More

    ಟಿಎಚ್​ಒ ಎದುರಲ್ಲೇ ಕಣ್ಣಿರೀಟ್ಟ ಕರೊನಾ ಸೇನಾನಿಗಳು

    ಬಳ್ಳಾರಿ: ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಅಗತ್ಯ ಸುರಕ್ಷತಾ ಕ್ರಮವೂ ಇಲ್ಲದೆ, ಕನಿಷ್ಠ ಪಿಪಿಇ ಕಿಟ್​ಗಳ ಸೌಲಭ್ಯವೂ ಇಲ್ಲದೆ ಕೆಲಸ ನಿರ್ವಹಿಸುತ್ತಿರುವ ಕರೊನಾ ವಾರಿಯರ್​ಗಳು ತಾಲೂಕು ಆರೋಗ್ಯಾಧಿಕಾರಿ ಎದುರು ಕಣ್ಣೀರಾಕುತ್ತ, ತಮಗೂ ಕರೊನಾ ಪರೀಕ್ಷೆ ಮಾಡಿ ಎಂದು ಗೋಗರೆದಿದ್ದಾರೆ.

    “ಆರೋಗ್ಯ ಸಿಬ್ಬಂದಿಗೆ ತಪಾಸಣೆ ಮಾಡುವುದಿಲ್ಲ. ಕೆಲಸ ಮಾಡುತ್ತಿರೋ, ಇಲ್ಲವೋ” ಎಂದು ಟಿಎಚ್​ಒ ಡಿ.ಭಾಸ್ಕರ ಗದರಿಸಿದ್ದಾರೆ. ವಿಚಲಿತರಾದ ಸಿಬ್ಬಂದಿ “ನಮ್ಮನ್ನೇ ನಂಬಿದ ಕುಟುಂಬಗಳಿವೆ. ಎಲ್ಲರ ಆರೋಗ್ಯ ತಪಾಸಣೆ ಮಾಡುವ ನಮ್ಮನ್ನೇ ತಪಾಸಣೆಗೆ ಒಳಪಡಿಸದಿದ್ದರೆ ಕುಟುಂಬಗಳ ರಕ್ಷಣೆ ಹೇಗೆ?” ಎಂದು ಗದ್ಗದಿತರಾದರು. ಇದನ್ನೂ ಓದಿರಿ video/ ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್​!

    ”ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಕರೊನಾ ಪಾಸಿಟಿವ್​ ವ್ಯಕ್ತಿ ಓಡಾಡಿದ್ದಾನೆ. ನಮ್ಮನ್ನು ಪರೀಕ್ಷೆಗೊಳಪಡಿಸಿ” ಎಂದು ಆಸ್ಪತ್ರೆಯ ಸಿಬ್ಬಂದಿ ಶುಕ್ರವಾರ ಆಗ್ರಹಿಸಿದರು. ”ಜನರಲ್​ ಮತ್ತು ಕರೊನಾ ರೋಗಿಗಳು ಒಂದೇ ಕಡೆ ತಪಾಸಣೆಗೆ ಬರುತ್ತಿರುವುದರಿಂದ ರೋಗ ಹರಡುವಿಕೆ ಹೆಚ್ಚಾಗಿದೆ. ನಮ್ಮಲ್ಲಿ ಕನಿಷ್ಠ ಪಿಪಿಇ ಕಿಟ್​ಗಳೂ ಇಲ್ಲ. ಈಗಾಗಲೇ ಒಬ್ಬ ವೈದ್ಯ ಮತ್ತು ನರ್ಸ್​ಗೆ ಪಾಸಿಟಿವ್​ ದೃಢಪಟ್ಟಿದೆ. ಹೀಗಾಗಿ ಎಲ್ಲ ಸಿಬ್ಬಂದಿಗೆ ಪರೀಕ್ಷೆ ಮಾಡಿ” ಎಂದು ಕಣ್ಣೀರಿಟ್ಟರು.

    ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಬಂದು ಸಮಸ್ಯೆ ಬಗೆಹರಿಸಲಿ ಎಂದು ಆಸ್ಪತ್ರೆ ಎದುರು ಜಮಾವಣೆಗೊಂಡರು. ಮಧ್ಯಪ್ರವೇಶಿಸಿದ ತಹಸೀಲ್ದಾರ್​ ಎಚ್​.ವಿಶ್ವನಾಥ, ಎಸಿ ಜತೆ ಚರ್ಚಿಸಿ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಕರೊನಾ ವಾರಿಯರ್ಸ್​ ಸುಮ್ಮನಾದರು.

    ಬೆಂಗಳೂರಲ್ಲಿ ಪೊಲೀಸರಿಗೂ ಸಿಕ್ತಿಲ್ಲ ಟ್ರೀಟ್ಮೆಂಟ್! ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮುಖ್ಯಪೇದೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts