More

    ಕರೊನಾ ನಿಯಮ ಗಾಳಿಗೆ ತೂರಿ ಪಕ್ಷದ ಕಛೇರಿ ಉದ್ಘಾಟನೆ: ಮಾಜಿ ಮೇಯರ್ ಬಂಧನ

    ಪುಣೆ : ನಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ(ಎನ್​ಸಿಪಿ)ಯ ಪುಣೆ ನಗರ ಅಧ್ಯಕ್ಷ ಹಾಗೂ ಮಾಜಿ ಮೇಯರ್​ ಪ್ರಶಾಂತ್ ಜಗತಾಪ್​ ಅವರನ್ನು ಕೋವಿಡ್​ ನಿಯಮಗಳ ಉಲ್ಲಂಘನೆಗಾಗಿ ಇಂದು ಬಂಧಿಸಲಾಯಿತು. ಪಕ್ಷದ ಹೊಸ ಕಛೇರಿ ಉದ್ಘಾಟನೆ ಸಮಾರಂಭದಲ್ಲಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿದ ಆರೋಪ ಎದುರಿಸುತ್ತಿರುವ ಆರು ಜನ ಎನ್​​ಸಿಪಿ ಪದಾಧಿಕಾರಿಗಳಲ್ಲಿ ಜಗತಾಪ್​ ಕೂಡ ಒಬ್ಬರು.

    ಮಹಾರಾಷ್ಟ್ರದ ಪುಣೆಯ ಶಿವಾಜಿನಗರದಲ್ಲಿ ಜೂನ್ 19 ರ ಸಂಜೆ ನಡೆದ ಪಕ್ಷದ ಹೊಸ ಕಛೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ 100 ರಿಂದ 150 ಜನರ ಹಾಜರಾತಿಗೆ ಅನುಮತಿ ಪಡೆಯಲಾಗಿತ್ತು. ಆದರೆ, ರಾಜ್ಯದ ಡೆಪ್ಯುಟಿ ಸಿಎಂ ಅಜಿತ್​ ಪವಾರ್​ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ 400 ರಿಂದ 500 ಜನರನ್ನು ಸೇರಿಸಿದ್ದರು. ಕೆಲವರು ಮಾಸ್ಕ್​ ತೊಡದೆ ಭಾಗವಹಿಸಿದರೆ, ಸಾಮಾಜಿಕ ಅಂತರ ಪಾಲಿಸಲಿಲ್ಲ ಎಂದು ಶಿವಾಜಿನಗರ ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: ಮೂರನೇ ಅಲೆಗೆ ಸಿದ್ಧತೆ: ಬೆಂಗಳೂರಲ್ಲಿ ಮಕ್ಕಳಿಗಾಗಿ 1,419 ಬೆಡ್​​ ಮೀಸಲು

    ಪ್ರಶಾಂತ್​ ಜಗತಾಪ್​ರೊಂದಿಗೆ ಎನ್​ಸಿಪಿ ಯುವ ನಾಯಕ ಮಹೇಶ್ ಹಂಡೆ, ಪದಾಧಿಕಾರಿಗಳಾದ ಪ್ರದೀಪ್ ದೇಶ್ಮುಖ್, ನೀಲೇಶ್ ನಿಕಂ, ರೋಹನ್ ಪಾಯ್ಗುಡೆ ಮತ್ತು ಬಾಲಾಸಾಹೇಬ್ ಬೊಡಕೆ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ನಾಯಕರನ್ನು ಬಂಧಿಸಿ, ಸ್ವಲ್ಪ ಸಮಯದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ. (ಏಜೆನ್ಸೀಸ್)

    VIDEO | ಯೋಗ ದಿನ : 18,000 ಅಡಿ ಎತ್ತರದಲ್ಲಿ ಸೂರ್ಯನಮಸ್ಕಾರ

    ಸೊಪ್ಪು-ತರಕಾರಿ ಒದ್ದು ದರ್ಪ ಮೆರೆದ ಪಿಎಸ್​ಐ ಸಸ್ಪೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts