More

    ಮತ್ತೆ ಸಾವಿರದ ಗಡಿ ದಾಟಿದ ಕೋವಿಡ್​: ರಾಜ್ಯದಲ್ಲಿ ಇವತ್ತೊಂದೇ ದಿನ 1033 ಪ್ರಕರಣ; ಆ ಪೈಕಿ ಬೆಂಗಳೂರಲ್ಲೇ ಅತ್ಯಧಿಕ!

    ಬೆಂಗಳೂರು: ನಿನ್ನೆಯಷ್ಟೇ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಒಮಿಕ್ರಾನ್​ ಒಂದೇ ಸಲಕ್ಕೆ ತೀವ್ರ ಹೆಚ್ಚಳ ಕಂಡಿದ್ದು, ಇದೀಗ ಕರೊನಾ ಪ್ರಕರಣದಲ್ಲೂ ದೊಡ್ಡ ಏರಿಕೆ ಕಂಡಿದ್ದು, ಆತಂಕದ ವಾತಾವರಣ ಮೂಡಿಸಿದೆ.

    ಸುಮಾರು ಮೂರೂವರೆ ತಿಂಗಳ ಬಳಿಕ ಮತ್ತೆ ದೈನಂದಿನ ಕೋವಿಡ್​ ಕೇಸ್​ ಸಾವಿರವನ್ನು ದಾಟಿದೆ. ಇವತ್ತೊಂದೇ ದಿನ ರಾಜ್ಯದಲ್ಲಿ 1033 ಕೋವಿಡ್​ ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿನ ಸಕ್ರಿಯ ಕೋವಿಡ್-19 ಪ್ರಕರಣ 9386ಕ್ಕೆ ತಲುಪಿದೆ.

    ಇದನ್ನೂ ಓದಿ: ಹಿಂದಕ್ಕೆ ಬಂದ ಹಿಟಾಚಿ ವಾಹನ, ಮರಳಿ ಬಾರದ ಲೋಕಕ್ಕೆ 3 ವರ್ಷದ ಮಗು; ತಂದೆಯ ಜೊತೆಗಿದ್ದಾಗಲೇ ದುರಂತ..

    ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ವಿಪರೀತ ಎಂಬಂತಿದೆ. ಅಂದರೆ ರಾಜ್ಯದಲ್ಲಿ 1033 ಪ್ರಕರಣಗಳ ಪೈಕಿ ಬೆಂಗಳೂರು ಒಂದರಲ್ಲೇ 810 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಸೆ.17ರಂದು 1003 ಕೋವಿಡ್​ 19 ದೃಢಪಟ್ಟಿತ್ತು. ಅದಾದ ಮೇಲೆ ಇಂದು ಕೋವಿಡ್ ಮತ್ತೆ ಸಾವಿರದ ಗಡಿ ದಾಟಿದ್ದು, ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ.

    ಜಗತ್ತಿನಲ್ಲಿ ಕಳೆದ ವರ್ಷ ಒಟ್ಟು 45 ಪತ್ರಕರ್ತರ ಕೊಲೆ!; ಇದು ಸಮಾಧಾನದ ಸಂಗತಿ, ಏಕೆಂದರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts