More

    ಕನ್ನಡ, ಗಣಿತ ಪರೀಕ್ಷೆ ಬರೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕೋವಿಡ್

    ಉಡುಪಿ: ಜೂನ್ 25 ಮತ್ತು 27ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕರೊನಾ ಪಾಸಿಟಿವ್​ ದೃಢಪಟ್ಟಿದೆ.

    ಕಾಪು ತಾಲೂಕು ವ್ಯಾಪ್ತಿಯೊಂದರ ಪರೀಕ್ಷಾ ಕೇಂದ್ರದಲ್ಲಿ ಜೂ.25ರಂದು ಕನ್ನಡ, 27ರಂದು ಗಣಿತ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಇಂದು ಸೋಂಕು ಇರುವುದು ಗೊತ್ತಾಗಿದೆ. ಈ ಬಾಲಕಿಯ ತಂದೆಗೆ ಕರೊನಾ ಪಾಸಿಟಿವ್ ಇರುವ ಬಗ್ಗೆ ನಿನ್ನೆ ದೃಢಪಟ್ಟಿತ್ತು. ಈಕೆಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಪಾಸಿಟಿವ್​ ಬಂದಿದೆ. ಇದನ್ನೂ ಓದಿರಿ ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

    ಕರೊನಾ ಸೋಂಕಿತ ವಿದ್ಯಾರ್ಥಿನಿಗೆ ನಾಳೆ(ಸೋಮವಾರ) ನಡೆಯಲಿರುವ ವಿಜ್ಞಾನ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ. ಸೋಂಕಿತೆಯನ್ನು ಕೋವಿಡ್​ ಆಸ್ಪತ್ರೆಗೆ ಸೇರಿಸಲಾಗಿದೆ.

    ಶಾಲೆಯಲ್ಲಿ ದೈಹಿಕ ಅಂತರ, ಸ್ಯಾನಿಟೈಸರ್ ಪ್ರಕ್ರಿಯೆ ಸೇರಿದಂತೆ ಕೋವಿಡ್ ನಿಯಮಾವಳಿ ಅನುಸರಿಸಿದ್ದರಿಂದ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಇತರ ವಿದ್ಯಾರ್ಥಿಗಳಿಗೆ ಕರೊನಾ ಟೆಸ್ಟ್ ಮಾಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ದಿನೇದಿನೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಲ್ಲೂ ಕರೊನಾ ಪಾಸಿಟಿವ್​ ಬರುತ್ತಿರುವುದು ಪೋಷಕರು ಮತ್ತು ಇತರ ಮಕ್ಕಳಲ್ಲಿ ಸೋಂಕಿನ ಭೀತಿ ಆವರಿಸಿದೆ.

    ಎಸ್​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ದುರಂತ ಅಂತ್ಯಕಂಡ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts