More

    ಗಂಟಲು ದ್ರವ ಪಡೆಯದೆ ಕರೊನಾ ನೆಗೆಟಿವ್​ ವರದಿ ನೀಡುತ್ತಿದ್ದ ಇಬ್ಬರು ಸಿಸಿಬಿ ಬಲೆಗೆ

    ಬೆಂಗಳೂರು: ಗಂಟಲು ದ್ರವ ಪಡೆಯದೆ, ಆರ್​ಟಿಪಿಸಿಆರ್​ ಪರೀಕ್ಷೆ ನಡೆಸಿ ಅವಶ್ಯ ಬಿದ್ದವರಿಗೆ ಕರೊನಾ ನೆಗೆಟಿವ್​ ವರದಿ ನೀಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಚೋಡದೇವನಹಳ್ಳಿ ಮುಖೇಶ್​ ಸಿಂಗ್​ ಮತ್ತು ಹೊಸಹಳ್ಳಿಯ ನಾಗರಾಜ್​ ಅಲಿಯಾಸ್​ ಓಂ ಶಕ್ತಿ ಬಂಧಿತರು. ಎರಡು ಮೊಬೈಲ್​, 5 ನಕಲಿ ಕರೊನಾ ನೆಗೆಟೀವ್​ ವರದಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೊನಾ ಸೋಂಕು ಪರೀಕ್ಷೆಗೆ ಜನರಿಂದ ಗಂಟಲ ದ್ರವ ಪಡೆಯದೆ ಹಣ ಪಡೆದು ಜನರಿಗೆ ನೆಗೆಟಿವ್​ ವರದಿ ನೀಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಾರುವೇಷದಲ್ಲಿ ಸ್ಥಳಕ್ಕೆ ತೆರಳಿ ವರದಿ ಪಡೆಯುವ ನೆಪದಲ್ಲಿ ಸಿಸಿಬಿ ಅಧಿಕಾರಿಗಳು ಸಂಪರ್ಕಿಸಿದ್ದರು. ಆರೋಪಿಗಳು ಒಂದು ವರದಿಗೆ 700 ರೂ. ಪಡೆದು ಮೂರು ದಿನಗಳ ಬಳಿಕ ನೆಗೆಟಿವ್​ ವರದಿ ನೀಡುವುದಾಗಿ ಹೇಳಿದ್ದರು.

    ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಜತೆಗೆ ಆರೋಪಿಗಳು ಶಾಮೀಲಾಗಿದ್ದಾರೆ. ಮುಖೇಶ್​ ಮತ್ತು ನಾಗರಾಜು ಮಧ್ಯವತಿರ್ಗಳಾಗಿದ್ದಾರೆ. ಕರೊನಾ ಪರೀಕ್ಷೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದ ಜನರಿಗೆ ನೆಗೆಟಿವ್​ ವರದಿ ನೀಡುವುದಾಗಿ ಹೇಳಿ ಆರೋಗ್ಯ ಕೇಂದ್ರ ಸಿಬ್ಬಂದಿ ಪರವಾಗಿ ಹಣ ವಸೂಲಿ ಮಾಡುತ್ತಿದ್ದರು. ಈ ಕೃತ್ಯದಲ್ಲಿ ಆರೋಗ್ಯ ಕೇಂದ್ರದ ಇಬ್ಬರು ನೌಕರರು ಸಹ ಸಾಥ್​ ನೀಡಿವ ಮಾಹಿತಿ ಲಭ್ಯವಾಗಿದೆ. ಅವರನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ಆ್ಯಂಕರ್ ಅರುಣ ಬಡಿಗೇರ ತಂದೆ-ತಾಯಿಯನ್ನು ಬಲಿ ತೆಗೆದುಕೊಂಡ ಕರೊನಾ

    ಕರೊನಾಗೆ ಮತ್ತಿಬ್ಬರು ಪತ್ರಕರ್ತರು ಬಲಿ: ಸೋಂಕಿತರಾಗಿದ್ದ ರೋಹಿತ್‌ ಸರ್ದಾನ, ನೀಲಾಕ್ಷಿ ಭಟ್ಟಾಚಾರ್ಯ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts