More

    ವಿಜಯವಾಣಿ ಡಿಜಿಟಲ್​ ಮಾಧ್ಯಮ ಹೆಸರು, ಲೋಗೋ ದುರ್ಬಳಕೆ

    ಬೆಂಗಳೂರು: ಕರೊನಾ ಭೀತಿಯ ನಡುವೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ಸಂಖ್ಯೆಯು ಹೆಚ್ಚಾಗಿದ್ದು, ಕೆಲವರು ವಿಜಯವಾಣಿ.ನೆಟ್ (Vijayavani.net) ಡಿಜಿಟಲ್​ ಮಾಧ್ಯಮ ಹೆಸರು ಮತ್ತು ಲೋಗೋವನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ.

    ವಿಜಯವಾಣಿ ವೆಬ್​ಸೈಟ್​ ವಿನ್ಯಾಸದಂತೆ ಫೋಟೋ ಎಡಿಟ್​ ಮಾಡಿ ಅದರ ಮೂಲಕ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

    ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ ತೀವ್ರ ಇಳಿಮುಖವಾಗಿದೆ ಎಂದು ಸುಳ್ಳು ಸುದ್ದಿಯನ್ನು ವಿಜಯವಾಣಿ.ನೆಟ್​ ಹೆಸರಿನಲ್ಲಿ ಹರಿಬಿಟ್ಟಿರುವುದು ಗಮನಕ್ಕೆ ಬಂದಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಈ ರೀತಿಯ ಕಿಡಿಗೇಡಿತನವನ್ನು ಸಹಿಸಲಾಗದು. ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಮಾಹಿತಿಯನ್ನಷ್ಟೇ ಪ್ರತಿನಿತ್ಯ ನಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ.

    ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಬಾಗಲಕೋಟೆ ವರದಿಗೆ ಸಂಬಂಧಿಸಿ ವಿಜಯವಾಣಿ.ನೆಟ್​ ಹೆಸರಿನಲ್ಲಿ ಹರಿದಾಡುತ್ತಿರುವ ಸುದ್ದಿ ನಕಲಿಯಾಗಿದೆ. ಇಂತಹ ಸುಳ್ಳು ಸುದ್ದಿಯನ್ನು ಸೃಷ್ಟಿಸುವವರು ಮತ್ತು ಶೇರ್ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು.

    ರಾಜ್ಯದಲ್ಲಿ ಒಂದೇ ದಿನ 19 ವೈರಸ್‌ ಪೀಡಿತರು- ಇಬ್ಬರ ಸಾವು: 279ಕ್ಕೇರಿದ ಸೋಂಕಿತರ ಸಂಖ್ಯೆ 80 ಮಂದಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts