More

    ಭಾರತದ ಈ ಭಾಗದಲ್ಲಿ ಕರೊನಾ ಲಸಿಕೆ ಕಡ್ಡಾಯ! ಒಲ್ಲೆ ಎನ್ನುವವರಿಗೆ ಶಿಕ್ಷೆ

    ಪುದುಚೆರಿ: ಕರೊನಾ ಸೋಂಕಿನ ವಿರುದ್ಧ ಮಾನವ ದೇಹಕ್ಕೆ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾದ ಕರೊನಾ ಲಸಿಕೆಗಳನ್ನು ಎಲ್ಲ ನಾಗರೀಕರು ಪಡೆಯುವಂತೆ ಸರ್ಕಾರದ ಪ್ರಯತ್ನ ಸಾಗಿದೆ. ಆದಾಗ್ಯೂ ವಿವಿಧ ಕಾರಣಗಳನ್ನು ಹೇಳಿ ಹಲವರು ಲಸಿಕೆ ಪಡೆಯದೇ ಇರುವುದು ಕಳವಳಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿಗೆ ಪರಿಹಾರ ಹುಡುಕಲು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

    ಪುದುಚೆರಿಯ ರಾಜ್ಯ ಆರೋಗ್ಯ ಮಿಷನ್​ ನಿರ್ದೇಶಕ ಡಾ.ಶ್ರೀರಾಮುಲು ಕೋವಿಡ್​19 ಲಸಿಕೆಯನ್ನು ಎಲ್ಲ ವಯಸ್ಕರಿಗೂ ಕಡ್ಡಾಯಗೊಳಿಸಿ ಆಜ್ಞೆ ಹೊರಡಿಸಿದ್ದಾರೆ. ತಕ್ಷಣವೇ ಜಾರಿಗೆ ಬರಲಿರುವ ಈ ನಿರ್ದೇಶನವನ್ನು ಪಾಲಿಸದವರಿಗೆ ಕಾನೂನು ರೀತ್ಯ ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದಿದ್ದಾರೆ.

    ಇದನ್ನೂ ಓದಿ: ಒಮಿಕ್ರಾನ್​ ಎಲ್ಲರನ್ನು ಕೊಲ್ಲಲಿದೆ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವೈದ್ಯ!

    “ಪುದುಚೆರಿ ಸಾರ್ವಜನಿಕ ಆರೋಗ್ಯ ಕಾಯ್ದೆ, 1973 ರ ಸೆಕ್ಷನ್​ 8 ಮತ್ತು ಸೆಕ್ಷನ್​ 54(1) ರಡಿ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ತಕ್ಷಣದಿಂದ ಕರೊನಾ ಲಸಿಕೀಕರಣವನ್ನು ಕಡ್ಡಾಯಗೊಳಿಸಲಾಗಿದೆ” ಎಂದು ಸರ್ಕಾರದ ಸುತ್ತೋಲೆ ಹೇಳಿದೆ. ಈ ಕಾನೂನು ಉಲ್ಲಂಘಿಸಿದವರಿಗೆ ಯಾವ ಪ್ರಮಾಣದ ಶಿಕ್ಷೆ ವಿಧಿಸಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

    ದಿನದಿನಕ್ಕೂ ಹೊಸ ರೂಪಾಂತರಗಳನ್ನು ಹೊಂದಿ ಜಗತ್ತಿನಲ್ಲೇ ತಲ್ಲಣ ಮೂಡಿಸಿರುವ ಕರೊನಾ ವೈರಾಣುವಿನ ಹೆಚ್ಚು ಹರಡಬಲ್ಲ ಹೊಸ ರೂಪಾಂತರವಾದ ಒಮಿಕ್ರಾನ್​ ಇದೀಗ ಹೊಸ ಆತಂಕ ಮೂಡಿಸಿದೆ. ಭಾರತದಲ್ಲಿ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರಿಯ ಅಪಾಯವೂ ನಿರಂತರವಾಗಿ ಮುಂದುವರಿದಿದೆ. ಹೀಗಿರುವಾಗ ಲಸಿಕೆ ಪಡೆದು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)

    ಬೋನಿಗೆ ಬಿದ್ದ ಚಿರತೆ ಮರಿಗಳು; ನೋಡಲು ಮುಗಿಬಿದ್ದ ಜನತೆ

    VIDEO| ಬ್ಲೌಸ್​ ಬದ್ಲು ಮೆಹೆಂದಿ ತೊಟ್ಟ ನಾರೀಮಣಿ! ಇನ್ನೂ ಏನೇನು ಮಾಡ್ತಾರೋ ಎಂದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts