More

    ಈ ತಿಂಗಳಲ್ಲೇ ಮಕ್ಕಳಿಗೂ ಕರೊನಾ ಲಸಿಕೆ: ಆರೋಗ್ಯ ಸಚಿವ ಸುಧಾಕರ್

    ಬೆಂಗಳೂರು: ಭಾರತದಲ್ಲಿ ಈವರೆಗೆ ವಯಸ್ಕರಿಗೆ ಕರೊನಾ ಲಸಿಕಾ ಅಭಿಯಾನ ಭರದಿಂದ ಸಾಗುತ್ತಿದ್ದರೂ, ಮಕ್ಕಳಿಗೆ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎಂಬ ಪ್ರಶ್ನೆ ಎಲ್ಲರನ್ನೂ ಮನೆಮಾಡಿದೆ. ಈ ಪ್ರಶ್ನೆಗೆ ಇದೀಗ ರಾಜ್ಯದ ಆರೋಗ್ಯ ಸಚಿವರಾದ ಡಾ.ಆರ್​.ಸುಧಾಕರ್​ ಉತ್ತರ ನೀಡಿದ್ದಾರೆ. ಈ ತಿಂಗಳಲ್ಲೇ ಮಕ್ಕಳಿಗೆ ಲಸಿಕೆ ಬರಲಿದೆ ಎಂದು ತಿಳಿಸಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್​, ಭಾರತದಲ್ಲಿ ಸದ್ಯದಲ್ಲೇ ಫೇಸ್ 3 ವ್ಯಾಕ್ಸಿನೇಷನ್‌ ಆರಂಭವಾಗಲಿದೆ. ಮಕ್ಕಳ ಮೇಲೆ ಕರೊನಾ ಲಸಿಕೆ ಪ್ರಯೋಗಗಳು ಕೊನೇ ಹಂತ ತಲುಪಿವೆ. ಕೇಂದ್ರ ದರ ನಿಗದಿಗಾಗಿ ಸಭೆ ನಡೆಸಲಿದೆ. ದರ ನಿಗದಿ ಬಳಿಕ ಅಂತಿಮವಾಗಿ ತೀರ್ಮಾನವಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಮಕ್ಕಳಿಗೂ ಲಸಿಕೆ ಬರಲಿದೆ. ಕೇಂದ್ರ ಯಾವಾಗ ಬೇಕಾದ್ರೂ ಘೋಷಣೆ ಮಾಡಬಹುದು ಎಂದರು.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಹಾಕಿಗೆ ಕನ್ನಡಿಗ ಎಸ್‌ವಿ ಸುನೀಲ್ ವಿದಾಯ

    ಮಾರ್ಗಸೂಚಿ ಅನ್ವಯ ಈಗ ಶಾಲೆಗಳು ಆರಂಭವಾಗಿವೆ. ಶೇ.10 ರಷ್ಟು ಮಕ್ಕಳಿಗೆ ಟೆಸ್ಟ್ ಮಾಡಬೇಕು ಅಂತ ಸೂಚಿಸಿದ್ದೇನೆ. ಮಕ್ಕಳಲ್ಲಿ 0.008 ರಷ್ಟು ಮಾತ್ರ ಸೋಂಕಿದೆ. ಆದರೆ, ಶಾಲೆಗೆ ಹೋದಾಗ ಮತ್ತು ಬೇರೆ ಸಂದರ್ಭದಲ್ಲಿ ಎಚ್ಚರ ಅಗತ್ಯ. ಬೇರೆ ಬೇರೆ ಇಲಾಖೆ ಮುಖಾಂತರ ಮಾರ್ಗಸೂಚಿ ಹೊರಡಿಸಬೇಕಿದೆ ಎಂದರು.

    ಸಿನಿಮಾ ಮಂದಿರಗಳಿಗೆ 100ರಷ್ಟು ಅವಕಾಶ ನೀಡಲಾಗಿದೆ. ಅದನ್ನ ಹೊರತುಪಡಿಸಿದ್ರೆ ಕೆಲವು ನಿರ್ಬಂಧ ಮಾತ್ರ ಇದೆ. ಎರಡು ಡೋಸ್ ಲಸಿಕೆ ಸಂಪೂರ್ಣವಾಗಿ ಕೊಡುವವರೆಗೂ ಯಾವುದೇ ರೀತಿಯ ಸಮಾರಂಭ ಮಾಡಲು ಅವಕಾಶ ಇಲ್ಲ. ಈಜುಕೊಳಕ್ಕೂ ಕೂಡ ಸದ್ಯ ಅನುಮತಿ ಕೊಡೋದಿಲ್ಲ ಎಂದರು. ಕೇರಳ ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚು ಸೋಂಕಿದೆ. ಹಾಗಾಗಿ ಎರಡೂ ಗಡಿಗಳಲ್ಲಿ RTPCR ಟೆಸ್ಟ್ ತರೋದು ಕಡ್ಡಾಯ ಮಾಡಲಾಗಿದೆ. ರಾಜ್ಯ ಪ್ರವೇಶಿಸೋ 48 ಗಂಟೆ ಮೊದಲು ತಪಾಸಣೆ ಮಾಡಿಸಿರಬೇಕು ಎಂದರು.

    ಬ್ಯಾಡರಹಳ್ಳಿ ಆತ್ಮಹತ್ಯೆ ಪ್ರಕರಣದಲ್ಲಿ ಹಲ್ಲೆಗೆರೆ ಶಂಕರ್​, ಅಳಿಯಂದಿರ ಬಂಧನ

    ಕಾಂಗ್ರೆಸ್​ನ ಐಎಸ್​ಐ ಏಜೆಂಟ್​ ಅಂದ್ರೆ ಏನ್​ ಮಾಡ್ತಾರೆ? – ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts