More

    ಪರ ಊರುಗಳಿಂದ ಕರೊನಾ ಸೋಂಕು ಹೊತ್ತು ತಂದವರಿಂದ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಆಪತ್ತು!

    ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು 12 ಗಂಟೆಯವರೆಗೆ ರಾಜ್ಯದಲ್ಲಿ 22 ಹೊಸ ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಹೆಚ್ಚಿನವು ಪರ ಊರುಗಳಿಂದ ಬಂದವರೇ ಆಗಿವೆ.

    ಈ ಮೂಲಕ ಮುಂಬೈ ಹಾಗೂ ಅಹಮದಾಬಾದ್​ ಸೇರಿದಂತೆ ಕೆಲವು ಊರುಗಳಿಂದ ಬಂದವರಿಂದಾಗಿಯೇ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಇಲ್ಲಿಯವರೆಗೆ ಒಟ್ಟು 981 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 456 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದರೆ, ಇದಾಗಲೇ ಈ ಮಹಾಮಾರಿ 35 ಜೀವಗಳನ್ನು ಬಲಿ ಪಡೆದಿದೆ.

    ಇದನ್ನೂ ಓದಿ: ವಿಮಾನ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಾರಾಟಕ್ಕೆ ಮುಹೂರ್ತ ಫಿಕ್ಸ್​- ಇಲ್ಲಿದೆ ನೋಡಿ ಸಂಪೂರ್ಣ ವಿವರ

    ಮುಂಬೈನಿಂದ ಮಂಡ್ಯಕ್ಕೆ ಬಂದಿರುವ ನಾಲ್ವರಲ್ಲಿ, ಬೀದರ್​ಗೆ ಬಂದಿರುವ 45 ವರ್ಷದ ಮಹಿಳೆಯಲ್ಲಿ ಹಾಗೂ ಬೆಳಗಾವಿಗೆ ಬಂದಿರುವ ಓರ್ವ ಯುವತಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದರೆ, ಅಹಮದಾಬಾದ್​ನಿಂದ ಗದಗಕ್ಕೆ ಬಂದಿರುವ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.

    ಬೀದರ್​ನ ಕಂಟೈನ್​ಮೆಂಟ್​ ಝೋನ್​ನಲ್ಲಿರುವ ಸಂಪರ್ಕಕ್ಕೆ ಬಂದಿರುವ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.
    ಇದನ್ನು ಹೊರತುಪಡಿಸಿದರೆ, ಬೆಂಗಳೂರು ನಗರದಲ್ಲಿ ಐದು, ಬಾಗಲಕೋಟೆಯಲ್ಲಿ ಒಂದು ಹಾಗೂ ದಾವಣಗೆರೆಯಲ್ಲಿ ಮೂರು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

    ಇದನ್ನೂ ಓದಿ: VIDEO: ಕೋಲಿನಿಂದ ಮರುಜೀವ ಪಡೆದ ಯುವಕ! ವೀಡಿಯೋ ಭಾರಿ ವೈರಲ್​

    ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

    ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

    ಸಂಪೂರ್ಣ ವಿವರ ಇಲ್ಲಿದೆ:

    ಪರ ಊರುಗಳಿಂದ ಕರೊನಾ ಸೋಂಕು ಹೊತ್ತು ತಂದವರಿಂದ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಆಪತ್ತು! ಪರ ಊರುಗಳಿಂದ ಕರೊನಾ ಸೋಂಕು ಹೊತ್ತು ತಂದವರಿಂದ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಆಪತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts