More

    ಕಡೂರಿನ ಯಾವ ಎಟಿಎಂಗಳಲ್ಲಿ ಕಾಣುತ್ತಿಲ್ಲ ಸ್ಯಾನಿಟೈಸರ್!

    ಕಡೂರು: ಕರೊನಾ ತಡೆಗೆ ಪಟ್ಟಣದ ಬ್ಯಾಂಕ್​ಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ನಿತ್ಯದ ವ್ಯವಹಾರ ನಡೆಸಲಾಗುತ್ತಿದೆ. ಮಾಸ್ಕ್ ಧರಿಸುವುದೂ ಕಡ್ಡಾಯಗೊಳಿಸಲಾಗಿದೆ. ಆದರೆ ಹೆಚ್ಚು ಜನ ಬಂದು ಹೋಗುವ ಎಟಿಎಂಗಳಲ್ಲಿ ಸ್ಯಾನಿಟೈಸರ್ ಇಡದಿರುವುದು ಆತಂಕಕಾರಿ.

    ಎಟಿಎಂ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಡಬೇಕೆಂದು ಸರ್ಕಾರ ಸೂಚನೆ ನೀಡಿದೆ. ಆದರೆ ಪಟ್ಟಣದ ಯಾವ ಬ್ಯಾಂಕಿನ ಎಟಿಎಂಗಳಲ್ಲೂ ಸ್ಯಾನಿಟೈಸರ್ ಇಟ್ಟಿಲ್ಲ. ಎಟಿಎಂ ಬಳಕೆಯಿಂದಲೂ ಕರೊನಾ ಸೋಂಕು ಹರಡುವ ಸಾಧ್ಯತೆಗಳಿರುವ ಕಾರಣ ಬ್ಯಾಂಕ್ ಹಾಗೂ ಎಟಿಎಂ ಕೇಂದ್ರದಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.

    ಸಾಮಾನ್ಯ ದಿನಗಳಿಗಿಂತ ತಿಂಗಳ ಮೊದಲ ಹಾಗೂ ಕೊನೇ ವಾರಗಳಲ್ಲಿ ಗ್ರಾಹಕರು ಹಣ ಪಡೆಯುವುದು ಹೆಚ್ಚು. ಅದರಲ್ಲೂ ತಿಂಗಳ ವೇತನ ಪಡೆಯಲು ಬಹುತೇಕ ಉದ್ಯೋಗಿಗಳು ಎಟಿಎಂಗಳನ್ನೇ ಅವಲಂಬಿಸಿದ್ದಾರೆ. ಇಂತಹ ಸಮಯದಲ್ಲಿ ನಿರಂತರ ಬಳಕೆಯಿಂದಾಗಿ ವೈರಾಣು ಹರಡುವ ಸಾಧ್ಯತೆಗಳಿರುತ್ತವೆ.

    ಸದ್ಯ ತಾಲೂಕಿನಲ್ಲಿ ಕರೊನಾ ಪಾಸಿಟಿವ್ ಕೇಸ್​ಗಳಿಲ್ಲ. ಆದರೆ ಕರೊನಾ ಇರುವ ಪ್ರದೇಶಗಳಿಂದ ಬಂದವರು ಪಟ್ಟಣದ ಎಟಿಎಂಗಳನ್ನು ಬಳಸಿಕೊಂಡಿದ್ದರೆ ಸೋಂಕು ಸುಲಭವಾಗಿ ಹರಡುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಇರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts