More

    FACT CHECK |ಕೊರೊನಾ ವೈರಸ್​ ದಾಳಿಗೆ ಚೀನಾದಲ್ಲಿ 1 ಲಕ್ಷ 20 ಸಾವಿರ ಮಂದಿ ಮೃತಪಟ್ಟಿರುವುದು ನಿಜವೇ?

    ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್​ 1 ಲಕ್ಷ 20 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿದೆ. 28 ಲಕ್ಷ ಮಂದಿಗೆ ಸೋಂಕು ಹರಡಿದೆ ಎನ್ನುವ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

    ಫೇಸ್​ಬುಕ್​ ಬಳಕೆದಾರ ಎಲಿ ವಿಂಟರ್ಸನ್​ ಎಂಬುವವರು ಮಾರಣಾಂತಿಕ ಕೊರೊನಾ ವೈರಸ್​ ಚೀನಾದಲ್ಲಿ 1 ಲಕ್ಷ 20 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಅಲ್ಲದೆ 28 ಲಕ್ಷ ಮಂದಿಗೆ ಸೋಂಕು ಹರಡಿದೆ. ರೋಗಕ್ಕೆ ತುತ್ತಾದವರನ್ನು ಸರ್ಕಾರವೆ ಕೊಲ್ಲುತ್ತಿದೆ ಎಂದು ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ ನಕಲಿ ಎಂಬುದು ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ.

    ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಫೋಸ್ಟ್​ ಅನ್ನು ಪರಿಶೀಲನೆಗೆ ಒಳಪಡಿಸಿ ನಕಲಿ ಎಂದು ಸಾಬೀತುಪಡಿಸಿದೆ.

    ಚೀನಾದಲ್ಲಿ ಇಲ್ಲಿವರೆಗೆ ರೋಗಕ್ಕೆ ತುತ್ತಾಗಿ 490 ಮಂದಿ ಮೃತಪಟ್ಟಿದ್ದಾರೆ. ಅಂದಾಜು 20 ಸಾವಿರ ಮಂದಿಗೆ ಸೋಂಕು ಹರಡಿದೆ ಎಂದು ಚೀನಾ ಗ್ಲೋಬಲ್​ ಟೆಲಿವಿಷನ್​ ನೆಟ್​ವರ್ಕ್​ ತಿಳಿಸಿದೆ. ಚೀನಾದಲ್ಲಿ 20.471 ಮಂದಿಗೆ ಹಾಗೂ ವಿದೇಶದಲ್ಲಿ 159 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಚೀನಾ ಸರ್ಕಾರ ದೃಢಪಡಿಸಿದೆ. ಹೀಗಾಗಿ ಕೊರೊನಾ ವೈರಸ್​ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್​ ನಕಲಿ ಎಂದು ಪತ್ತೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts