More

    ಕರೊನಾ ಗೆದ್ದು ಬಂದ 114 ವರ್ಷದ ಸನ್ಯಾಸಿ

    ಇಥಿಯೋಪಿಯಾ : ಕ್ಷಣಕ್ಷಣಕ್ಕೂ ಕರೊನಾ ಆತಂಕ ಹೆಚ್ಚುತ್ತಲೇ ಇದೆ. ಕರೊನಾದ ವಿಷಯ ಬಂದಾಗಲೆಲ್ಲವೂ ಮೊದಲು ಜಾಗರೂಕರಾಗಿ ಇರಬೇಕಾದುದು ವೃದ್ಧರು ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆ ಇರುವವರು ಎನ್ನಲಾಗುತ್ತದೆ.

    ಆದರೆ ಅಲ್ಲಲ್ಲಿ ಶತಾಯುಷಿಗಳು ಕರೊನಾ ಗೆದ್ದು ಬರುತ್ತಿರುವುದು ಸುದ್ದಿಯಾಗುತ್ತಲೇ ಇದೆ. ಅಂಥದ್ದೇ ಇನ್ನೊಂದು ಸುದ್ದಿ ಇಥಿಯೋಪಿಯಾದಿಂದ ಬಂದಿದೆ. 114 ವರ್ಷದ ವೃದ್ಧನೊಬ್ಬ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. ಇವರು ಸನ್ಯಾಸಿ ಎನ್ನಲಾಗಿದೆ.

    ಇದನ್ನೂ ಓದಿ: ಕರೊನಾ ಪೀಡಿತರಿಗೆ ಸ್ಟಾರ್ ಹೋಟೆಲ್ ಆಹಾರ

    ಥಿಲ್‌ಊನ್‌ ವುಡ್‌ಮೆಕಲ್‌ ಎನ್ನುವ ವ್ಯಕ್ತಿ ಇದೀಗ ಗುಣಮುಖರಾಗಿದ್ದಾರೆ. ಮೂರು ವಾರಗಳವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಇದೀಗ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಆಸ್ಪತ್ರೆಯಲ್ಲಿದ್ದ ವೇಳೆ ಆಮ್ಲಜನಕ ಹಾಗೂ ಡಿಕ್ಸೋಮೆಥಾಸೋನ್ ಮಾತ್ರೆಗಳನ್ನು ನೀಡಲಾಗುತ್ತಿತ್ತು.

    ಈ ಕುರಿತು ಥಿಲ್‌ಊನ್‌ ಮೊಮ್ಮಗ ಹೇಳಿಕೆ ನೀಡಿದ್ದು, ಅವರಿಗೆ 114 ವರ್ಷ ಎನ್ನುವುದಕ್ಕೆ ಯಾವುದೇ ಅಧಿಕೃತ ದಾಖಲೆಗಳು ನಮ್ಮ ಬಳಿ ಇಲ್ಲ. ಆದರೆ ನೂರನೇ ವರ್ಷದ ಜನ್ಮದಿನದ ಸಂಭ್ರಮಾಚರಣೆಯ ಫೋಟೋಗಳು ಮಾತ್ರ ನಮ್ಮ ಬಳಿಯಿವೆ ಎಂದಿದ್ದಾರೆ. (ಏಜೆನ್ಸೀಸ್‌)

    ಹಿಜ್ಬುಲ್‌ ಉಗ್ರರ ಹತ್ಯೆ: ಜಮ್ಮುವಿನ ದೋಡಾ ಈಗ ಭಯೋತ್ಪಾದನಾ ಮುಕ್ತ ಜಿಲ್ಲೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts