾರ್ಥಿಗಳು ಇದರಿಂದ ಹೊರತಾಗಿಲ್ಲ. ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳಿಂದ ಹೊರಗುಳಿದಿದ್ದಾರೆ. ಜತೆಗೆ, ಪರೀಕ್ಷೆಗಳ ಮುಂದೂಡಿಕೆಯಿಂದಾಗಿ ಭವಿಷ್ಯದ ಬಗ್ಗೆಯೂ ಚಿಂತಾಕ್ರಾಂತರಾಗುವಂತಾಗಿದೆ.

    ಕೇಂದ್ರ ಪಠ್ಯಕ್ರಮ ಹಾಗೂ ವಿವಿಧ ರಾಜ್ಯಗಳ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಪರೀಕ್ಷೆಗಳು ಈ ಹೊತ್ತಿಗಾಗಲೇ ಮುಗಿದು, ಫಲಿತಾಂಶವನ್ನು ಎದುರು ನೋಡಬೇಕಾಗಿತ್ತು. ಏಪ್ರಿಲ್​ 10ರ ವೇಳೆಗೆ ಕೆಲ ಶಿಕ್ಷಣ ಮಂಡಳಿಗಳು ಫಲತಾಂಶವನ್ನು ಘೋಷಿಸಿರುತ್ತಿದ್ದವು. ಆದರೆ, ಬಹುತೇಕ ರಾಜ್ಯಗಳಲ್ಲಿ ಪರೀಕ್ಷೆಗಳು ಇನ್ನೂ ಮುಗಿದಿಲ್ಲ ಹಾಗೂ ಇನ್ನು ಕೆಲವೆಡೆ ಪರೀಕ್ಷೆಗಳೇ ಆರಂಭವಾಗಿಲ್ಲ.

    ಲಾಕ್​ಡೌನ್​ ಅವಧಿ ಮುಗಿದು, ನಂತರ ಪರೀಕ್ಷಾ ದಿನಾಂಕ ಘೋಷಣೆಯಾಗುವ ಹೊತ್ತಿಗೆ ಈ ತಿಂಗಳು ಮುಗಿದಿರುತ್ತದೆ. ( ಲಾಕ್​ಡೌನ್​ ವಿಸ್ತರಣೆಯಾಗದಿದ್ದಲ್ಲಿ ಮಾತ್ರ) ನಂತರ ಫಲಿತಾಂಶ ಘೋಷಣೆಗೆ ಇನ್ನೆರಡು ತಿಂಗಳು ಬೇಕಾಗುತ್ತದೆ. ಈ ವಿಳಂಬದಿಂದ ದೇಶದಲ್ಲೇ ವಿವಿಧ ಕೋರ್ಸ್​ಗಳ ವ್ಯಾಸಂಗಕ್ಕೆ ಉತ್ಸುಕರಾಗಿರುವವರಿಗೆ ತೊಂದರೆಯಾಗಲಿಕ್ಕಿಲ್ಲ. ಏಕೆಂದರೆ ಈ ವಿಳಂಬಕ್ಕೆ ಅನುಗುಣವಾಗಿ ವೇಳಾಪಟ್ಟಿಯನ್ನು ಹೊಂದಿಕೆ ಮಾಡಿಕೊಳ್ಳಬಹುದು. ಆದರೆ, ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂಬ ಕನಸು ಹೊಂದಿದ್ದವರು ನಿರಾಸೆ ಅನುಭವಿಸುವಂತಾಗಿದೆ.

    ವಿದೇಶದಲ್ಲಿ ವ್ಯಾಸಂಗ ಮಾಡಬೇಕೆನ್ನುವವವರು ವರ್ಷದಿಂದಲೇ ಅದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿರುತ್ತಾರೆ. ಅರ್ಹತಾ ಪರೀಕ್ಷೆಗಳಿಗೆ ಸಜ್ಜಾಗಿರುತ್ತಾರೆ. ಅದಕ್ಕಾಗಿ ಅಗತ್ಯ ಶೈಕ್ಷಣಿಕ ಅರ್ಹತೆಗಳನ್ನು ಹೊಂದಲು ಇಲ್ಲಿ ಪರೀಕ್ಷೆಗಳು ವಿಳಂಬವಾಗಿರುವುದು ತೊಡಕಾಗಿ ಪರಿಣಮಿಸಲಿದೆ.

    ಇದಷ್ಟೇ ಅಲ್ಲ, ಈಗಾಗಲೇ ವಿದೇಶದ ಶಿಕ್ಷಣ ಸಂಸ್ಥೆಗಳಿಂದ ಪ್ರವೇಶಾವಕಾಶವನ್ನು ಪಡೆದವರು ಅಲ್ಲಿಗೆ ತೆರಳುವಂತಿಲ್ಲ. ಶೈಕ್ಷಣಿಕ ಚಟುವಟಿಕೆ ಹಿಂದುಳಿಯಬಾರದು ಎಂಬ ಕಾರಣಕ್ಕೆ ಆನ್​ಲೈನ್​ ತರಗತಿಗಳನ್ನು ಆರಂಭಿಸಿವೆ. ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ವಿದೇಶದಲ್ಲಿ ವ್ಯಾಸಂಗ ಮಾಡುವ ಕನಸು ಹೊಂದಿದ್ದವರು ಆನ್​ಲೈನ್​ ತರಗತಿಗಳಿಂದ ಸಂತುಷ್ಟಗೊಳ್ಳಲು ಸಾಧ್ಯವೇ? ಈ ಕಾರಣಕ್ಕೆ ಕೆಲವರು ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದೇಶದಲ್ಲಿ ವ್ಯಾಸಂಗಕ್ಕೆ ಯೋಜನೆ ರೂಪಿಸುತ್ತಿದ್ದರೆ, ಇನ್ನುಳಿದರು ದೇಶದಲ್ಲಿಯೇ ಪ್ರತ್ಇಷ್ಟೀತ ಕಾಲೇಜುಗಳ ಮೊರೆ ಹೋಗಲು ಮುಂದಾಗಿದ್ದಾರೆ.

    ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ವಿದೇಶಕ್ಕೆ ತೆರಳು ವಿದ್ಯಾರ್ಥಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇರದು.

    ಕಾಶ್ಮೀರ ಕಣಿವೆಗೆ ನುಸುಳಲು ಯತ್ನಿಸಿದ 9 ಉಗ್ರರ ಹತ್ಯೆ, ಭದ್ರತಾ ಪಡೆಯ ಮೂವರು ಸಿಬ್ಬಂದಿ ಹುತಾತ್ಮ

    ಜಾಲಿ ರೈಡ್‌ಗೆ ಅಲ್ಲ- ಹೊಟ್ಟೆನೋವಿನ ಟ್ರೀಟ್‌ಮೆಂಟ್‌ಗಾಗಿ ಹೊರಬಂದಿದ್ದೆ: ವೈರಲ್‌ ಸುದ್ದಿಯ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts