More

    ಏಡ್ಸ್ ರೀತಿ ಕರೊನಾಗೂ ಔಷಧ ಇಲ್ಲ?

    ಜಿನೀವಾ: ವಿಶ್ವವ್ಯಾಪಿಯಾಗಿ ಹರಡಿಕೊಂಡಿರುವ ಕರೊನಾ ವೈರಸ್ ಸಂಪೂರ್ಣವಾಗಿ ನಾಶವಾಗದೆ ಭವಿಷ್ಯದಲ್ಲಿ ಹಾಗೆಯೇ ಉಳಿಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಅಭಿಪ್ರಾಯಪಟ್ಟಿದೆ. ಈ ಮೂಲಕ ಕರೊನಾ ವೈರಸ್ ನಿಮೂಲನೆಯಾಗುವ ದಿನವನ್ನು ಊಹಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದೆ.

    ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಧಾನ ಪರಿಷತ್​ಗೆ ಅವಿರೋಧ ಆಯ್ಕೆ

    ಅನೇಕ ಸಂಸ್ಥೆಗಳು ಕರೊನಾ ವೈರಸ್ ಮೇ ಅಂತ್ಯಕ್ಕೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಹೇಳುತ್ತಿವೆ. ಆದರೆ ಕರೊನಾ ವೈರಸ್ ವಿಚಾರದಲ್ಲಿ ನಾವು ವಾಸ್ತವಿಕವಾಗಿರಬೇಕು. ಸೋಂಕು ಸಂಪೂರ್ಣವಾಗಿ ನಾಶವಾಗುತ್ತದೆ ಎನ್ನುವ ಭರವಸೆಯಿಲ್ಲ. ಇದು ಯಾವಾಗ ನಿವಾರಣೆಯಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಎಚ್​ಐವಿ ಸೋಂಕಿಗೂ ಲಸಿಕೆ ತಯಾರಿಸಲು ಅನೇಕ ಸಂಸ್ಥೆಗಳು ಪ್ರಯತ್ನ ಪಟ್ಟವು. ಆದರೆ ಲಸಿಕೆ ಸಿದ್ಧವಾಗಲಿಲ್ಲ. ವೈದ್ಯಕೀಯವಾಗಿ ಯಾವ ರೀತಿಯ ಚಿಕಿತ್ಸೆಯಿಂದ ಅದನ್ನು ನಿಧಾನಪಡಿಸಬಹುದು ಎನ್ನುವುದು ಗೊತ್ತಾಗಿದೆ. ಈಗ ಎಚ್​ಐವಿ ಬಗ್ಗೆ ಜನರಿಗೆ ಭಯ ಉಳಿದಿಲ್ಲ. ಇದೇ ರೀತಿಯಲ್ಲಿ ಕರೊನಾ ಕೂಡ ಸ್ಥಳೀಯ ವೈರಸ್ ಆಗಿ ದೀರ್ಘಕಾಲ ಉಳಿಯಬಹುದು ಎಂದು ಡಬ್ಲ್ಯೂಎಚ್​ಒ ತಜ್ಞ ಮೈಕೆಲ್ ರಯಾನ್ ತಿಳಿಸಿದ್ದಾರೆ. ಅಮೆರಿಕ, ಇಸ್ರೇಲ್, ಜರ್ಮನಿ, ಭಾರತ ಸೇರಿ ಜಗತ್ತಿನ ಪ್ರಮುಖ ದೇಶಗಳ 100ಕ್ಕೂ ಹೆಚ್ಚು ಸಂಸ್ಥೆಗಳು ಕರೊನಾ ಲಸಿಕೆ ಸಿದ್ಧಪಡಿಸುವಲ್ಲಿ ತೊಡಗಿಸಿಕೊಂಡಿವೆ. ಒಂದು ವೇಳೆ ಲಸಿಕೆ ತಯಾರಾದರೂ ಅದನ್ನು ಜಗತ್ತಿನಾದ್ಯಂತ ತಲುಪುವಂತೆ ಮಾಡುವುದು ಸುಲಭವಲ್ಲ ಎಂದು ಅವರು ಹೇಳಿದ್ದಾರೆ. ಸೋಂಕನ್ನು ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ತರಬಹುದು ಎನ್ನುವುದು ತಿಳಿದು ಬಂದಿದೆ. ವೈದ್ಯಕೀಯ ನೆರವಿಲ್ಲದೆಯೂ ಸೋಂಕನ್ನು ನಿಯಂತ್ರಿಸಬಹುದು. ಅದು ಜನರಿಂದಲೇ ಸಾಧ್ಯ. ಇದರಲ್ಲಿ ಪ್ರತಿಯೊಬ್ಬರ ಕೊಡುಗೆ ಮುಖ್ಯವಾಗುತ್ತದೆ ಎಂದು ಡಬ್ಲ್ಯೂಎಚ್​ಒನ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘಬ್ರೆಯೆಸಸ್ ತಿಳಿಸಿದ್ದಾರೆ.

    ಔಷಧ ಗೊಂದಲ

    ಜಗತ್ತಿಗೆ ಇದುವರೆಗೆ ಕರೊನಾಗೆ ಮದ್ದು ಅಭಿವೃದ್ಧಿಪಡಿಸುವುದು ಸಾಧ್ಯವಾಗಿಲ್ಲ. ಸರ್ಕಾರಗಳು, ಸಂಶೋಧಕರು, ಔಷಧ ತಯಾರಕರು ಇನ್ನೂ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಸದ್ಯ ಕೆಲ ಪರ್ಯಾಯ ಔಷಧಗಳನ್ನು ಬಳಸಲಾಗುತ್ತಿದೆ. ಗುಣಮುಖರಾದ ರೋಗಿಯಿಂದ ಪ್ರತಿಕಾಯ-ಪೂರಿತ ಪ್ಲಾಸ್ಮಾ ತೆಗೆದು ಚಿಕಿತ್ಸೆ ನಡೆಸುವ ಪ್ಲಾಸ್ಮಾ ಥೆರಪಿ ಬಗ್ಗೆ ಕೂಡ ವೈದ್ಯಕೀಯ ತಜ್ಞರಲ್ಲಿ ಇನ್ನೂ ಒಮ್ಮತ ಕಂಡುಬಂದಿಲ್ಲ. ಪ್ಲಾಸ್ಮಾ ಥೆರಪಿ ಶೇ. ನೂರರಷ್ಟು ಫಲಿತಾಂಶ ಕೊಡುವ ಪರಿಪೂರ್ಣ ಚಿಕಿತ್ಸಾ ವಿಧಾನವಲ್ಲ. ಅದರ ಪರಿಣಾಮದ ಬಗ್ಗೆ ಇನ್ನೂ ನಿಖರ ಫಲಿತಾಂಶ ಬಂದಿಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

    ಏಡ್ಸ್ ರೀತಿ ಕರೊನಾಗೂ ಔಷಧ ಇಲ್ಲ?

    ಪರ ಊರುಗಳಿಂದ ಕರೊನಾ ಸೋಂಕು ಹೊತ್ತು ತಂದವರಿಂದ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಆಪತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts