More

    ವೈದ್ಯ ದಂಪತಿಗೆ ಕರೊನಾ, ಇವರ ಬಳಿ ಚಿಕಿತ್ಸೆ ಪಡೆದ 500ಕ್ಕೂ ಹೆಚ್ಚು ಜನರಿಗೆ ಢವಢವ!

    ರಾಮನಗರ: ಕನಕಪುರದಲ್ಲಿ ವೈದ್ಯ ದಂಪತಿಗೆ ಸೋಂಕು ದೃಢಪಟ್ಟಿದ್ದು, ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ. ಇವರ ಬಳಿ ಚಿಕಿತ್ಸೆ ಪಡೆದ ನೂರಾರು ಮಂದಿಗೆ ಸೋಂಕಿನ ಭೀತಿ ಆವರಿಸಿದೆ.

    ಸೋಂಕಿತ ವೈದ್ಯೆ ಸ್ತ್ರೀರೋಗ ತಜ್ಞರಾಗಿದ್ದು, ಇವರ ಬಳಿ ಗರ್ಭಿಣಿಯರೇ ಹೆಚ್ಚಾಗಿ ಚಿಕಿತ್ಸೆಗೆ ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಗುರುವಾರದ ಸಂಜೆ ಹೊತ್ತಿಗೆ ಖಾಸಗಿ ಆಸ್ಪತ್ರೆ ಸಿಬ್ಬಂದಿ, ವೈದ್ಯರ ಕುಟುಂಬ ಸದಸ್ಯರು ಹಾಗೂ ಚಿಕಿತ್ಸೆ ಪಡೆದ ರೋಗಿಗಳು ಸೇರಿ ಒಟ್ಟು 507 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಇವರಲ್ಲಿ 27 ಮಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಇದನ್ನೂ ಓದಿರಿ ಬಿಜೆಪಿ ಕಚೇರಿಯಲ್ಲಿ ಆರ್.ಶಂಕರ್​ ಗಳಗಳನೇ ಅತ್ತಿದ್ದೇಕೆ?

    ಸೋಮವಾರ 90 ವರ್ಷದ ವೃದ್ಧರೊಬ್ಬರು ಕೋವಿಡ್​ 19 ಸೋಂಕಿಗೆ ಬಲಿಯಾಗಿದ್ದರು. ಸಾವಿಗೂ ಮುನ್ನ ವೃದ್ಧರು ಕನಕಪುರದ ಎಂ.ಜಿ. ರಸ್ತೆಯಲ್ಲಿರುವ ಖಾಸಗಿ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯ ದಂಪತಿಯನ್ನು ಕ್ವಾರಂಟೈನ್​ ಮಾಡಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಇದೀಗ ದಂಪತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದಲ್ಲದೆ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದು, ಕ್ವಾರಂಟೈನ್​ಗೆ ಒಳಗಾಗಿದ್ದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಮತ್ತೊಂದೆಡೆ ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಕನಕಪುರ ನಗರಸಭೆ, ಜೂ.6ರಿಂದ ಇಲ್ಲಿಯವರೆಗೆ ಈ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆದಿರುವ ಎಲ್ಲರೂ ಸ್ವಯಂಪ್ರೇರಿತರಾಗಿ ಕ್ವಾರಂಟೈನ್​ಗೆ ಒಳಗಾಗಬೇಕು ಹಾಗೂ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಿದೆ.

    ಇದನ್ನೂ ಓದಿರಿ ಇಂಚರ ಗೋವಿಂದರಾಜುಗೆ ಜೆಡಿಎಸ್​ ಟಿಕೆಟ್​ ಕೊಟ್ಟಿದ್ದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್​…

    ಜಿಲ್ಲೆಯಲ್ಲಿ ಗುರುವಾರ ವೈದ್ಯ ದಂಪತಿ ಸೇರಿ 9 ಮಂದಿಗೆ ಕರೊನಾ ಪಾಸಿಟಿವ್​ ದೃಢಪಟ್ಟಿದೆ. ಈ ಪೈಕಿ ಮಾಗಡಿಯಲ್ಲಿ 4 ಮತ್ತು ಕನಕಪುರದಲ್ಲಿ 5 ಪ್ರಕರಣ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿದೆ.

    ಮಾಗಡಿಯಲ್ಲಿ ಸೋಂಕು ದೃಢಪಟ್ಟಿದ್ದ ಮೆಕಾನಿಕ್​ನ ಸಂಪರ್ಕದಲ್ಲಿದ್ದ ಕುಟುಂಬದ ನಾಲ್ವರು ಸದಸ್ಯರಲ್ಲೂ ಕರೊನಾ ಪತ್ತೆಯಾಗಿದೆ. ಮೆಕಾನಿಕ್​ನ ತಂದೆ, ತಾಯಿ, ಹೆಂಡತಿ ಮತ್ತು ಮಗುವಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ರಾಮನಗರದ ಕೋವಿಡ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಇದನ್ನೂ ಓದಿರಿ ನಾಲ್ವರನ್ನು ಪರಿಷತ್​ ಅಖಾಡಕ್ಕಿಳಿಸಿದ ಬಿಜೆಪಿ, ಕಟೀಲ್​ರಿಂದ ಗುರುವಿನ ಗುಣಗಾನ

    ನಾಲ್ವರನ್ನು ಪರಿಷತ್​ ಅಖಾಡಕ್ಕಿಳಿಸಿದ ಬಿಜೆಪಿ, ಕಟೀಲ್​ರಿಂದ ಗುರುವಿನ ಗುಣಗಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts