More

    ಮಕ್ಕಳ ಬೆನ್ನುಹತ್ತಿದೆ ಕರೊನಾ ಮಾರಿ: ಇದೀಗ ಸೌದಿಯೂ ನೀಡಿದೆ ದೊಡ್ಡ ಶಾಕ್​!

    ಬೆಂಗಳೂರು: ಕರ್ನಾಟಕಕ್ಕೆ ಹೊರರಾಜ್ಯಗಳು ದುಬಾರಿಯಾಗಿ ಪರಿಣಮಿಸಿಬಿಟ್ಟಿದೆ. ದಿನೇ ದಿನೇ ಹೊರರಾಜ್ಯಗಳಿಂದ ಬರುತ್ತಿರುವ ಸೋಂಕಿತರ ಸಂಖ್ಯೆ ಕ್ಷಿಪ್ರವಾಗಿ ಏರುತ್ತಲೇ ಸಾಗಿದೆ. ಅರ್ಧ ದಿನದಲ್ಲಿಯೇ ಅಂದರೆ ನಿನ್ನೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯದಲ್ಲಿ 116 ಪ್ರಕರಣಗಳು ಪತ್ತೆಯಾಗಿವೆ.

    ಈ ಮೂಲಕ ಸೋಂಕಿತರ ಸಂಖ್ಯೆ 1578ಕ್ಕೆ ಏರಿದೆ. ಈ ಪೈಕಿ 570 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದರೆ, 966 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈರಸ್​ ಇದಾಗಲೇ 41 ಮಂದಿಯ ಪ್ರಾಣವನ್ನು ಪಡೆದಿದೆ.

    ಇಂದು ಬಾಗಲಕೋಟೆಯಿಂದ ಆರು ಮಂದಿ, ದಾವಣಗೆರೆಯಿಂದ ಐವರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂರು ಮಂದಿ ಗುಣಮುಖರಾಗಿ ಹೋಗಿದ್ದಾರೆ.

    ಇದನ್ನೂ ಓದಿ: ಸ್ಮಾರ್ಟ್​ಫೋನ್​ನಲ್ಲಿ ಕರೊನಾ ಕುರಿತ ಸಂದೇಶ ಕ್ಲಿಕ್​ ಮಾಡುವ ಮುನ್ನ ಎಚ್ಚರ… ಎಚ್ಚರ… ಸಿಬಿಐ ವಾರ್ನಿಂಗ್​!

    ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಪತ್ತೆಯಾಗಿರುವ ಹೊಸ ಪ್ರಕರಣಗಳ ಪೈಕಿ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದು ಮಹಾರಾಷ್ಟ್ರ ರಾಜ್ಯದಿಂದ ಬಂದವರಲ್ಲಿ. ಅದನ್ನು ಹೊರತುಪಡಿಸಿದರೆ, ರಾಜಸ್ಥಾನ, ಜಾರ್ಖಂಡ್​, ತಮಿಳುನಾಡು, ತೆಲಂಗಾಣದಿಂದ ಬಂದವರಲ್ಲಿಯೂ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ. ಅದರಲ್ಲಿಯೂ 10 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಲ್ಲಿಯೂ ಸೋಂಕಿನ ಪ್ರಮಾಣ ಅಧಿಕವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಇದೂ ಸಾಲದು ಎಂಬುದಕ್ಕೆ ಇದೀಗ ಸೌದಿ ಅರೇಬಿಯಾದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿರುವ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಹೊರರಾಜ್ಯಗಳ ತಲೆನೋವನ್ನು ಭರಿಸಲಾಗದ ಕರುನಾಡು, ಇದೀಗ ಹೊರ ದೇಶಗಳ ಸೋಂಕಿತರನ್ನೂ ತನ್ನ ಮಡಿಲಿಗೆ ಸೇರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ.

    ಇದನ್ನೂ ಓದಿ:  ಆನ್​ಲೈನ್​ ಮದ್ಯಪ್ರಿಯರಿಗೆ ಬಿತ್ತಲ್ಲಪ್ಪೋ ಗಾಳ! ಎಣ್ಣೆ ಕುಡಿಯುವ ಮೊದಲೇ ಏರಿಬಿಟ್ಟಿತು ನಶೆ…

    ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಹೊಸ ಸೋಂಕು ಪತ್ತೆಯಾಗಿರುವ ವಿವರ ಇಂತಿದೆ:
    ಉಡುಪಿ- 16, ಮಂಡ್ಯ- 15, ಹಾಸನ-11, ಬಳ್ಳಾರಿ- 11, ಬೆಳಗಾವಿ-9, ಉತ್ತರ ಕನ್ನಡ-9, ಬೆಂಗಳೂರು ನಗರ -7, ದಕ್ಷಿಣ ಕನ್ನಡ- 6, ಶಿವಮೊಗ್ಗ-6, ಧಾರವಾಡ-5, ದಾವಣಗೆರೆ-3, ಗದಗ-2, ಹಾಸನ- 2, ಚಿಕ್ಕಬಳ್ಳಾಪುರ-2, ವಿಜಯಪುರ-1, ಮೈಸೂರು-1, ತುಮಕೂರು-1.

    ಹೆಚ್ಚಿನ ವಿವರ ಈ ಕೆಳಗಿನಂತಿದೆ.

    ಮಕ್ಕಳ ಬೆನ್ನುಹತ್ತಿದೆ ಕರೊನಾ ಮಾರಿ: ಇದೀಗ ಸೌದಿಯೂ ನೀಡಿದೆ ದೊಡ್ಡ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts