More

    ಕರೊನಾಕ್ಕೆ ರಾಜ್ಯದಲ್ಲಿ ಇಬ್ಬರು ವೃದ್ಧರ ಬಲಿ: 28 ಹೊಸ ಪ್ರಕರಣ

    ಬೆಂಗಳೂರು: ಕರೊನಾ ಸೋಂಕು ಇಂದು ರಾಜ್ಯದಲ್ಲಿ ಎರಡು ಬಲಿ ಪಡೆದಿದೆ. ಬೆಂಗಳೂರಿನ ನಿವಾಸಿಯಾಗಿದ್ದ ಆಂಧ್ರಪ್ರದೇಶದ ಅನಂತಪುರ ಮೂಲಕ 60 ವರ್ಷದ ವ್ಯಕ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 80 ವರ್ಷದ ವೃದ್ಧೆ ಇಂದು ಸೋಂಕಿನಿಂದ ಮೃತಪಟ್ಟಿದ್ದಾರೆ.

    ಇದನ್ನೂ ಸೇರಿಸಿ, ಇಲ್ಲಿಯವರೆಗೆ ಕರೊನಾ ಹೆಮ್ಮಾರಿಗೆ ಕರ್ನಾಟಕದಲ್ಲಿ ಒಟ್ಟು 35 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ ಒಟ್ಟು 28 ಹೊಸ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ ಇಂದಿನವರೆಗೆ 987ಕ್ಕೆ ಏರಿದೆ. ಇವರ ಪೈಕಿ 460 ಮಂದಿ ಈಗಾಗಲೇ ಬಿಡುಗಡೆ ಹೊಂದಿದ್ದಾರೆ.

    ಇದನ್ನೂ ಓದಿ: ಕರೊನಾ ಸೇವೆಯಲ್ಲಿ ತೊಡಗಿದ್ದ ವೈದ್ಯೆಗೆ “ಮನೆ ಬಿಟ್ಟು ತೊಲಗು” ಎಂದ ಸ್ಥಳೀಯರು!

    ಉಳಿದಿರುವ 491 ವ್ಯಕ್ತಿಗಳ ಪೈಕಿ 482 ಸೋಂಕಿತರು ಸಾಮಾನ್ಯ ವಾರ್ಡ್​ಗಳಲ್ಲಿ ಹಾಗೂ ಒಂಬತ್ತು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮುಂಬೈ ಮತ್ತು ಅಹಮದಾಬಾದ್​ನಿಂದ ಬಂದವರು ಹಾಗೂ ಕಂಟೈನ್​ಮೆಂಟ್​ ಝೋನ್​ ಸಂಪರ್ಕಕ್ಕೆ ಬಂದವರಲ್ಲಿ ಸೋಂಕು ಹೆಚ್ಚಳವಾಗುತ್ತಲೇ ಇದೆ.

    ಇದನ್ನೂ ಓದಿ: ಕರೊನಾ ಸಂಕಷ್ಟ- ಒಂದು ವರ್ಷ ಶೇ.30ರಷ್ಟು ಸಂಬಳ ಬಿಡಲಿದ್ದಾರೆ ರಾಷ್ಟ್ರಪತಿ: ಇತರ ಖರ್ಚುವೆಚ್ಚಕ್ಕೂ ಬ್ರೇಕ್​

    ಕಳೆದ 24 ಗಂಟೆಗಳ ಅವಧಿಯಲ್ಲಿ ಬೀದರ್​ನಲ್ಲಿ 7, ಬೆಂಗಳೂರು ನಗರದಲ್ಲಿ 3, ಗದಗದಲ್ಲಿ 4, ಬೆಳಗಾವಿಯಲ್ಲಿ 1, ದಾವಣಗೆರೆಯಲ್ಲಿ 2, ಬಾಗಲಕೋಟೆಯಲ್ಲಿ 1, ಮಂಡ್ಯದಲ್ಲಿ 1, ಕಲಬುರಗಿಯಲ್ಲಿ 2 ಹೊಸ ಸೋಂಕು ಕಾಣಿಸಿಕೊಂಡಿದೆ.

    ಉಳಿದ ವಿವರ ಈ ಕೆಳಗಿನಂತಿದೆ:

    ಕರೊನಾಕ್ಕೆ ರಾಜ್ಯದಲ್ಲಿ ಇಬ್ಬರು ವೃದ್ಧರ ಬಲಿ: 28 ಹೊಸ ಪ್ರಕರಣ ಕರೊನಾಕ್ಕೆ ರಾಜ್ಯದಲ್ಲಿ ಇಬ್ಬರು ವೃದ್ಧರ ಬಲಿ: 28 ಹೊಸ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts