More

    ರಾಜ್ಯದಲ್ಲಿನ ಪಾಸಿಟಿವಿಟಿ ದರವೂ ಒಂದಂಕಿಗೆ ಇಳಿಕೆ: ಗಣನೀಯವಾಗಿ ತಗ್ಗಿದ ಕರೊನಾ ಸೋಂಕು

    ಬೆಂಗಳೂರು: ರಾಜ್ಯದಲ್ಲಿ ಕಳದೆ ನಾಲ್ಕೈದು ದಿನಗಳಿಂದ ಕರೊನಾ ಸೋಂಕಿನ ತೀವ್ರತೆ ಗಣನೀಯವಾಗಿ ಇಳಿಯುತ್ತಿದ್ದು, ಕರೊನಾ ಪ್ರಕರಣಗಳ ಸಂಖ್ಯೆಯ ಜತೆಗೆ ಪಾಸಿಟಿವಿಟಿ ದರ ಕೂಡ ತಗ್ಗಿದೆ.

    ಇದನ್ನೂ ಓದಿ: ತಗ್ಗಿತು ಕರೊನಾತಂಕ: 2 ಲಕ್ಷಕ್ಕಿಂತ ಕೆಳಕ್ಕಿಳಿಯಿತು ಸಕ್ರಿಯ ಪ್ರಕರಣ…

    ನಾಲ್ಕೈದು ದಿನಗಳಿಂದ ಇಳಿಯುತ್ತಲೇ ಬಂದಿರುವ ಹೊಸ ಕರೊನಾ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಬಹಳಷ್ಟು ನಿರಾಳತೆ ಮೂಡಿಸಿದೆ. ಅದರಲ್ಲೂ ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪಾಸಿಟಿವಿಟಿ ದರ ಒಂದಂಕಿಗೆ ಇಳಿದಿದ್ದರೆ, ಇಂದು ರಾಜ್ಯದಲ್ಲಿನ ಕರೊನಾ ಪಾಸಿಟಿವಿ ದರವೂ ಒಂದಂಕಿಗೆ ಇಳಿದಿದೆ. ಅಂದರೆ ನಿನ್ನೆ ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ. 9.17ಕ್ಕೆ ಆಗಿದ್ದು, ಇಂದು ರಾಜ್ಯದಲ್ಲಿನ ಕರೊನಾ ಪಾಸಿಟಿವಿಟಿ ದರ ಶೇ. 9.04ಕ್ಕೆ ಇಳಿದಿದೆ.

    ಇದನ್ನೂ ಓದಿ: ವರ್ಷಾರಂಭದ ಬಳಿಕ ಇದೀಗ ಭಾರಿ ಸಮಾಧಾನ; ಗಣನೀಯವಾಗಿ ಇಳಿದ ಕರೊನಾ ಪ್ರಕರಣ

    ರಾಜ್ಯದಲ್ಲಿ ಇಂದು 12,009 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ಪತ್ತೆಯಾಗಿದ್ದು, ಆ ಪೈಕಿ ಬೆಂಗಳೂರಿನಲ್ಲಿ 4,532 ಪ್ರಕರಣಗಳು ವರದಿಯಾಗಿವೆ. ಇನ್ನು 25,854 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,09,203ಕ್ಕೆ ಇಳಿದಿದೆ. ಅದಾಗ್ಯೂ ರಾಜ್ಯದಲ್ಲಿ ಇಂದು 50 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದು, ಎಚ್ಚರಿಕೆ ಅಗತ್ಯ ಎಂಬ ಸೂಚನೆಯನ್ನೂ ನೀಡಿದೆ.

    ಸಮತಾಮೂರ್ತಿ ಅನಾವರಣ: ವಿಶ್ವದ 2ನೇ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಿದ ಮೋದಿ

    ರಾಜ್ಯ ಕಾಂಗ್ರೆಸ್​ನಲ್ಲಿ ಶುರುವಾಗಿದೆ ಪಾದಯಾತ್ರೆ ಮೇನಿಯಾ: ಮತ್ತೆ ಹಲವು ಕಡೆಯಿಂದ ಯಾತ್ರೆಗೆ ಬೇಡಿಕೆ..

    34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts