More

    ಕರೊನಾ ಪೀಡಿತರಿಗೆ ಸ್ಟಾರ್ ಹೋಟೆಲ್ ಆಹಾರ

    ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ತಾರಾ ಹೋಟೆಲ್​ಗಳಾದ ತಾಜ್ ವೆಸ್ಟ್, ಏಟ್ರಿಯಾದಿಂದ ಆಹಾರ ಪೂರೈಕೆ ಮಾಡುತ್ತಿದ್ದು, ಉತ್ತಮ ಊಟೋಪಾಚಾರದ ವ್ಯವಸ್ಥೆಯಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

    ಶುಚಿತ್ವ ಹಾಗೂ ಊಟೋಪಾಚಾರ ವ್ಯವಸ್ಥೆ ಸರಿಯಿಲ್ಲವೆಂಬ ದೂರುಗಳನ್ನು ಸ್ಪಷ್ಟವಾಗಿ ಅಲ್ಲಗಳೆದು, 3 ತರಹದ ಆರೋಗ್ಯ ವರ್ಧಕ ಆಹಾರ ಪೂರೈಕೆಯಾಗುತ್ತಿದೆ. ಚಪಾತಿಗಾಗಿ 8 ಲಕ್ಷ ರೂ. ಮೊತ್ತದ ಯಂತ್ರವನ್ನು ತರಿಸಿದ್ದು, ಗಂಟೆಗೆ 1 ಸಾವಿರ ಚಪಾತಿ ತಯಾರಿಸುತ್ತದೆ. ಅಲ್ಲದೆ, 2 ತರಹದ ಪಲ್ಯ, ಸಿಹಿಯೂಟದ ಜತೆಗೆ ಹಣ್ಣು, ಜ್ಯೂಸ್ ಕೊಡಲಾಗುತ್ತಿದೆ. ಕಿಡ್ನಿ ಹಾಗೂ ಶುಗರ್ ರೋಗಿಗಳಿಗೆ ಪ್ರತ್ಯೇಕ ಆರೋಗ್ಯವರ್ಧಕ ಊಟ ಪೂರೈಸಲಾಗುತ್ತಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಹೆಚ್ಚು ಜನ ಸೇರಿಕೊಂಡು ರಾತ್ರಿ ಔತಣಕೂಟ (ನೈಟ್ ಪಾರ್ಟಿ)ಗಳನ್ನು ಏರ್ಪಡಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಯಿದ್ದ ಕಾರಣಕ್ಕೆ ರಾತ್ರಿ ಕರ್ಫ್ಯೂ ಅವಧಿ ಒಂದು ತಾಸು ವಿಸ್ತರಿಸಿ, ರಾತ್ರಿ 8 ರಿಂದ ಬೆಳಗ್ಗೆ 5ರವರೆಗೆ ನಿಗದಿ ಮಾಡಲಾಗಿದೆ ಎಂದು ಆರ್.ಅಶೋಕ್ ಸಮಜಾಯಿಷಿ ನೀಡಿದರು.

    ಇದನ್ನೂ ಓದಿ: ಅಶೋಕ್ ಕರೊನಾ ಉಸ್ತುವಾರಿ ತಾತ್ಕಾಲಿಕ?

    ಶೀಘ್ರ ಟ್ಯಾಗ್ ಕಟ್ಟುವ ವ್ಯವಸ್ಥೆ ಕರೊನಾ ರೋಗಿಗಳು ಹಾಗೂ ಗೃಹ ಬಂಧನದಲ್ಲಿ ಇರುವವರ ಕೈಗೆ ಟ್ಯಾಗ್ ಕಟ್ಟುವ ವ್ಯವಸ್ಥೆ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ. ಟ್ಯಾಗ್ ಕಟ್ಟಿಸಿ ಕೊಂಡವರ ಚಲನವಲನದ ಮೇಲೆ ನಿಗಾ ಹಾಗೂ ಮೊಬೈಲ್ ಮನೆಯಲ್ಲಿಟ್ಟು ಹೊರಗೆ ಓಡಾಡದಂತೆ ನಿರ್ಬಂಧಿಸಲು ಈ ಕ್ರಮವಹಿಸಲಾಗುತ್ತದೆ. ಟ್ಯಾಗ್ ತುಂಡರಿಸಲು ಪ್ರಯತ್ನಿಸಿದರೆ ಸರ್ಕಾರದ ನಿಯಂತ್ರಣ ವ್ಯವಸ್ಥೆಗೆ ಅಲಾಮ್ರ್ ಸೈರನ್ ಬರಲಿದ್ದು, ಬೀಪ್ ಶಬ್ದ ಕೇಳಿಸಲಿದೆ ಎಂದು ಸಚಿವರು ತಿಳಿಸಿದರು.

    ಎಎಸ್​ಐ ಬಲಿ ಪಡೆದ ಕೋವಿಡ್-19: ಪೊಲೀಸರಲ್ಲೂ ಮಡುಗಟ್ಟಿದೆ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts