More

    ನಿಯಂತ್ರಣಕ್ಕೆ ಸಿಗದ ಕರೊನಾ; ಇಂದು ಒಂದೇ ದಿನದಲ್ಲಿ 28 ಸಾವಿರಕ್ಕೂ ಅಧಿಕ ಪ್ರಕರಣ…

    ಬೆಂಗಳೂರು: ರಾಜ್ಯದಲ್ಲಿ ನೈಟ್​ ಕರ್ಫ್ಯೂ ಸೇರಿ ಇತರ ನಿರ್ಬಂಧಗಳ ನಡುವೆಯೂ ಕರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಇಂದು ಈ ವರ್ಷದಲ್ಲೇ ಇದುವರೆಗಿನ ಅತ್ಯಧಿಕ ಎನಿಸುವಷ್ಟು ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಕರೊನಾ ಆತಂಕ ಹೆಚ್ಚಾಗಿದೆ.

    ರಾಜ್ಯದಲ್ಲಿ ಇಂದು ಹೊಸದಾಗಿ 28,723 ಮಂದಿಯಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದೆ. ಆ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 20,121 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,01,000ಕ್ಕೆ ತಲುಪಿದ್ದರೆ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,41,337ಕ್ಕೆ ಏರಿದೆ.

    ಆತಂಕದ ವಿಷಯ ಎಂದರೆ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಜತೆಗೆ ಪಾಸಿಟಿವಿಟಿ ರೇಟ್ ಕೂಡ ಹೆಚ್ಚಳಗೊಂಡಿದೆ. ಇಂದು ಪಾಸಿಟಿವಿಟಿ ದರ ಶೇ. 12.98ಕ್ಕೆ ತಲುಪಿರುವುದು ಕೂಡ ಸರ್ಕಾರಕ್ಕೆ ಮಾತ್ರವಲ್ಲದೆ ಸಾರ್ವಜನಿಕರಿಗೂ ತಲೆನೋವಾಗಿ ಪರಿಣಮಿಸಿದೆ. ಇನ್ನು ಬೆಂಗಳೂರಿನ 7 ಸೇರಿ ರಾಜ್ಯದಲ್ಲಿ ಇಂದು ಒಟ್ಟು 14 ಮಂದಿ ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

    ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts