More

    ಮಹಾಮಾರಿ ಕರೊನಾ ವೈರಸ್​ ಗಾಳಿಯ ಮೂಲಕ ಹರಡುತ್ತದೆಯೇ? ಪಿಐಬಿ ಫ್ಯಾಕ್ಟ್​ಚೆಕ್​ ಹೇಳಿದ್ದೇನು?

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್​ಡೌನ್​ ಘೋಷಿಸಿವೆ. ಇಷ್ಟೇ ಅಲ್ಲದೆ ಮುನ್ನೆಚ್ಚರಿಕೆ, ಅರಿವು ಮೂಡಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ.

    ಕರೊನಾ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಖಾ ಸುಮ್ಮನೇ ಭೀತಿ ಹರಡುತ್ತಿದ್ದಾರೆ. ಕರೊನಾ ವೈರಸ್​ ವಾಯುಗಾಮಿಯಾಗಿದೆ. ಅದು ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಸಂದೇಶವೊಂದು ಹರಿದಾಡುತ್ತಿದೆ. ಆದರೆ, ಇದು ಸುಳ್ಳೆಂದು ಕೇಂದ್ರ ಸರ್ಕಾರದ ಪ್ರೆಸ್​ ಇನ್ಫರ್ಮೇಶನ್​ ಬ್ಯೂರೋ(ಪಿಐಬಿ) ಅಲ್ಲಗೆಳೆದಿದೆ.

    ಕರೊನಾ ವೈರಸ್​ ವಾಯುಗಾಮಿಯಲ್ಲ. ಅದು ಮುಖ್ಯವಾಗಿ ಹನಿಗಳ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಬಾಯಿಯಿಂದ ಹೊರಬರುವ ಜೊಲ್ಲು ಹನಿಗಳ ರೂಪದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸ್ಪರ್ಶಿಸಿದಾಗ ಆತನಿಗೂ ಸೋಂಕು ತಗುಲುತ್ತದೆ ಎಂದು ಪಿಐಬಿ ಸ್ಪಷ್ಟಪಡಿಸಿದೆ.

    ಕೋವಿಡ್​-19 ತಗುಲಿದ ವ್ಯಕ್ತಿಯಿಂದ ಒಂದು ಮೀಟರ್​ ಅಂತರದ ಒಳಗಿದ್ದರೆ ಉಸಿರಾಟದಿಂದಲೂ ಸೋಂಕು ತಗುಲುವ ಸಾಧ್ಯತೆ ಇದೆ. ಸೋಕಿತ ವ್ಯಕ್ತಿ ಸ್ಪರ್ಶಿಸಿದ ವಸ್ತುಗಳನ್ನು ಸ್ಪರ್ಶಿಸಿ ಬಳಿಕ ಕೈಗಳಿಂದ ಕಣ್ಣು, ಬಾಯಿ ಮತ್ತು ಮೂಗನ್ನು ಮುಟ್ಟಿಕೊಂಡರು ಸೋಂಕಿಗೆ ಗುರಿಯಾಗಲಿದ್ದಾರೆ.

    ಹೀಗಾಗಿ ಕರೊನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಪಿಐಬಿ ಕೆಲ ಸಲಹೆಗಳನ್ನು ನೀಡಿದೆ. ಇತರರೊಂದಿಗೆ ಒಂದು ಮೀಟರ್​ನಷ್ಟು ಅಂತರವನ್ನ ಕಾಯ್ದುಕೊಳ್ಳಬೇಕು. ಪದೇ ಪದೇ ಕೈಗಳನ್ನು ಶುಚಿಗೊಳಿಸುತ್ತಿರಬೇಕು. ಆಗಾಗ ಮೇಲ್ಮೈಗಳನ್ನು ಸೊಂಕುರಹಿತಗೊಳಿಸಬೇಕು ಅಂದರೆ ಶುಚಿಗೊಳಿಸುತ್ತಿರಬೇಕು ಮತ್ತು ಕಣ್ಣು, ಬಾಯಿ ಹಾಗೂ ಮೂಗು ಮುಟ್ಟಿಕೊಳ್ಳುವುದನ್ನು ನಿರ್ಲಕ್ಷಿಸಬೇಕು. (ಏಜೆನ್ಸೀಸ್​)

    FACT CHECK: ಮೀಸೆ, ಗಡ್ಡ ಇದ್ದವರಿಗೆ ಕರೊನಾ ಬಹುಬೇಗ ಬರುತ್ತಾ? ಮುಖದ ಕೂದಲು ಕ್ಷೌರ ಮಾಡಿಸಿಕೊಳ್ಳಲು ಸಿಡಿಸಿ ಹೇಳಿದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts