More

    ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರೆ ಮಾತ್ರ ಕರೊನಾ ಹೋಗುತ್ತೆ: ಸಂಸದ

    ಸಂಭಾಲ್ (ಉತ್ತರ ಪ್ರದೇಶ): ಕರೊನಾ ಬಿಕ್ಕಟ್ಟು ಹೋಗಲಾಡಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್‌ ಧರಿಸಿ, ಗುಂಪು ಸೇರಬೇಡಿ ಎಂದು ಸರ್ಕಾರಗಳು, ವೈದ್ಯರು, ಪೊಲೀಸರು, ಕರೊನಾ ವಾರಿಯರ್ಸ್‌ ಎಲ್ಲರೂ ದಿನನಿತ್ಯವೂ ಹೇಳುತ್ತಲೇ ಬಂದರೆ ಉತ್ತರ ಪ್ರದೇಶದ ಸಂಭಾಲ್ ಮೂಲದ ಸಮಾಜವಾದಿ ಪಕ್ಷದ ಸಂಸದ ಡಾ.ಶಫಿಕುರ್ ರಹಮಾನ್ ಬರ್ಕ್ ಮಾತ್ರ ವಿಭಿನ್ನ ಸಲಹೆ ನೀಡಿದ್ದಾರೆ.

    ‘ಮಸೀದಿಗಳಲ್ಲಿ ಮುಸ್ಲಿಮರು ನಮಾಜ್ ಸಲ್ಲಿಸುವುದರಿಂದ ಯಾರೂ ತಡೆಯಲು ಸಾಧ್ಯವಿಲ್ಲ. ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ ಮಾತ್ರ ಕರೊನಾ ನಿರ್ಮೂಲನೆ ಮಾಡಲು ಸಾಧ್ಯ, ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಯಿಂದ ಮಾತ್ರ ದೇಶ ಉಳಿಯುತ್ತದೆ’ ಎಂದು ಡಾ.ಶಫಿಕುರ್ ರಹಮಾನ್ ಬರ್ಕ್ ಸಲಹೆ ನೀಡಿದ್ದಾರೆ.

    ಜನ ಒಟ್ಟಿಗೇ ಸೇರಿದರೆ ಕರೊನಾ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈದ್ ಉಲ್ ಜುಹಾ ಸಂದರ್ಭದಲ್ಲಿ ಮಸೀದಿಗಳು ಮತ್ತು ಈದ್ಗಾಗಳಲ್ಲಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ. ಇದರ ವಿರುದ್ಧ ಮಾತನಾಡಿರುವ ಬರ್ಕ್‌, ಈ ರೀತಿ ನಿಷೇಧ ಹೇರಿರುವುದು ಸರಿಯಿಲ್ಲ. ಮಸೀದಿ ಮತ್ತು ಈದ್ಗಾಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿರುವುದರ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಸರ್ಕಾರ ತೆಗೆದುಹಾಕಬೇಕು, ಏಕೆಂದರೆ ದೇಶದ ಎಲ್ಲ ಮುಸ್ಲಿಮರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ಮಾತ್ರ ಈ ದೇಶ ಉಳಿಯಲಿದೆ, ಕರೊನಾ ಹೋಗಲಿದೆ ಎಂದಿದ್ದಾರೆ.

    ಇದನ್ನೂ ಓದಿ: ವೈದ್ಯರೂ ಇವರೇ, ಟೀಚರೂ ಇವರೇ… ಬಂದವರ ಗತಿ ದೇವರಿಗೇ ಪ್ರೀತಿ!

    ಕರೊನಾ ಸಾಂಕ್ರಾಮಿಕ ಬಿಕ್ಕಟ್ಟಿನಿಂದಾಗಿ ಉತ್ತರ ಪ್ರದೇಶದ ಸರ್ಕಾರ ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದೆ. ಮಸೀದಿಗಳಲ್ಲಿ ಕೇವಲ 5 ಜನರಿಗೆ ನಮಾಜ್ ಸಲ್ಲಿಸಲು ಅನುಮತಿ ನೀಡಲಾಗಿದ್ದು, ಇದರ ವಿರುದ್ಧವಾಗಿ ಸಂಸದ ಮಾತನಾಡಿದ್ದಾರೆ.
    ದೇಶದ ಎಲ್ಲ ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದ ಹೊರತು ಕರೊನಾವೈರಸ್ ಮಹಾಮಾರಿಯನ್ನು ತೊಡೆದುಹಾಕುವುದು ಸಾಧ್ಯವೇ ಇಲ್ಲ ಎಂದೂ ಸ್ಪಷ್ಟವಾಗಿ ಹೇಳಿದ್ದಾರೆ.

    ಈದ್ ಉಲ್ ಜುಹಾ ಸಂದರ್ಭದಲ್ಲಿ ನಡೆಯುವ ಜಾನುವಾರು ಮಾರುಕಟ್ಟೆಯನ್ನು ನಿಷೇಧಿಸಿದ್ದಕ್ಕಾಗಿ ಜಿಲ್ಲಾ ಆಡಳಿತದ ಬಗ್ಗೆ ಇವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈದ್ ಉಲ್ ಜುಹಾ ಮುಸ್ಲಿಮರಿಗೆ ದೊಡ್ಡ ಹಬ್ಬವಾಗಿದೆ, ಮುಸ್ಲಿಮರು ಪ್ರಾಣಿಗಳ ಖರೀದಿ ಮಾಡದಿದ್ದರೆ, ಅವರು ಹಬ್ಬವನ್ನು ಹೇಗೆ ಆಚರಿಸಲಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಪ್ರಾಣಿ ಮಾರುಕಟ್ಟೆಗಳ ಮೇಲೆ ವಿಧಿಸಿರುವ ನಿಷೇಧವನ್ನು ತೆರೆವುಗೊಳಿಸಬೇಕು ಎಂದಿದ್ದಾರೆ.

    ಸಾಮೂಹಿಕ ಪ್ರಾರ್ಥನೆಗೆ ಅನುಮತಿ ಕೋರಿ ಇವರು ಹಲವಾರು ಮೌಲಾನಾ ಮತ್ತು ಮುಸ್ಲಿಂ ಮುಖಂಡರೊಂದಿಗೆ ಜತೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನಕ್ಕೆ ಬರಲಿಲ್ಲ. (ಏಜೆನ್ಸೀಸ್‌)

    ಡ್ರೋನ್‌ ಪ್ರತಾಪ್‌ ಎಲ್ಲಿದ್ದಾನೆಂದು ಕೊನೆಗೂ ಕಂಡುಹಿಡಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts