More

    ಪ್ರಜಾಪ್ರಭುತ್ವ ಭದ್ರ ಬುನಾದಿಗೆ ಮತ ಕಡ್ಡಾಯ

    ಕಾರಟಗಿ; ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ತಾಲೂಕಿನ ಚಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮ ಪಂಚಾಯಿತಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಕುರಿತು ಬುಧವಾರ ರಂಗೋಲಿ ಸ್ಪರ್ಧೆ ಏರ್ಪಡಿಸಲಾಯಿತು.

    ಇದನ್ನೂ ಓದಿ: ಮತಗಟ್ಟೆಗಳ ಮೂಲಸೌಲಭ್ಯ ಪರಿಶೀಲನೆ

    ಪ್ರಭಾರಿ ಮುಖ್ಯಶಿಕ್ಷಕಿ ಅನ್ನಪೂರ್ಣ ಸಜ್ಜನ್ ಮಾತನಾಡಿ, ಹದಿನೆಂಟು ವರ್ಷಪೂರ್ಣಗೊಂಡ ಯುವಜನರು ಸೇರಿ ಎಲ್ಲರೂ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಪ್ರತಿ ಮತ ಅತ್ಯಗತ್ಯ ಎಂದು ತಿಳಿಸಿದರು.

    ವಿದ್ಯಾರ್ಥಿಗಳು ಬೀಡಿಸಿದ ಮತಯಂತ್ರ, ಸಂಸತ್ ಭವನ, ತಪ್ಪದೇ ಮತದಾನ ಮಾಡಿ, ವೋಟರ್ಸ್ ಡೇ, ಧ್ವಜಸ್ತಂಭ ಚಿತ್ರಗಳು ಗಮನ ಸೆಳೆದವು. ಸ್ಪರ್ಧೆಯಲ್ಲಿ ವಿಜೆತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಮತದಾನ ಪ್ರತಿಜ್ಞಾವಿಧಿ ಬೋಧಿಸಲಾಯಿತು.

    ಗ್ರಾಪಂ ಸಿಬ್ಬಂದಿ ಗುರುರಾಜ, ವೆಂಕಟೇಶ, ಶೈನಾಜ್‌ಬೇಗಂ, ಹನುಮೇಶ, ಸಹಶಿಕ್ಷಕರಾದ ಮುತ್ತಣ್ಣ, ಬಸವರಾಜ, ವಾಣಿ, ಮೌನೇಶ, ವಹುದಾಬೇಗಂ, ಅತಿಥಿಶಿಕ್ಷಕರಾದ ಸರಸ್ವತಿ, ಸವಿತಾ, ಜಯಮ್ಮ, ಹುಲಿಗೆಮ್ಮ, ಶರಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts